More

    ಇಸ್ರೇಲ್ ದಾಳಿಯಿಂದ ಹಾನಿಗೊಳಗಾದ ಇರಾನ್ ವಾಯು ರಕ್ಷಣಾ ವ್ಯವಸ್ಥೆ!

    ಟೆಹ್ರಾನ್‌: ಇರಾನ್ ದಾಳಿಗೆ ಪ್ರತಿಯಾಗಿ ಇಸ್ರೇಲ್​ ನಡೆಸಿದ ದಾಳಿಯಲ್ಲಿ ಇಸ್ಫಹಾನ್‌ನಲ್ಲಿರುವ ವಾಯುನೆಲೆ ಹಾನಿಗೀಡಾಗಿದೆ. ಇಸ್ರೇಲ್​ ದಾಳಿಯನ್ನು ಕಡಿಮೆ ಮಾಡುವುದಕ್ಕೆ ಅಗತ್ಯ ಕ್ರಮಗಳನ್ನು ಇರಾನ್​ ತೆಗೆದುಕೊಳ್ಳುತ್ತಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ‘ಛಾನ್ಸ್​ ಕೊಟ್ರೆ ನನಗೇನು ಕೊಡ್ತೀಯಾ?’…ಹೀಗೆಂದ ಟಾಪ್ ಹೀರೋಗೆ ನಟಿ ಹೇಳಿದ್ದೇನು? ಕಡೆಗೆ ‘ಛಾನ್ಸ್​’ ಏನಾಯ್ತು?

    8ನೇ ಶೇಕಾರಿ ವಾಯುನೆಲೆಯ ಮೇಲಿನ ದಾಳಿಯು ಶತೃ ವಿಮಾನಗಳ ಗುರಿ ಮತ್ತು ಚಲನೆಯನ್ನು ನಿಖರವಾಗಿ ಪತ್ತೆಹಚ್ಚಲು ಇರುವ ಎಸ್​-300 ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಬಳಸಲಾಗುವ “ಫ್ಲಾಪ್-ಲಿಡ್” ರಾಡಾರ್ ಅನ್ನು ಇಸ್ರೇಲ್​ ನಾಶಪಡಿಸಿರುವುದನ್ನು ಉಪಗ್ರಹ ಚಿತ್ರಗಳು ತೋರಿಸುತ್ತವೆ.

    ಟೆಹ್ರಾನ್‌ ಕಳೆದ ವಾರ ನಡೆಸಿದ ದಾಳಿಗೆ ಇಸ್ರೇಲ್‌ ಪ್ರತಿಕ್ರಿಯೆ ನೀಡಿದ್ದರೂ, ಇರಾನ್‌ನ ವಿದೇಶಾಂಗ ಸಚಿವರು, ಇಸ್ಫಹಾನ್ ನಗರದ ವಾಯು ನೆಲೆ ಮೇಲೆ ಇಸ್ರೇಲ್ ಉಡಾವಣೆ ಮಾಡಿದ ಡ್ರೋನ್‌ಗಳು “ಆಟಿಕೆ ವಸ್ತು”ಗಳಂತಿದ್ದವು ಮತ್ತು ಅವು ಯಾವುದೇ ಹಾನಿ ಅಥವಾ ಸಾವುನೋವು ಉಂಟುಮಾಡಿಲ್ಲ ಎಂದು ಹೇಳಿದ್ದರು.

    ಈಗ ನಾಶವಾಗಿರುವ ರಾಡಾರ್ ಕ್ಷಿಪಣಿಗಳನ್ನು ಹೊತ್ತಿದ್ದ ನಾಲ್ಕು ಟ್ರಕ್‌ಗಳ ಪಕ್ಕದಲ್ಲಿ ಇತ್ತು. ಆದರೆ ದಾಳಿ ನಂತರ ಅವುಗಳನ್ನು ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts