More

    ಇರಾನ್​-ಇಸ್ರೇಲ್​ ಯುದ್ಧ ಭೀತಿ: ಸತತ ಮೂರನೇ ದಿನವೂ ಷೇರು ಸೂಚ್ಯಂಕ ಕುಸಿತ

    ಮುಂಬೈ: ದುರ್ಬಲ ಜಾಗತಿಕ ಪ್ರವೃತ್ತಿಗಳು ಮತ್ತು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುವ ಆತಂಕಗಳ ನಡುವೆ ಐಟಿ ಷೇರುಗಳಲ್ಲಿನ ಭಾರೀ ಮಾರಾಟದಿಂದ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಮಂಗಳವಾರ ಕುಸಿತವನ್ನು ಮುಂದುವರಿಸಿದವು.

    ವಿದೇಶಿ ನಿಧಿಯ ಹೊರಹರಿವು ಹೂಡಿಕೆದಾರರ ಭಾವನೆಯನ್ನು ಕುಗ್ಗಿಸಿತು. ಮೂರನೇ ದಿನದಲ್ಲಿಯೂ ಸೂಚ್ಯಂಕ ತನ್ನ ಕುಸಿತವನ್ನು ಮುಂದುವರಿಸಿತು. ಮಂಗಳಾರ 30-ಷೇರುಗಳ ಬಿಎಸ್‌ಇ ಸೂಚ್ಯಂಕ 456.10 ಅಂಕಗಳು ಅಥವಾ ಶೇಕಡಾ 0.62 ಕುಸಿದು 72,943.68 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ಅವಧಿಯಲ್ಲಿ, ಇದು 714.75 ಅಂಕಗಳು ಅಥವಾ ಶೇಕಡಾ 0.97ರಷ್ಟು ಕುಸಿದು 72,685.03 ಕ್ಕೆ ತಲುಪಿತ್ತು.

    ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 124.60 ಅಂಕಗಳು ಅಥವಾ 0.56 ರಷ್ಟು ಕುಸಿತ ಕಂಡು 22,147.90ಕ್ಕೆ ತಲುಪಿತು. ಪ್ರಮುಖ ಷೇರುಗಳಾದ ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ವಿಪ್ರೋ, ಎಚ್‌ಸಿಎಲ್ ಟೆಕ್ನಾಲಜೀಸ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಪ್ರಮುಖವಾಗಿ ಹಿನ್ನಡೆ ಕಂಡವು.

    ಟೈಟಾನ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ, ಐಟಿಸಿ, ಪವರ್ ಗ್ರಿಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿದವು.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡವು. ಐರೋಪ್ಯ ಮಾರುಕಟ್ಟೆಗಳು ಹಿನ್ನಡೆ ಅನುಭವಿಸಿದವು. ಅಮೆರಿಕದ ವಾಲ್ ಸ್ಟ್ರೀಟ್ ಸೋಮವಾರ ನಷ್ಟ ಅನುಭವಿಸಿತು.

    ಇರಾನ್‌ನ ವಾರಾಂತ್ಯದ ದಾಳಿಗೆ ತನ್ನ ದೇಶವು ಪ್ರತಿಕ್ರಿಯಿಸುತ್ತದೆ ಎಂದು ಇಸ್ರೇಲ್‌ನ ಮಿಲಿಟರಿ ಮುಖ್ಯಸ್ಥರು ಸೋಮವಾರ ಹೇಳಿದ್ದಾರೆ, ಆದರೆ, ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರದ ಸುರುಳಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 3,268 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಸೋಮವಾರ 845.12 ಅಂಕಗಲು ಅಥವಾ ಶೇಕಡಾ 1.14 ರಷ್ಟು ಕುಸಿದು 73,399.78 ಕ್ಕೆ ಮುಟ್ಟಿತ್ತು. ಎನ್‌ಎಸ್‌ಇ ನಿಫ್ಟಿ 246.90 ಅಂಕಗಳು ಅಥವಾ 1.10 ರಷ್ಟು ಕುಸಿತ ಕಂಡು 22,272.50ಕ್ಕೆ ತಲುಪಿತ್ತು.

    1 ಲಕ್ಷವಾಯ್ತು 23 ಕೋಟಿ ರೂಪಾಯಿ: ಸಕ್ಕರೆ ಉದ್ಯಮದ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಹಣದ ಸುರಿಮಳೆ

    ಮುಖೇಶ್ ಅಂಬಾನಿ ದೊಡ್ಡ ಪಾಲುದಾರಿಕೆ: ಚಾಕೊಲೇಟ್ ಷೇರು 20% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್

    1 ಲಕ್ಷವಾಯ್ತು 60 ಲಕ್ಷ: 3 ವರ್ಷದಲ್ಲಿ 6000% ಏರಿಕೆ ಕಂಡ ಸ್ಟಾಕ್​ ಬೆಲೆ, ಕಂಪನಿ ಸಂಗ್ರಹಿಸುತ್ತಿದೆ ರೂ. 5 ಸಾವಿರ ಕೋಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts