More

    ಅಂಜುಗೆ ಬಂಪರ್​ ಗಿಫ್ಟ್​ ಕೊಟ್ಟ ಪಾಕ್​ ಉದ್ಯಮಿ: ಉಡುಗೊರೆ ಹಿಂದಿರುವ ಅಸಲಿ ಕಾರಣವೇ ಬೇರೆ!

    ನವದೆಹಲಿ: ಪಾಕಿಸ್ತಾನದ ಫೇಸ್​ಬುಕ್​ ಫ್ರೆಂಡ್​ನನ್ನು ಮದುವೆಯಾಗಿ ಅಲ್ಲಿಯೇ ಉಳಿದುಕೊಂಡಿರುವ ಭಾರತದ ಅಂಜುಗೆ, ಅಲ್ಲಿನ ಉದ್ಯಮಿಯೊಬ್ಬ ನಿವೇಶನ ಹಾಗೂ ಉದ್ಯೋಗದ ಆಫರ್​ ನೀಡಿರುವುದಾಗಿ ತಿಳಿದುಬಂದಿದೆ. ಅಂಜು, ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಉದ್ಯಮಿ ಈ ಉಡುಗೊರೆಯನ್ನು ನೀಡಿದ್ದಾನೆ. ಇದರ ಹಿಂದಿನ ಉದ್ದೇಶ ಮತಾಂತರಕ್ಕೆ ಪ್ರೇರಣೆ ಎನ್ನುವುದು ಉದ್ಯಮಿ ಆಡಿರುವ ಮಾತಿನಿಂದಲೇ ತಿಳಿಯುತ್ತದೆ.

    ಪಾಕ್​ ಸ್ಟಾರ್​ ಗ್ರೂಪ್​ ಕಂಪನಿಯ ಸಿಇಒ ಮೊಹ್ಸಿನ್​ ಖಾನ್​ ಅಬ್ಬಾಸಿ, ತಮ್ಮ ಕಂಪನಿಯಲ್ಲಿ ಅಂಜುಗೆ ಉದ್ಯೋಗ ನೀಡಲಿದ್ದಾರೆ. ಆಕೆಗೆ ಯಾವುದೇ ಸಮಸ್ಯಗಳಿಲ್ಲದೆ, ಪಾಕಿಸ್ತಾನವನ್ನು ತನ್ನ ಸ್ವಂತ ಮನೆ ಅಂದುಕೊಂಡು ಆರಾಮದಾಯಕವಾಗಿ ಜೀವಿಸಲು ಈ ನೆರವು ನೀಡುತ್ತಿರುವುದಾಗಿ ತಿಳಿಸಿದ್ದಾರೆ.

    ತನ್ನ ಫೇಸ್​ಬುಕ್​ ಸ್ನೇಹಿತ ನಸ್ರುಲ್ಲನನ್ನು ಮದುವೆಯಾಗಿರುವ ಅಂಜು ಇದೀಗ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಫಾತಿಮಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾಳೆ. ಸದ್ಯ ಪಾಕ್​ನಲ್ಲಿಯೇ ಇರುವ ಅಂಜುಗೆ ಕೆಲಸ ನೀಡಲು ಉದ್ಯಮಿ ಅಬ್ಬಾಸಿ ಕಂಪನಿಯ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ. ಅಲ್ಲದೆ, ಆಕೆಗೆ 272 ಚದರ ಅಡಿ ನಿವೇಶವನ್ನೂ ನೀಡಿ ಮನೆಯನ್ನು ಕಟ್ಟಿಕೊಡಲಾಗುತ್ತದೆ. ಭಾರತದಿಂದ ಫಾತಿಮಾ ಅವರ ದಾಖಲೆಗಳ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ, ಪಾಕ್ ಸ್ಟಾರ್ ಗ್ರೂಪ್ ಕಂಪನಿಯ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಉದ್ಯೋಗವನ್ನು ನೀಡುತ್ತೇವೆ ಎಂದು ಅಬ್ಬಾಸಿ ಹೇಳಿದ್ದಾರೆ.

    ಇದನ್ನೂ ಓದಿ: ಅಕ್ಕಿ ರಫ್ತು ನಿಷೇಧ, ಭತ್ತ ಖರೀದಿ ನೀತಿ ರೂಪಿಸಲು ಸಕಾಲ: ನಿರೀಕ್ಷಿತ ಇಳುವರಿ ಕುಸಿತದ ಅಡ್ಡ ಪರಿಣಾಮ ನಿಯಂತ್ರಣ

    ಸರ್ಕಾರ ಮತ್ತು ಇತರೆ ಶ್ರೀಮಂತರಿಗೆ ಕರೆ

    ಅಂಜು ಮತ್ತು ನಸ್ರುಲ್ಲಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಅಬ್ಬಾಸಿ, ಉಭಯ ಕುಶಲೋಪರಿ ನಡೆಸಿದರು. ಅಲ್ಲದೆ, ದಂಪತಿಗೆ ನಿವೇಶನದ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಚೆಕ್​ ಮೂಲಕ ಹಣದ ನೆರವು ಸಹ ನೀಡಿದ್ದಾರೆ. ಫಾತಿಮಾ ಮತ್ತು ನಸ್ರುಲ್ಲ ಕುಟುಂಬವನ್ನು ಬೆಂಬಲಿಸುವಂತೆ ಅಬ್ಬಾಸಿ ಪಾಕಿಸ್ತಾನದ ಸರ್ಕಾರ ಮತ್ತು ದೇಶದ ಇತರ ಶ್ರೀಮಂತ ಉದ್ಯಮಿಗಳನ್ನು ಕೇಳಿಕೊಂಡಿದ್ದಾರೆ. ಅಲ್ಲದೆ, ದಂಪತಿಗೆ ಉಡುಗೊರೆಗಳನ್ನು ನೀಡುವಂತೆಯೂ ಅವರು ಕರೆ ನೀಡಿದರು.

    ಇಸ್ಲಾಂ ಧರ್ಮ ಸೇರಲು ಪ್ರೇರಣೆ

    ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಮತ್ತು ನಸ್ರುಲ್ಲನನ್ನು ಮದುವೆಯಾಗಲು ಭಾರತದಲ್ಲಿರುವ ತನ್ನ ಮನೆ ಮತ್ತು ಕುಟುಂಬವನ್ನು ತೊರೆದು ಪಾಕ್​ ಬಂದಿರುವ ಆಕೆಯನ್ನು ಸ್ವಾಗತಿಸುವ ಮಹತ್ವವನ್ನು ಅಬ್ಬಾಸಿ ಒತ್ತಿ ಹೇಳಿದರು. ಆಕೆಯ ಈ ಪ್ರಯಾಣವು ಇತರರಿಗೆ ಇಸ್ಲಾಂ ಧರ್ಮವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಹೇಳುವ ಮೂಲಕ ಅಬ್ಬಾಸಿ ಉಡುಗೊರೆ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟರು.

    ಅಧಿಕೃತ ವೀಸಾದಲ್ಲಿ ಪಾಕ್​ ಪ್ರಯಾಣ

    ಪಾಕಿಸ್ತಾನಕ್ಕೆ ತೆರಳಿರುವ ಅಂಜು (34) ಉತ್ತರ ಪ್ರದೇಶದ ಕೈಲೋರ್​ ಗ್ರಾಮದಲ್ಲಿ ಜನಿಸಿದಳು. ಆದರೆ, ರಾಜಸ್ಥಾನದ ಅಲ್ವಾರ್​ನಲ್ಲಿ ವಾಸವಿದ್ದಳು. ಅಂಜು ಮತ್ತು ಪಾಕಿಸ್ತಾನದ ನಸ್ರುಲ್ಲ (29) 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾದರು. ಪರಿಚಯ ಪ್ರೀತಿಗೆ ತಿರುಗಿದ ಬಳಿಕ ಪ್ರಿಯಕರನನ್ನು ಅರಸಿ ಅಂಜು ಪಾಕ್​ಗೆ ಹೋಗಿದ್ದಾಳೆ. ನಸ್ರುಲ್ಲನನ್ನು ಭೇಟಿಯಾಗಲು ಅಧಿಕೃತ ಪಾಕಿಸ್ತಾನ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿದ್ದಾಳೆ.

    ಇದನ್ನೂ ಓದಿ: ಹೆಂಡತಿ-ಮಕ್ಕಳನ್ನು ನೋಡಿಕೊಳ್ಳುವುದು ಗಂಡನ ಕರ್ತವ್ಯ: ಕುರಾನ್ ಉಲ್ಲೇಖಿಸಿ ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

    ಹೇಳಿದ್ದೊಂದು ಮಾಡಿದ್ದು ಇನ್ನೊಂದು

    ಅಂಜು ಆಗಮನದ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ನಸ್ರುಲ್ಲ ಪ್ರತಿಕ್ರಿಯೆ ನೀಡಿ, ಅಂಜುವಿನ ವೀಸಾ ಅವಧಿ ಮುಗಿದ ನಂತರ ಅಂದರೆ, ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ ಎಂದಿದ್ದ. ಅಲ್ಲದೆ ತಮ್ಮ ನಡುವೆ ನಡುವೆ ಯಾವುದೇ ಪ್ರೇಮ ಸಂಬಂಧ ಇಲ್ಲ. ಆಕೆಯನ್ನು ಮದುವೆ ಆಗುವ ಯಾವುದೇ ಆಲೋಚನೆಯೂ ಇಲ್ಲ ಎಂದು ಹೇಳಿದ್ದ. ವಿಜ್ಞಾನ ಪದವೀಧರರಾಗಿರುವ ನಸ್ರುಲ್ಲ, ತಮ್ಮ ಸ್ನೇಹಕ್ಕೆ ಯಾವುದೇ ಪ್ರೀತಿಯ ಆಯಾಮವಿಲ್ಲ ಎಂದು ಸ್ಥಳೀಯ ಅಧಿಕಾರಿಗಳಿಗೆ ಅಫಿಡವಿಟ್ ಸಹ ಸಲ್ಲಿಸಿದ್ದ. ಆದರೆ, ಇದೀಗ ತನ್ನ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾನೆ. ಅಂಜುಳನ್ನು ಮದುವೆ ಆಗಿದ್ದಾನೆ. ಅಲ್ಲದೆ, ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರ ಸಹ ಆಗಿದ್ದಾಳೆ.

    ಪಾಕಿಸ್ತಾನ ಹೊಗಳಿದ ಅಂಜು

    ನಸ್ರುಲನನ್ನು ವರಿಸಿರುವ ಅಂಜು ಇದೀಗ ಪಾಕಿಸ್ತಾನವನ್ನು ಹೊಗಳಿದ್ದಾಳೆ. ಬ್ಯೂಟಿಫುಲ್​ ಪಾಕಿಸ್ತಾನ ಎಂಬ ಟ್ವಿಟರ್​ ಪೇಜ್​ನಲ್ಲಿ ವಿಡಿಯೋವೊಂದು ಪೋಸ್ಟ್​ ಆಗಿದ್ದು, ಅದರಲ್ಲಿ ಪಾಕಿಸ್ತಾನದಲ್ಲಿರುವ ಭಾರತದ ಸುಂದರ ಯುವತಿ ಪಾಕಿಸ್ತಾನವನ್ನು ಸುಂದರ ದೇಶದ ಎಂದಿದ್ದಾಳೆ ಎಂದು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಅಂಜು ಮತ್ತು ನಸ್ರುಲ್ಲ ಪಾಕಿಸ್ತಾನದ ವಿವಿಧ ತಾಣಗಳಲ್ಲಿ ರೊಮ್ಯಾಂಟಿಕ್​ ಆಗಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. (ಏಜೆನ್ಸೀಸ್​)

    ಬುರ್ಖಾ ಧರಿಸಿ ಪ್ರಿಯಕರನ ಜತೆ ಊಟ ಸವಿಯುತ್ತಿರುವ ಅಂಜು: ವಿಡಿಯೋ ವೈರಲ್​

    ಮಂಡ್ಯದ ವಿಸಿ ನಾಲೆಯಲ್ಲಿ 3 ದಿನದ ಅಂತರದಲ್ಲಿ 2 ದುರಂತ: ನೆಂಟರನ್ನು ಕರೆಯಲು ಹೋದವರು ದುರ್ಮರಣ

    ವ್ಯಾಘ್ರಗಳ ನೆಲೆಯಲ್ಲಿ ಬಂಡೀಪುರವೇ ಅಗ್ರ; ಹುಲಿ ಗಣತಿ ವರದಿ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts