ಸಿನಿಮಾ

ಇಸ್ಲಮಾಬಾದ್​ ಹೈಕೋರ್ಟ್​ನಿಂದ ಜಾಮೀನು ಮಂಜೂರು: ಇಮ್ರಾನ್​ ಖಾನ್​ಗೆ ತಾತ್ಕಾಲಿಕ ರಿಲೀಫ್​

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಬಂಧನ ಅಸಿಂಧು ಮತ್ತು ಕಾನೂನು ಬಾಹಿರ ಎಂದು ಪಾಕ್​ ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟ ದಿನದ ಬೆನ್ನಲ್ಲೇ ಇಸ್ಲಾಮಾಬಾದ್​ ಹೈಕೋರ್ಟ್​ ಶುಕ್ರವಾರ (ಮೇ 12) ಇಮ್ರಾನ್​ ಖಾನ್​ಗೆ 2 ವಾರಗಳ ಜಾಮೀನು ಮಂಜೂರು ಮಾಡಿದೆ.

ಇಮ್ರಾನ್​ ಖಾನ್​ ಬಂಧನವನ್ನು ಇಸ್ಲಮಾಬಾದ್​ ಎತ್ತಿಹಿಡಿದಿತ್ತು. ಆದರೆ, ಸುಪ್ರೀಂಕೋರ್ಟ್​ನ ತ್ರಿಸದಸ್ಯ ಪೀಠವೂ ಇಮ್ರಾನ್​ ಖಾನ್​ ಬಂಧನವನ್ನು ಕಾನೂನು ಬಾಹಿರ ಎಂದು ಹೇಳಿ ತಕ್ಷಣ ಬಿಡುಗಡೆ ಮಾಡುವಂತೆ ಗುರುವಾರ ಆದೇಶ ಹೊರಡಿಸಿತು.

ಇದನ್ನೂ ಓದಿ: ಚುನಾವಣಾ ಫಲಿತಾಂಶಕ್ಕೂ ಮೊದಲೇ ಶಾಸಕರ ನಾಮಫಲಕ ತಂದ ಜೆಡಿಎಸ್ ಅಭ್ಯರ್ಥಿ!

ಇಂದು ನಡೆದ ವಿಚಾರಣೆ ಭದ್ರತಾ ಕಾರಣದಿಂದ ಎರಡು ಗಂಟೆ ವಿಳಂಬವಾಯಿತು. ಬೆಂಗಾವಲು ಪಡೆಯೊಂದಿಗೆ ಇಸ್ಲಮಾಬಾದ್​ ಹೈಕೋರ್ಟ್​ಗೆ ಆಗಮಿಸಿದ ಇಮ್ರಾನ್​ ಖಾನ್​ ಅವರನ್ನು ಡಜನ್​ಗಟ್ಟಲೆ ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿ ಕೋರ್ಟ್​ ಹಾಲ್​ಗೆ ಸುರಕ್ಷಿತವಾಗಿ ಕರೆದೊಯ್ದರು.

ಇದಾದ ಬಳಿಕ ಸುಪ್ರೀಂಕೋರ್ಟ್​ ನಿರ್ದೇಶನದಂತೆ ಇಮ್ರಾನ್​ ಖಾನ್​ ಅವರಿಗೆ ಇಸ್ಲಮಾಬಾದ್​ ಹೈಕೋರ್ಟ್​, ಎರಡು ವಾರಗಳ ಮಧ್ಯಂತರ ಜಾಮೀನು ನೀಡಿತು ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್​ ಖಾನ್​ ಅವರನ್ನು ಬಂಧಿಸದಂತೆ ನ್ಯಾಯಾಲಯ ಸೂಚನೆ ನೀಡಿತು. ಜಾಮೀನು ಪಡೆದು ನ್ಯಾಯಾಲಯದಿಂದ ಹೊರಬಂದ ಖಾನ್​, ತನ್ನ ಬೆಂಬಲಿಗರತ್ತ ಕೈಬೀಸಿದರು.

ಇದನ್ನೂ ಓದಿ: ಇನ್​ಸ್ಟಾಗ್ರಾಂನಿಂದ ರಿಧಮ್​ ಚಾನನ ನಾಪತ್ತೆ! ದೆಹಲಿ ಮೆಟ್ರೋ ಗರ್ಲ್​ಗೆ ಏನಾಯಿತು?

ವ್ಯಾಪಕ ಹಿಂಸಾಚಾರ

ಮಂಗಳವಾರ ಇಮ್ರಾನ್​ ಖಾನ್​ ಬಂಧನದ ನಂತರ ಪಾಕಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಇಲ್ಲಿಯವರೆಗೂ ಅನೇಕ ಸರ್ಕಾರಿ ಹಾಗು ಖಾಸಗಿ ಸ್ವತ್ತುಗಳಿಗೆ ಹಾನಿಯಾಗಿದೆ. ಪಾಕಿಸ್ತಾನದ ಹಲವೆಡೆ ಇಮ್ರಾನ್​ ಖಾನ್​ ಬೆಂಬಲಿಗರು ಕಲ್ಲುತೂರಾಟ ಹಾಗೂ ವಾಹನಗಿಳಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು. (ಏಜೆನ್ಸೀಸ್​)

ಮೀನು ತಿಂದು 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

30 ಸಾವಿರ ರೂ. ಸಂಬಳ ಪಡೆಯುವ ಇಂಜಿನಿಯರ್ ನಿವಾಸದ ಮೇಲೆ ದಾಳಿ ಪ್ರಕರಣ; 20 ಕಾರು, 100 ನಾಯಿ, 30 ಲಕ್ಷದ ದುಬಾರಿ ಟಿವಿ ಪತ್ತೆ

ದಿ ಕೇರಳ ಸ್ಟೋರಿ ಬ್ಯಾನ್: ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್​

Latest Posts

ಲೈಫ್‌ಸ್ಟೈಲ್