More

    ಬುರ್ಖಾ ಧರಿಸಿ ಪ್ರಿಯಕರನ ಜತೆ ಊಟ ಸವಿಯುತ್ತಿರುವ ಅಂಜು: ವಿಡಿಯೋ ವೈರಲ್​

    ನವದೆಹಲಿ: ಪಾಕಿಸ್ತಾನದ ಫೇಸ್​ಬುಕ್​ ಫ್ರೆಂಡ್​ನನ್ನು ಮದುವೆಯಾಗಿ ಅಲ್ಲಿಯೇ ಉಳಿದುಕೊಂಡಿರುವ ಭಾರತದ ಅಂಜು, ಬುರ್ಖಾ ಧರಿಸಿ ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ವಿಡಿಯೋವನ್ನು ಪಾಕಿಸ್ತಾನ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ನಸ್ರುಲ್ಲ ಸಾಂಪ್ರದಾಯಿಕ ಕ್ಯಾಪ್ ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಿಸುತ್ತದೆ. ಆತನ ಅನೇಕ ಸ್ನೇಹಿತರು ಸಹ ಅವರೊಂದಿಗೆ ಕುಳಿತು ಊಟ ಸವಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸದ್ಯ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

    ಪಾಕಿಸ್ತಾನಕ್ಕೆ ತೆರಳಿರುವ ಅಂಜು (34) ಉತ್ತರ ಪ್ರದೇಶದ ಕೈಲೋರ್​ ಗ್ರಾಮದಲ್ಲಿ ಜನಿಸಿದಳು. ಆದರೆ, ರಾಜಸ್ಥಾನದ ಅಲ್ವಾರ್​ನಲ್ಲಿ ವಾಸವಿದ್ದಳು. ಅಂಜು ಮತ್ತು ಪಾಕಿಸ್ತಾನದ ನಸ್ರುಲ್ಲ (29) 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾದರು. ಪರಿಚಯ ಪ್ರೀತಿಗೆ ತಿರುಗಿದ ಬಳಿಕ ಪ್ರಿಯಕರನನ್ನು ಅರಸಿ ಅಂಜು ಪಾಕ್​ಗೆ ಹೋಗಿದ್ದಾಳೆ. ನಸ್ರುಲ್ಲನನ್ನು ಭೇಟಿಯಾಗಲು ಅಧಿಕೃತ ಪಾಕಿಸ್ತಾನ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿದ್ದಾಳೆ.

    ಇದನ್ನೂ ಓದಿ: ಉಡುಪಿಯ ಟಾಯ್ಲೆಟ್​ ಪ್ರಕರಣದ ಬಗ್ಗೆ ಮಹಿಳಾ ಆಯೋಗದ ಮುಖ್ಯಸ್ಥೆ ಹೇಳಿದ್ದೇನು? ಎತ್ತ ಸಾಗುತ್ತಿದೆ ವಿವಾದ?

    ಸೋಮವಾರ ಈ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ನಸ್ರುಲ್ಲ ಪ್ರತಿಕ್ರಿಯೆ ನೀಡಿ, ಅಂಜುವಿನ ವೀಸಾ ಅವಧಿ ಮುಗಿದ ನಂತರ ಅಂದರೆ, ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ ಎಂದಿದ್ದ. ಅಲ್ಲದೆ ತಮ್ಮ ನಡುವೆ ನಡುವೆ ಯಾವುದೇ ಪ್ರೇಮ ಸಂಬಂಧ ಇಲ್ಲ. ಆಕೆಯನ್ನು ಮದುವೆ ಆಗುವ ಯಾವುದೇ ಆಲೋಚನೆಯೂ ಇಲ್ಲ ಎಂದು ಹೇಳಿದ್ದ. ವಿಜ್ಞಾನ ಪದವೀಧರರಾಗಿರುವ ನಸ್ರುಲ್ಲ, ತಮ್ಮ ಸ್ನೇಹಕ್ಕೆ ಯಾವುದೇ ಪ್ರೀತಿಯ ಆಯಾಮವಿಲ್ಲ ಎಂದು ಸ್ಥಳೀಯ ಅಧಿಕಾರಿಗಳಿಗೆ ಅಫಿಡವಿಟ್ ಸಹ ಸಲ್ಲಿಸಿದ್ದ. ಆದರೆ, ಇದೀಗ ತನ್ನ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾನೆ. ಅಂಜುಳನ್ನು ಮದುವೆ ಆಗಿದ್ದಾನೆ. ಅಲ್ಲದೆ, ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರ ಸಹ ಆಗಿದ್ದಾಳೆ.

    ನಸ್ರುಲನನ್ನು ವರಿಸಿರುವ ಅಂಜು ಇದೀಗ ಪಾಕಿಸ್ತಾನವನ್ನು ಹೊಗಳಿದ್ದಾಳೆ. ಬ್ಯೂಟಿಫುಲ್​ ಪಾಕಿಸ್ತಾನ ಎಂಬ ಟ್ವಿಟರ್​ ಪೇಜ್​ನಲ್ಲಿ ವಿಡಿಯೋವೊಂದು ಪೋಸ್ಟ್​ ಆಗಿದ್ದು, ಅದರಲ್ಲಿ ಪಾಕಿಸ್ತಾನದಲ್ಲಿರುವ ಭಾರತದ ಸುಂದರ ಯುವತಿ ಪಾಕಿಸ್ತಾನವನ್ನು ಸುಂದರ ದೇಶದ ಎಂದಿದ್ದಾಳೆ ಎಂದು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಅಂಜು ಮತ್ತು ನಸ್ರುಲ್ಲ ಪಾಕಿಸ್ತಾನದ ವಿವಿಧ ತಾಣಗಳಲ್ಲಿ ರೊಮ್ಯಾಂಟಿಕ್​ ಆಗಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

    ಅಂಜು ಈಗ ಫಾತಿಮಾ

    ಅಂಜು ಇಸ್ಲಾಮ್​ಗೆ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡು ನಸ್ರುಲ್ಲಾನನ್ನು ಮದುವೆ ಆಗಿರುವುದಾಗಿ ಪಾಕಿಸ್ತಾನದ ದೀರ್​ನ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕ್ರೈಸ್ತ ಧರ್ಮೀಯಳಾದ ಈಕೆ ಮತಾಂತರಗೊಂಡು ಫಾತಿಮಾ ಆಗಿ ಇಂದು ನಸ್ರುಲ್ಲಾನನ್ನೇ ಮದುವೆಯಾಗಿದ್ದಾಳೆ. ಸದ್ಯದಲ್ಲೇ ಇಬ್ಬರೂ ಭಾರತಕ್ಕೆ ಬರಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಮತ್ತೊಮ್ಮೆ ಬಡ ವ್ಯಕ್ತಿಗೆ ಉಚಿತ ಆಪರೇಷನ್​ ಮಾಡುವ ಮೂಲಕ ಜನ ಮನ ಗೆದ್ದ ಕುಣಿಗಲ್​ ಶಾಸಕ

    30 ದಿನಗಳವರೆಗೆ ಮಾತ್ರ ವೀಸಾ ಮಾನ್ಯತೆ

    ಪೇಶಾವರದಿಂದ ಸುಮಾರು 300 ಕಿಮೀ ದೂರದಲ್ಲಿರುವ ಅಪ್ಪರ್ ದಿರ್ ಜಿಲ್ಲೆಯ ಕುಲ್ಶೋ ಗ್ರಾಮದಿಂದ ಫೋನ್ ಮೂಲಕ ಪಾಕಿಸ್ತಾನ ಪಿಟಿಐಗೆ ನಸ್ರುಲ್ಲ ಮಾಹಿತಿ ನೀಡಿದ್ದಾರೆ. ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ಗೆ ಕಳುಹಿಸಲಾದ ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಯ ಪ್ರಕಾರ, ಅಪ್ಪರ್​ ದಿರ್‌ಗೆ ಮಾತ್ರ ಮಾನ್ಯವಾಗಿರುವ 30 ದಿನಗಳ ವೀಸಾವನ್ನು ಅಂಜುಗೆ ನೀಡಲು ನಿರ್ಧರಿಸಲಾಗಿದೆ ಎಂದು ಚಾನ್ಸರಿಗೆ ತಿಳಿಸಲಾಗಿದೆ. (ಏಜೆನ್ಸೀಸ್​)

    ಹೇಳಿದ್ದೊಂದು ಮಾಡಿದ್ದು ಇನ್ನೊಂದು! ಕೊನೆಗೂ ಪಾಕ್​ ಬುದ್ಧಿ ತೋರಿದ ನಸ್ರುಲ್ಲ, ಅಂಜು ವಿರುದ್ಧ ಜನಾಕ್ರೋಶ

    ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts