More

    ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

    ನವದೆಹಲಿ: ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ ಪರಿವರ್ತನೆ ಮಾಡಿಸಿಕೊಂಡ ಪ್ರಕರಣಗಳು ಸಾಕಷ್ಟು ನಡೆದಿವೆ. ಆದರೆ ಇಲ್ಲೊಂದು ಪರಿವರ್ತನೆ ಮಾತ್ರ ಅತ್ಯಪರೂಪ. ಏಕೆಂದರೆ ಜಪಾನಿನ ಈ ವ್ಯಕ್ತಿ ತನ್ನನ್ನು ನಾಯಿಗೆ ರೂಪಾಂತರ ಮಾಡಿಸಿಕೊಂಡಿದ್ದಾನೆ.

    ಟಿವಿ ಕಮರ್ಷಿಯಲ್ಸ್​ ಮತ್ತು ಸಿನಿಮಾಗಳಿಗೆ ಕಾಸ್ಟ್ಯೂಮ್ಸ್​ ತಯಾರಿಸುವ ಜಪಾನಿನ ಜೆಪೆಟ್ ಎಂಬ ಜಪಾನಿ ಈ ವ್ಯಕ್ತಿಯ ಹೈಪರ್ ರಿಯಾಲಿಸ್ಟಿಕ್ ಎನಿಸುವಂತೆ ನಾಯಿಯ ಸ್ವರೂಪ ನೀಡಿದೆ. ಫಿಗರೈನ್ಸ್​, ಬಾಡಿ ಸೂಟ್ಸ್​ ಮತ್ತು 3ಡಿ ಮಾಡೆಲ್ಸ್​ ತಯಾರಿಸುವ ಈ ಕಂಪನಿ ಇದಕ್ಕಾಗಿ 40 ದಿನಗಳನ್ನು ತೆಗೆದುಕೊಂಡಿದೆ.

    ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಜಪಾನಿನ ಟೋಕೋ ಎಂಬ ಈ ವ್ಯಕ್ತಿ ತನ್ನನ್ನು ಹೀಗೆ ನಾಯಿಯಂತೆ ಕಾಣಿಸಿಕೊಳ್ಳುವ ಹಾಗೆ ಮಾಡಿಕೊಳ್ಳಲು ಬರೋಬ್ಬರಿ 2 ಮಿಲಿಯನ್ ಯೆನ್​ ಅಂದರೆ ಸುಮಾರು 22000 ಡಾಲರ್ ಖರ್ಚು ಮಾಡಿದ್ದಾನೆ.

    ಇದನ್ನೂ ಓದಿ: ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಕೊಲಿ (collie) ಎಂಬ ತಳಿಯ ನಾಯಿಯಂತೆ ಕಾಣಿಸಿಕೊಂಡಿರುವ ಈ ವ್ಯಕ್ತಿ, ಪರಿವರ್ತನೆ ಬಳಿಕದ ವಿಡಿಯೋವೊಂದನ್ನು ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾನೆ. ಈ ಮೂಲಕ ನನ್ನ ಬಾಲ್ಯದ ಕನಸು ನನಸಾಗಿದೆ ಎಂದೂ ಆತ ಹೇಳಿಕೊಂಡಿದ್ದಾನೆ. ನನ್ನ ಕುಟುಂಬಸ್ಥರು ಹಾಗೂ ಗೆಳೆಯರು ನಾನು ಪ್ರಾಣಿಯಂತಾಗಿದ್ದಕ್ಕೆ ಅಚ್ಚರಿಗೊಂಡಿದ್ದಾರೆ. ನನ್ನ ಸ್ನೇಹಿತರಿಗೆ ನಾನು ವಿಲಕ್ಷಣವಾಗಿ ಕಾಣಿಸಬಹುದು. –ಏಜೆನ್ಸೀಸ್

    ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

    ಬೆಂಗಳೂರಲ್ಲಿ ಕಂಪನಿ ನೋಂದಣಿ ಮಾಡಿಸಿಕೊಳ್ಳಲಾಗದೆ ಅಮೆರಿಕಕ್ಕೆ ಹಿಂದಿರುಗುವೆ ಎಂದ ಉದ್ಯಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts