More

    ವ್ಯಾಘ್ರಗಳ ನೆಲೆಯಲ್ಲಿ ಬಂಡೀಪುರವೇ ಅಗ್ರ; ಹುಲಿ ಗಣತಿ ವರದಿ ಬಿಡುಗಡೆ

    | ಕಿರಣ್ ಮಾದರಹಳ್ಳಿ, ಚಾಮರಾಜನಗರ 
    ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದೊಳಿರುವ ಬಂಡೀಪುರವೆಂಬ ಕಾಡಿನ ಹುಲಿಗಳ ಪರಿಯನೆಂತು ಪೇಳ್ವೆನು… ಇದು ಗೋವಿನ ಹಾಡಲ್ಲ. ದೇಶದ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳ ಪಟ್ಟಿಯಲ್ಲಿ 2ನೇ ಸ್ಥಾನ ಮತ್ತು ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಬಂಡೀಪುರದಲ್ಲಿ ಕೇಳಿಸುತ್ತಿರುವ ವ್ಯಾಘ್ರಗೀತೆ. ವಿಶ್ವ ಹುಲಿ ದಿನದ ಅಂಗವಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಶನಿವಾರ ಅಂಕಿ-ಅಂಶ ಬಿಡುಗಡೆ ಮಾಡಿದೆ.

    ಉತ್ತರಾಖಂಡದ ಜಿಮ್ ಕಾರ್ಬೆಡ್​ನಲ್ಲಿ 319 ಹುಲಿಗಳಿದ್ದು, ಇದನ್ನು ಬಿಟ್ಟರೆ ಅಧಿಕವಾಗಿ ಅಂದರೆ ಬಂಡೀಪುರದಲ್ಲಿ 191 ಹುಲಿಗಳಿವೆ. ಜತೆಗೆ ರಾಜ್ಯದ ಭದ್ರಾ ಅರಣ್ಯ ಪ್ರದೇಶದಲ್ಲಿ 44 ಹುಲಿಗಳು, ಕಾಳಿ ಅರಣ್ಯದಲ್ಲಿ 29 ಹುಲಿಗಳು, ನಾಗರಹೊಳೆ ಕಾಡಿನಲ್ಲಿ 185 ಹುಲಿಗಳಿವೆ. ಜಿಲ್ಲೆಯ ಬಿಆರ್​ಟಿ ಅರಣ್ಯದಲ್ಲಿ 60 ಹುಲಿಗಳಿದ್ದರೆ, ಬಂಡೀಪುರದಲ್ಲಿ 191 ವ್ಯಾಘ್ರಗಳಿರುವುದರಿಂದ ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡಿದೆ.

    ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ 2ನೇ ಸ್ಥಾನ ಪಡೆದಿರುವುದು ಸಂತಸದ ವಿಷಯ. ವಿಶ್ಲೇಷಣೆಯ ರೀತ್ಯ ರಾಜ್ಯದಲ್ಲಿ 563 ವ್ಯಾಘ್ರಗಳಿರುವುದೆಂದು ಅಂದಾಜಿಸಲಾಗಿದೆ. ಹುಲಿಗಳ ಗಣತಿ ಅತ್ಯಂತ ಕಷ್ಟಕರ ಕಾರ್ಯವಾಗಿದ್ದು, ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಲ್ಲ ಸಿಬ್ಬಂದಿ, ಹುಲಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲು ಶ್ರಮಿಸುತ್ತಿರುವ ಅರಣ್ಯ ಸಿಬ್ಬಂದಿ ಮತ್ತು ವನ್ಯಜೀವಿ ಪ್ರೇಮಿಗಳಿಗೆ ಅಭಿನಂದನೆ.

    | ಈಶ್ವರ್ ಖಂಡ್ರೆ, ಅರಣ್ಯ ಸಚಿವ

    ಈ ಬಾರಿಯೂ ರಾಜ್ಯಕ್ಕಿಲ್ಲ ನಂ.1 ಪಟ್ಟ

    ಬೆಂಗಳೂರು: ಹೆಚ್ಚು ಹುಲಿಗಳಿರುವ ರಾಜ್ಯವೆಂಬ ಪಟ್ಟ ಪಡೆಯುವಲ್ಲಿ ಕರ್ನಾಟಕಕ್ಕೆ ಈ ಬಾರಿಯೂ ನಿರಾಸೆಯಾಗಿದೆ. ಇಡೀ ದೇಶದಲ್ಲಿ ಮಧ್ಯಪ್ರದೇಶ ರಾಜ್ಯ 785 ಹುಲಿಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾನ (563), ಉತ್ತರಾಖಂಡ ತೃತೀಯ (560) ಹಾಗೂ ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ (444). ಒಟ್ಟಾರೆ ಭಾರತದಲ್ಲಿ 2018ರಲ್ಲಿದ್ದ 2,967 ವ್ಯಾಘ್ರಗಳ ಸಂಖ್ಯೆ 2022ಕ್ಕೆ 3,682ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ವಿಶ್ವದ ಶೇ.75 ವ್ಯಾಘ್ರಗಳು ಭಾರತದಲ್ಲಿರುವುದು ಈಗ ಅಧಿಕೃತವಾಗಿದೆ.

    ಅಂತಾರಾಷ್ಟ್ರೀಯ ಹುಲಿ ದಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶನಿವಾರ ಹುಲಿ ಗಣತಿ ವರದಿ ಬಿಡುಗಡೆ ಮಾಡಿದೆ. ಅರುಣಾಚಲಪ್ರದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ 29ರಿಂದ 9ಕ್ಕೆ (ಶೇ.70) ಕುಸಿತ ಕಂಡು ಆತಂಕ ಮೂಡಿಸಿದೆ.

    ಕಡಿಮೆ ಹುಲಿ ಸಂತತಿ ರಾಜ್ಯಗಳು: ಜಾರ್ಖಂಡ್ -1, ಗೋವಾ -5, ಮಿಜೋರಾಂ -0, ನಾಗಲೆಂಡ್ -0, ಅರುಣಾಚಲಪ್ರದೇಶ -9

    ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts