More

    ಟ್ರಾವಿಸ್​​​ ಹೆಡ್​ ವಿನೂತನ ಶತಕ ಆಚರಣೆಯ ಹಿಂದಿರುವ ಅರ್ಥ ಗೊತ್ತಾ? ಆರ್​ಸಿಬಿ ವಿರುದ್ಧದ ಸೇಡಿಗಿದೆ ಲಿಂಕ್​!

    ಬೆಂಗಳೂರು: ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡದ ಬ್ಯಾಟಿಂಗ್ ಬಿರುಗಾಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ರನ್​ ಮಳೆಯಿಂದ ಮುಳುಗಡೆಯಾಗಿತ್ತು. ಎಸ್‌ಆರ್​ಎಚ್ ಬ್ಯಾಟ್ಸ್‌ಮನ್‌ಗಳು ಸೃಷ್ಟಿಸಿದ ಸುನಾಮಿಯಲ್ಲಿ ಆರ್‌ಸಿಬಿ ಬೌಲರ್‌ಗಳು ಕೊಚ್ಚಿಹೋದರು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ​ ಹಿಂದೆಂದೂ ಕಂಡಿರದ ದೊಡ್ಡ ಸ್ಪೋಟಕ ಆಟವೆಂದೇ ಹೇಳಬಹುದು. ಮೊದಲ ಎಸೆತದಿಂದ ಕೊನೆಯ ಎಸೆತದವರೆಗೂ ಸನ್ ರೈಸರ್ಸ್ ಬ್ಯಾಟ್ಸ್​ಮನ್​ಗಳು ಮಾಸ್ ಹಿಟ್ಟಿಂಗ್ ಮೂಲಕ ಶಿವತಾಂಡವ ಮಾಡಿದರು.

    ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 287 ರನ್ ಗಳಿಸಿತು. ಈ ಮೂಲಕ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರರ್ ಎಂಬ ಹೆಗ್ಗಳಿಕೆಗೆ ತಂಡ ಪಾತ್ರವಾಯಿತು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರ ಶತಕವೇ ತಂಡದ ಇನ್ನಿಂಗ್ಸ್​ನ ಹೈಲೈಟ್.

    ಹೆಡ್ ಅವರು 41 ಎಸೆತಗಳಲ್ಲಿ 102 ರನ್ ಗಳಿಸಿದರು. 39 ಎಸೆತಗಳಲ್ಲಿ ಶತಕದ ಗಡಿ ತಲುಪಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 8 ಬೃಹತ್ ಸಿಕ್ಸರ್‌ಗಳಿವೆ. ಯಾವುದೇ ಬೌಲರ್‌ಗಳನ್ನು ಲೆಕ್ಕಿಸದೆ ವಿನಾಶಕಾರಿ ಬ್ಯಾಟಿಂಗ್ ಮಾಡಿದರು. ವೇಗದ ಶತಕ ಬಾರಿಸಿದ ಹೆಡ್​, ಅದನ್ನು ವಿನೂತನವಾಗಿ ಆಚರಿಸಿದರು. ಹೆಲ್ಮೆಟ್ ಕಳಚಿ, ಅದನ್ನು ಬ್ಯಾಟ್​ ಹಿಡಿಗೆ ಸಿಲುಕಿಸಿ ವಿನೂತನವಾಗಿ ಆಚರಣೆ ಮಾಡಿದರು. ಇದನ್ನು ನೋಡಿದವರು ಏನಿದರ ಅರ್ಥ ಎಂದು ಚಿಂತಿಸುತ್ತಿದ್ದಾರೆ. ಆದರೆ, ಇದೇ ರೀತಿಯ ಆಚರಣೆಯನ್ನು ಮೊದಲು ಮಾಡಿದ್ದು, ಹೆಡ್​ ಅಲ್ಲ, ಯೂನಿವರ್ಸಲ್ ಬಾಸ್ ಕ್ರಿಸ್ ​ಗೇಲ್.

    ಹೌದು, ಕ್ರಿಸ್​ ಗೇಲ್ ಶತಕ ಬಾರಿಸಿದ ನಂತರ ಇದೇ ರೀತಿ ಸಂಭ್ರಮಿಸುತ್ತಿದ್ದರು. ಅದನ್ನೇ ಈಗ ಹೆಡ್​ ಮರು ಆಚರಿಸಿದ್ದಾರೆ. ಆದರೆ, ಇದರ ಹಿಂದೆ ಒಂದು ಕಾರಣವಿದೆ. ಹೆಡ್​ ಅವರು ಹಿಂದೊಮ್ಮೆ ಆರ್‌ಸಿಬಿ ಪರ ಆಡಿದ್ದರು. ಆದರೆ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಮುಂದಿನ ಸೀಸನ್​ನಲ್ಲಿ ಅವರನ್ನು ತಂಡದಿಂದ ತೆಗೆದುಹಾಕಲಾಯಿತು. ಈ ಸೇಡನ್ನು ನಿನ್ನೆ ಹೆಡ್​ ತೀರಿಸಿಕೊಂಡಿದ್ದಾರೆ. ಅದೂ ಕೂಡ ಬೆಂಗಳೂರಿನ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಅಷ್ಟೇ ಏಕೆ ಈ ಶತಕದ ನಂತರ ಆ ತಂಡದ ಮಾಜಿ ಬ್ಯಾಟ್ಸ್​ಮನ್ ಗೇಲ್ ಅವರನ್ನು ಅನುಕರಿಸುವ ಮೂಲಕ ಆರ್​ಸಿಬಿಗೆ ತಿರುಗೇಟು ನೀಡಿದರು. ಹೆಡ್​ ಅವರ ಆಚರಣೆಯ ಬಗ್ಗೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮಾಡಿ.

    ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಸನರೈಸರ್ಸ್​, ಟ್ರಾವಿಸ್​ ಹೆಡ್​ ಮತ್ತು ಅಭಿಷೇಕ್​ ಶರ್ಮ (34) ಹಾಕಿಕೊಟ್ಟ ಭದ್ರ ಅಡಿಪಾಯ ಹಾಗೂ ಹೆನ್ರಿಕ್​ ಕ್ಲಾಸೆನ್​ ಅರ್ಧಶತಕದ ಬಲದಿಂದ 3 ವಿಕೆಟ್​ಗೆ 287 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಾಯಕ ಫಾಫ್​ ಡು ಪ್ಲೆಸಿಸ್​ (62 ರನ್​, 28 ಎಸೆತ, 7 ಬೌಂಡರಿ, 4 ಸಿಕ್ಸರ್​) ಹಾಗೂ ವಿರಾಟ್​ ಕೊಹ್ಲಿ (42 ರನ್​, 20 ಎಸೆತ, 6 ಬೌಂಡರಿ, 2 ಸಿಕ್ಸರ್​) ಒದಗಿಸಿದ ಬಿರುಸಿನ ಆರಂಭ ಹಾಗೂ ಅನುಭವಿ ಬ್ಯಾಟರ್​ ದಿನೇಶ್​ ಕಾರ್ತಿಕ್​ (83 ರನ್​,35 ಎಸೆತ, 5 ಬೌಂಡರಿ, 7 ಸಿಕ್ಸರ್​) ಪ್ರತಿರೋಧದ ಹೊರತಾಗಿಯೂ ಆರ್​ಸಿಬಿ ತಂಡ 7 ವಿಕೆಟ್​ಗೆ 262 ರನ್​ಗಳಿಸಲಷ್ಟೇ ಶಕ್ತವಾಯಿತು. ಇದು ಐಪಿಎಲ್​ನಲ್ಲಿ ಚೇಸಿಂಗ್​ ವೇಳೆ ತಂಡವೊಂದು ಪೇರಿಸಿದ ಸರ್ವಾಧಿಕ ಮೊತ್ತದ ದಾಖಲೆಯಾಗಿದೆ. (ಏಜೆನ್ಸೀಸ್​)

    ನಾನೇನಾದ್ರೂ ಅಲ್ಲಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ: ಕಾಮೆಂಟರಿ ನಡುವೆ ಸ್ಟಾರ್​ ಕ್ರಿಕೆಟಿಗನ ವಿರುದ್ಧ ಭಜ್ಜಿ ಆಕ್ರೋಶ

    ಹಿಟ್​ಮ್ಯಾನ್​ ರೋಹಿತ್​ ಶರ್ಮಗಾಗಿ ನನ್ನ ಜೀವನವನ್ನೇ ಪಣಕ್ಕಿಡುತ್ತೇನೆ ಅಂದಿದ್ದೇಕೆ ಪ್ರೀತಿ ಝಿಂಟಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts