More

    ಹಿಂದೆಂದೂ ಬಳಸದ ಡೆಡ್ಲಿ ವೆಪನ್ಸ್​ ಬಳಸಬೇಕಾಗುತ್ತೆ! ಇಸ್ರೇಲ್​​ ಸೇಡಿನ ಮಾತಿಗೆ ಇರಾನ್​ ಬೆದರಿಕೆ

    ತೆಹ್ರಾನ್: ಇರಾನ್​ನ ಡ್ರೋನ್ಸ್​ ಹಾಗೂ ಕ್ಷಿಪಣಿ ದಾಳಿಗೆ ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತೇವೆ ಎನ್ನುವ ಮೂಲಕ ಪ್ರತೀಕಾರದ ಮಾತುಗಳನ್ನಾಡಿರುವ ಇಸ್ರೇಲ್​ಗೆ ಪ್ರತಿಕ್ರಿಯಿಸಿರುವ ಇರಾನ್​, ಹಿಂದೆಂದು ಬಳಸಿರದ ಮಾರಕ ಶಸ್ತ್ರಾಸ್ತ್ರಗಳನ್ನು ಬಳಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.

    ಶನಿವಾರ (ಏಪ್ರಿಲ್ 13) ತಡರಾತ್ರಿ ಇರಾನ್, ಇಸ್ರೇಲ್​ ಗುರಿಯಾಗಿಸಿಕೊಂಡು​ 300ಕ್ಕೂ ಅಧಿಕ ಕ್ಷಿಪಣಿಗಳನ್ನು ಉಡಾಯಿಸಿತು. ಈ ದಾಳಿಯ ಕುರಿತು ಸೋಮವಾರ ಪ್ರತಿಕ್ರಿಯೆ ನೀಡಿರುವ ಇಸ್ರೇಲ್​ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ, ಇರಾನ್​ ದಾಳಿಗೆ ನಾವು ಪ್ರತಿದಾಳಿ ಮಾಡುತ್ತೇವೆ. ಪ್ರಧಾನಿ ಬೆಂಜಮಿನ್​ ನೇತುನ್ಯಾಹು ಅವರ ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.

    ಇದೇ ಸಂದರ್ಭದಲ್ಲಿ ಇಸ್ರೇಲ್​ ಪ್ರತೀಕಾರದ ಮಾತಿಗೆ ಇರಾನ್​ ಕೂಡ ಪ್ರತಿಕ್ರಿಯೆ ನೀಡಿದೆ. ಇಸ್ರೇಲ್​ನಿಂದ ಯಾವುದೇ ದಾಳಿ ನಡೆದರೂ ಇರಾನ್​ ಪ್ರತಿದಾಳಿ ನಡೆಸಲಿದೆ. ಅಷ್ಟೇ ಅಲ್ಲದೇ ಅಗತ್ಯಬಿದ್ದರೆ ಹಿಂದೆಂದು ಬಳಸಿರದ ಮಾರಕ ಶಸ್ತ್ರಾಸ್ತ್ರಗಳನ್ನು ಸಹ ನಾವು ಬಳಸಲಿದ್ದೇವೆ ಎಂದಿದೆ ಮತ್ತು ಪ್ರತಿಕ್ರಿಯಿಸಲು ಕೆಲವೇ ಸೆಕೆಂಡ್​ಗಳು ಸಾಕು ಎಂದಿದೆ.

    ಇರಾನ್​ ದಾಳಿಗೆ ಕಾರಣವೇನು?
    ಕಳೆದ ಸೋಮವಾರ ಶಂಕಿತ ಇಸ್ರೇಲಿ ಯುದ್ಧವಿಮಾನಗಳು ಸಿರಿಯಾದಲ್ಲಿರುವ ಇರಾನ್​ ರಾಯಭಾರ ಕಚೇರಿಯ ಮೇಲೆ ಬಾಂಬ್​ ದಾಳಿ ನಡೆಸಿದ ಪ್ರತೀಕಾರವಾಗಿ ಇರಾನ್​ನಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಇಸ್ರೇಲ್​ ನಡೆಸಿದ ದಾಳಿಯಲ್ಲಿ ಮೂವರು ಹಿರಿಯ ಕಮಾಂಡರ್​ಗಳು ಸೇರಿದಂತೆ ಏಳು ಮಿಲಿಟರಿ ಸಲಹೆಗಾರರನ್ನು ಇಸ್ರೇಲ್​ ಕೊಂದಿದೆ ಎಂದು ಇರಾನ್​ ಆರೋಪ ಮಾಡಿದೆ. ಈ ಘಟನೆಯೇ ಇಸ್ರೇಲ್​ ಮೇಲಿನ ದಾಳಿಗೆ ಪ್ರಚೋದನೆಯಾಗಿದೆ ಎನ್ನಲಾಗಿದೆ.

    ಇರಾನ್​ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ತನ್ನ ಕ್ಯಾಬಿನೆಟ್ ಸಭೆ ಕರೆದರು. ಈ ವೇಳೆ ಅವರು ಇರಾನ್​ ವಿರುದ್ಧದ ಪ್ರತೀಕಾರದ ಬಗ್ಗೆ ಚರ್ಚಿಸಲು ತಿಳಿಸಿದರು. ಇದರ ನಡುವೆ ಯುಎಸ್ ಉನ್ನತ ಅಧಿಕಾರಿ ಸ್ಟೀವ್ ಸ್ಕಾಲಿಸ್ ಜತೆ ದೂರವಾಣಿಯಲ್ಲಿ ಮಾತನಾಡಿರುವ ನೆತನ್ಯಾಹು, ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

    ಆದರೆ, ಈ ಸಂಘರ್ಷವನ್ನು ಇನ್ನಷ್ಟು ಉಲ್ಬಣಗೊಳಿಸದಂತೆ ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಒತ್ತಡವಿದೆ. ವಿಶಾಲ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಲು ಬಯಸುತ್ತಿರುವ ಇಸ್ರೇಲ್ ಈ ಸಂದರ್ಭದಲ್ಲಿ ಕೊಂಚ ಸಂಯಮ ತೋರಿಸಬೇಕೆಂದು ಯುಎಸ್ ಸೇರಿದಂತೆ ಹಲವಾರು ದೇಶಗಳು ಒತ್ತಾಯಿಸಿವೆ. ನಾವು ಇರಾನ್‌ನೊಂದಿಗೆ ಯುದ್ಧ ಹಾಗೂ ಪ್ರಾದೇಶಿಕ ಸಂಘರ್ಷವನ್ನು ನೋಡಲು ಬಯಸುವುದಿಲ್ಲ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಹೀಗಾಗಿ ಇಸ್ರೇಲ್​ ಏನು ಮಾಡಬೇಕೆಂಬ ಚಿಂತೆಯಲ್ಲಿ ಮುಳುಗಿದೆ. (ಏಜೆನ್ಸೀಸ್​)

    ಟ್ರಾವಿಸ್​​​ ಹೆಡ್​ ವಿನೂತನ ಶತಕ ಆಚರಣೆಯ ಹಿಂದಿರುವ ಅರ್ಥ ಗೊತ್ತಾ? ಆರ್​ಸಿಬಿ ವಿರುದ್ಧದ ಸೇಡಿಗಿದೆ ಲಿಂಕ್​!

    ಬಾಲಿವುಡ್​ ಬ್ಯೂಟಿ ಮಲೈಕಾರ ಖಾಸಗಿ ಕ್ಷಣದ ವಿಡಿಯೋ ಸೆರೆ! ನಿಮಗೆ ನಾಚಿಕೆ ಆಗಲ್ವಾ ಅಂದ್ರು ನೆಟ್ಟಿಗರು

    ಅಯ್ಯೋ ದುರ್ವಿಧಿಯೇ! ಅಯೋಧ್ಯೆಯಲ್ಲಿ ಬೈಕ್​ಗೆ ನೀಲಗಾಯ್​ ಡಿಕ್ಕಿ, ಸವಾರನ ಎದೆ ಸೀಳಿದ ಕೊಂಬು, ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts