More

  ಸಿಇಟಿ ಗೊಂದಲಕ್ಕೆ ಕಾರಣರಾದವರ ಅಮಾನತಿಗೆ ಎಬಿವಿಪಿ ಆಗ್ರಹ

  ಬೆಂಗಳೂರು ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ನೀಡಿ ಸಿಇಟಿ ಗೊಂದಲಕ್ಕೆ ಕಾರಣವಾಗಿರುವವರನ್ನು ಅಮಾನತು ಮಾಡಬೇಕೆಂದು ಎಬಿವಿಪಿ ಆಗ್ರಹಿಸಿದೆ.

  ರಾಜ್ಯಾದ್ಯಂತ ಏ.18 ಮತ್ತು 19ರಂದು ನಡೆದಿದ್ದ ಸಿಇಟಿ 4 ವಿಷಯಗಳಿಂದ 50ಕ್ಕೂ ಹೆಚ್ಚಿನ ಪ್ರಶ್ನೆಗಳು ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ನೀಡಿರುವುದನ್ನು ಉನ್ನತ ಶಿಕ್ಷಣ ಇಲಾಖೆಯು ಒಪ್ಪಿಕೊಂಡಿದೆ. ಇದನ್ನು ಆಧರಿಸಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಆಯ್ಕೆಮಾಡಿರುವ ವ್ಯಕ್ತಿಗಳನ್ನು ಮತ್ತು ಈ ಗೊಂದಲಗಳಿಗೆ ಕಾರಣವಾಗಿರುವ ಕೆಇಎ ನಿರ್ದೇಶಕರನ್ನು ಅಮಾನತು ಮಾಡಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

  ಸಿಇಟಿ ಪರೀಕ್ಷೆಯನ್ನು ಯಾವುದೇ ಪೂರ್ವ ತಯಾರಿ ಇಲ್ಲದೆಯೇ ಮಾಡಿ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದೊಂದಿಗೆ ಚೆಲ್ಲಾಟವಾಡುತ್ತಿದೆ. ಕೆಇಎ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದು ಇತ್ತೀಚಿನ ಅವಾಂತರಗಳಿಂದ ಕಂಡುಬರುತ್ತಿದೆ. ಆದ್ದರಿಂದ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿರುವ ಕೆಇಎ ನಿರ್ದೇಶಕರನ್ನು ಮತ್ತು ಇನ್ನಿತರ ಬೇಜವಾಬ್ದಾರಿ ನಡೆಗೆ ಕಾರಣವಾದ ಅಧಿಕಾರಿಗಳನ್ನು ವಜಾಗೊಳಿಸಬೇಕು. ಹಾಗೆಯೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

  ಪರೀಕ್ಷಾ ಪ್ರಾಧಿಕಾರಕ್ಕೆ ಬೇಕಾದ ಸೂಕ್ತ ಮೂಲ ಸೌಕರ್ಯ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು, ಕೌಶಲಯುತ ಸಿಬ್ಬಂದಿಯನ್ನು ನೀಡಿ ಸಂಸ್ಥೆಯ ಗೌರವ, ಘನತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ಉನ್ನತ ಶಿಕ್ಷಣ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿ ಅವರಲ್ಲಿ ದಕ್ಷಿಣ ಪ್ರಾಂತದ ರಾಜ್ಯ ಕಾರ್ಯದರ್ಶಿ ಪ್ರವೀಣ್ ವಿನಂತಿ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts