More

    1 ಲಕ್ಷವಾಯ್ತು 23 ಕೋಟಿ ರೂಪಾಯಿ: ಸಕ್ಕರೆ ಉದ್ಯಮದ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಹಣದ ಸುರಿಮಳೆ

    ಮುಂಬೈ: ಸಕ್ಕರೆ ಉದ್ಯಮದ ಸ್ಮಾಲ್​ ಕ್ಯಾಪ್ ಕಂಪನಿಯಾದ ಪಿಕ್ಕಾಡಿಲಿ ಆಗ್ರೋ ಇಂಡಸ್ಟ್ರೀಸ್ (Piccadily Agro Industries) ಷೇರುಗಳ ಬೆಲೆ ನಿರಂತರ ಏರಿಕೆ ಕಾಣುತ್ತಿವೆ. ಮಂಗಳವಾರವೂ ಈ ಸ್ಟಾಕ್‌ನಲ್ಲಿ 5% ರಷ್ಟು ಏರಿಕೆಯಾಗಿ, ರೂ 430.25ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು.

    ಈ ಕಂಪನಿಯ ಷೇರುಗಳು ಹೂಡಿಕೆದಾರರಿಗೆ ಬಲವಾದ ಆದಾಯ ನೀಡಿವೆ. ಈ ಸ್ಟಾಕ್​ ದೀರ್ಘಾವಧಿಯಲ್ಲಿ 2,38,927% ನಷ್ಟು ಆದಾಯವನ್ನು ನೀಡಿದೆ. ಈ ಷೇರಿನ ಬೆಲೆ ಫೆಬ್ರವರಿ 2003 ರಲ್ಲಿ 18 ಪೈಸೆ ಆಗಿತ್ತು. ಅಂದು 1 ಲಕ್ಷ ರೂ.ಗಳನ್ನು ಈ ಸ್ಟಾಕ್​ನಲ್ಲಿ ಹೂಡಿಕೆ ಮಾಡಿ ಈಗಲೂ ಮುಂದುವರಿಸಿದ್ದರೆ, ಅದರ ಮೊತ್ತವು ಈಗ 23 ಕೋಟಿ ರೂ. ಆಗುತ್ತಿತ್ತು.

    ಕಳೆದ ಮೂರು ವರ್ಷಗಳಲ್ಲಿ ಈ ಸ್ಟಾಕ್​ ಬೆಲೆ ಶೇಕಡಾ 3825 ರಷ್ಟು ಹೆಚ್ಚಳವಾಗಿದೆ. ಮಾರ್ಚ್ 2021 ರಲ್ಲಿ ಈ ಷೇರಿನ ಬೆಲೆ ರೂ. 10.9 ಆಗಿತ್ತು, ಅದು ಈಗ ರೂ. 430.25 ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ಕಳೆದ 1 ವರ್ಷದಲ್ಲಿ ಇದು ಶೇಕಡಾ 849 ರಷ್ಟು ಹೆಚ್ಚಾಗಿದೆ. ಈ ವರ್ಷದ ಆರಂಭದಿಂದ ಈ ಸ್ಟಾಕ್ ಇದುವರೆಗೆ 56 ಪ್ರತಿಶತದಷ್ಟು ಏರಿದೆ.

    ಮಾರ್ಚ್‌ನಲ್ಲಿ ಶೇಕಡಾ 16 ಕ್ಕಿಂತ ಹೆಚ್ಚು ಕುಸಿದ ನಂತರ ಏಪ್ರಿಲ್‌ನಲ್ಲಿ ಇಲ್ಲಿಯವರೆಗೆ ಸ್ಟಾಕ್ 42 ಶೇಕಡಾಕ್ಕಿಂತ ಹೆಚ್ಚಾಗಿದೆ. ಏತನ್ಮಧ್ಯೆ, ಇದು ಫೆಬ್ರವರಿಯಲ್ಲಿ ಶೇಕಡಾ 21 ಕ್ಕಿಂತ ಹೆಚ್ಚು ಮತ್ತು 2024 ರ ಜನವರಿಯಲ್ಲಿ ಶೇಕಡಾ 8 ಕ್ಕಿಂತ ಹೆಚ್ಚಾಗಿದೆ. ಸ್ಟಾಕ್ ಮಾರ್ಕೆಟ್ ವಿಶ್ಲೇಷಕ ಕಂಪನಿಯಾದ ಮಾರ್ಕೆಟ್ಸ್ ಮೋಜೋ, ಈ ಷೇರಿಗೆ ‘ಖರೀದಿ’ ರೇಟಿಂಗ್ ನೀಡಿದೆ.

    ಮುಖೇಶ್ ಅಂಬಾನಿ ದೊಡ್ಡ ಪಾಲುದಾರಿಕೆ: ಚಾಕೊಲೇಟ್ ಷೇರು 20% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್

    1 ಲಕ್ಷವಾಯ್ತು 60 ಲಕ್ಷ: 3 ವರ್ಷದಲ್ಲಿ 6000% ಏರಿಕೆ ಕಂಡ ಸ್ಟಾಕ್​ ಬೆಲೆ, ಕಂಪನಿ ಸಂಗ್ರಹಿಸುತ್ತಿದೆ ರೂ. 5 ಸಾವಿರ ಕೋಟಿ

    ಕೇವಲ 15 ನಿಮಿಷಗಳಲ್ಲಿಯೇ ಹೌಸಿಂಗ್​ ಫ್ಲ್ಯಾಟ್​ಗಳ ಮಾರಾಟ: ಷೇರು ಬೆಲೆ ತಕ್ಷಣವೇ ಗಗನಕ್ಕೆ ಜಿಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts