ಸಿನಿಮಾ

ಇನ್​ಸ್ಟಾಗ್ರಾಂನಿಂದ ರಿಧಮ್​ ಚಾನನ ನಾಪತ್ತೆ! ದೆಹಲಿ ಮೆಟ್ರೋ ಗರ್ಲ್​ಗೆ ಏನಾಯಿತು?

ನವದೆಹಲಿ: ಮಿನಿ ಸ್ಕರ್ಟ್​ ಮತ್ತು ಬ್ರಾ ಧರಿಸಿ ದೆಹಲಿ ಮೆಟ್ರೋ ರೈಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಯುವತಿ ಇನ್​ಸ್ಟಾಗ್ರಾಂನಿಂದ ನಾಪತ್ತೆಯಾಗಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ದೆಹಲಿ ಮೆಟ್ರೋ ಗರ್ಲ್​

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿತ್ತು. ವಿಡಿಯೋದಲ್ಲಿದ್ದ ಯುವತಿ ಬಾಲಿವುಡ್​ ಬಿಚ್ಚಮ್ಮ ಉರ್ಫಿ ಜಾವೇದ್​ ರೀತಿ ವಿಭಿನ್ನವಾಗಿ ಅರೆಬೆತ್ತಲೆ ಉಡುಗೆ ತೊಟ್ಟಿದ್ದಳು. ಬಿಳಿ ಬಣ್ಣದ ಸ್ಕರ್ಟ್​ ಮತ್ತು ಬ್ರಾ ಧರಿಸಿ ಜನನಿಬಿಡ ಮೆಟ್ರೋ ರೈಲಿನಲ್ಲಿ ಕಾಣಿಸಿಕೊಂಡಿದ್ದಳು. ರೈಲಿನಲ್ಲಿದ್ದ ಸಹ ಪ್ರಯಾಣಿಕರು ವಿಡಿಯೋ ಸೆರೆಹಿಡಿದು ಹಂಚಿಕೊಂಡಿದ್ದರು. ಆ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಆ ಬಳಿಕ ಆಕೆಯನ್ನು ದೆಹಲಿ ಮೆಟ್ರೋ ಗರ್ಲ್​ ಎಂದೇ ಕರೆಯತೊಡಗಿದರು. ಅಷ್ಟರಮಟ್ಟಿಗೆ ಆಕೆ ಜಾಲತಾಣದಲ್ಲಿ ವೈರಲ್​ ಆಗಿದ್ದಳು.

ಇದನ್ನೂ ಓದಿ: 1,000 ಬಾಯ್‌ಫ್ರೆಂಡ್ಸ್ ಇರುವ ಯುವತಿ ಜತೆ ಒಂದು ಗಂಟೆ ಡೇಟ್ ಮಾಡೋಕೆ 5,000 ರೂ. ಚಾರ್ಜ್!

ಅಂದಹಾಗೆ ಆ ಯುವತಿಯ ಹೆಸರು ರಿಧಮ್​ ಚಾನನ ಎಂದು. ಈಕೆ ಪಂಜಾಬ್​ನ ಫತೇಹಗಢ ಸಾಹೀಬ್ ನಗರದ ನಿವಾಸಿ. 19 ವರ್ಷದ ರಿಧಮ್​​ ಚಾನನ ದೆಹಲಿಯಲ್ಲಿ ಆಕ್ಟಿಂಗ್​ ಕೋರ್ಸ್​ ಮಾಡುತ್ತಿದ್ದಾಳೆ. ಕಲಾವಿದೆ ಆಗಬೇಕೆಂಬುದು ಆಕೆಯ ಕನಸಾಗಿದೆ. ರಿಧಮ್​ ಸಾಂಪ್ರದಾಯಿಕ ಕುಟುಂಬದಿಂದ ಬಂದವಳು. ಆರಂಭದಲ್ಲಿ ಮೈತುಂಬಾ ಬಟ್ಟೆ ಧರಿಸುತ್ತಿದ್ದಳು. ಯಾವಾಗ ಬಣ್ಣದ ಜಗತ್ತಿನ ನಂಟು ಹೆಚ್ಚಿಕೊಂಡಳು ಅಂದಿನಿಂದ ಆಕೆ ಬಟ್ಟೆಯಲ್ಲೂ ತುಂಬಾ ವ್ಯತ್ಯಾಸ ಕಂಡುಬಂದಿದೆ. 2022ರ ನವೆಂಬರ್​ ತಿಂಗಳಿಂದ ರಿಧಮ್​ ಗ್ಲಾಮರಸ್​ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

ಇನ್​ಸ್ಟಾಗ್ರಾಂ ಖಾತೆಯೇ ನಾಪತ್ತೆ

ಅಸಲಿ ವಿಚಾರ ಏನೆಂದರೆ, ಈಕೆ @prettypastry11112222 ಹೆಸರಿನಲ್ಲಿ ಇನ್​ಸ್ಟಾಗ್ರಾಂ ಖಾತೆ ಹೊಂದಿದ್ದಳು. ಆರಂಭದಲ್ಲಿ ಕೇವಲ 150 ಫಾಲೋವರ್ಸ್​ ಮಾತ್ರ ಇದ್ದರು. ಯಾವಾಗ ಈಕೆ ಮೆಟ್ರೋ ರೈಲಿನಲ್ಲಿ ಅರೆಬೆತ್ತಲೆ ಕಾಣಿಸಿಕೊಂಡು ಸುದ್ದಿಯಾದಳೋ ದಿಢೀರನೇ ಆಕೆಯ ಫಾಲೋವರ್ಸ್​ ಸಂಖ್ಯೆ 40 ಸಾವಿರ ದಾಟಿತು. ಅಲ್ಲದೆ, ಆಕೆಯ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳು ತೆರೆಯಲು ಶುರು ಮಾಡಿದರು. ಅಷ್ಟರ ಮಟ್ಟಿಗೆ ಆಕೆ ಖ್ಯಾತಿ ಗಳಿಸಿದ್ದಾಳೆ. ಆದರೆ, ಇದೀಗ ರಿಧಮ್​ ಅವರ ಇನ್​ಸ್ಟಾಗ್ರಾಂ ಖಾತೆಯೇ ನಾಪತ್ತೆಯಾಗಿದೆ.

Rithym Chanan 1

ಇದನ್ನೂ ಓದಿ: ಬಾಜಿ ಕಟ್ಟುವವರಿದ್ದರೆ ಬನ್ನಿ! ದಾವಣಗೆರೆಯಲ್ಲಿ ಚುನಾವಣಾ ಬೆಟ್ಟಿಂಗ್ ಜೋರು, ಡಂಗುರ ಸಾರಿಸಿ ಪಂಥಾಹ್ವಾನ

ಹೌದು, ಇನ್​ಸ್ಟಾಗ್ರಾಂ, ರಿಧಮ್​ ಅವರ ಖಾತೆಯನ್ನು ನಿಷೇಧಿಸಿದೆ. ಸುಮಾರು 130 ವಿಡಿಯೋಗಳನ್ನು ರಿಧಮ್​ ಪೋಸ್ಟ್​ ಮಾಡಿದ್ದರು. ಯಾವ ಕಾರಣಕ್ಕೆ ಇನ್​ಸ್ಟಾಗ್ರಾಂ ರಿಧಮ್​ ಅವರ ಖಾತೆಯನ್ನು ರದ್ದು ಮಾಡಿದೆ ಎಂದು ತಿಳಿದುಬಂದಿಲ್ಲ. ಆದರೆ, ಅರೆಬರೆ ಬಟ್ಟೆಗಳೊಂದಿಗೆ ತೀರಾ ಅಶ್ಲೀಲತೆ ಪ್ರದರ್ಶಿಸಿದ್ದರಿಂದ ಪೇಜ್​ ರದ್ದು ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

Rithym Chanan 2

ದೆಹಲಿ ಮೆಟ್ರೋ ರೈಲಿನಲ್ಲಿ ಅರೆ ಬೆತ್ತಲಾಗಿ ಕಾಣಿಸಿಕೊಂಡ ಯುವತಿಯ ಗುರುತು ಕೊನೆಗೂ ಪತ್ತೆ!

ಅಪರಿಚಿತ ಯುವಕರಿಗೆ ಫೋನ್​ ನಂಬರ್​ ಕೊಟ್ಟ ಯುವತಿಗೆ ನೆಟ್ಟಿಗರು ಹೇಳಿದ್ದಿಷ್ಟು…

CBSE 10ನೇ ತರಗತಿ ಫಲಿತಾಂಶ ಪ್ರಕಟ; ಶೇ. 93.12 ಮಂದಿ ಪಾಸ್​

Latest Posts

ಲೈಫ್‌ಸ್ಟೈಲ್