More

    ಕಾಶ್ಮೀರ ಥರ ನಮ್ಮ ನೆಲದಲ್ಲೂ ಲಿಥಿಯಂ ಇದೆ ಎಂದ ಇರಾನ್…

    ನವದೆಹಲಿ: ಪಶ್ಚಿಮ ಪ್ರಾಂತ್ಯದ ಹಮೆದಾನ್ ನಲ್ಲಿರುವ ನಿಕ್ಷೇಪದಲ್ಲಿ ಸುಮಾರು 8.5 ಮಿಲಿಯನ್ ಮೆಟ್ರಿಕ್ ಟನ್ ಲಿಥಿಯಂ ಅದಿರು ಇದೆ ಎಂದು ಇರಾನಿನ ಕೈಗಾರಿಕಾ, ಗಣಿ ಮತ್ತು ವ್ಯಾಪಾರ ಸಚಿವಾಲಯದ (ಎಂಐಎಂಟಿ) ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿರುವ ಬಗ್ಗೆ ಇರಾನ್ ನ ಸರ್ಕಾರಿ ಸ್ವಾಮ್ಯದ ಸುದ್ದಿ ನೆಟ್ ವರ್ಕ್ ಪ್ರೆಸ್ ಟಿವಿ ವರದಿ ಮಾಡಿದೆ.

    ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ವಿಶ್ವದ ಅತಿದೊಡ್ಡ ಗುರುತಿಸಲ್ಪಟ್ಟ ಲಿಥಿಯಂ ಸಂಪನ್ಮೂಲಗಳು (ಇರಾನ್ ಅನ್ನು ಬಿಟ್ಟು) ಹೀಗಿದೆ: ಬೊಲಿವಿಯಾ, 21 ಮಿಲಿಯನ್ ಟನ್; ಅರ್ಜೆಂಟೀನಾ, 20 ಮಿಲಿಯನ್ ಟನ್; ಚಿಲಿ, 11 ಮಿಲಿಯನ್ ಟನ್; ಆಸ್ಟ್ರೇಲಿಯಾ, 7.9 ಮಿಲಿಯನ್ ಟನ್; ಚೀನಾ, 6.8 ಮಿಲಿಯನ್ ಟನ್. ಭಾರತದಲ್ಲಿ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ 5.9 ಮಿಲಿಯನ್ ಟನ್ ಲಿಥಿಯಂ ಸಂಪನ್ಮೂಲಗಳನ್ನು ಪತ್ತೆ ಮಾಡಲಾಗಿತ್ತು.

    ಇಂದಿನ ಜಗತ್ತಿನಲ್ಲಿ ಲಿಥಿಯಂನ ಪ್ರಾಮುಖ್ಯತೆ ಏನು?

    ಲಿಥಿಯಂ ಆಧುನಿಕ ಜೀವನದಲ್ಲಿ ಸರ್ವವ್ಯಾಪಿಯಾಗಿದೆ. ಮೊಬೈಲ್ ಫೋನ್ ಗಳಿಂದ ಇವಿಗಳವರೆಗೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಕಂಡುಬರುತ್ತದೆ. ಮೂಲಭೂತವಾಗಿ, ರೀಚಾರ್ಜ್ ಮಾಡಬಹುದಾದ ಬ್ಯಾಟರಿ ಅಗತ್ಯವಿರುವ ಎಲ್ಲಾ ಸಾಧನಗಳಲ್ಲೂ ಇದು ಕಂಡುಬರುತ್ತದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts