More

    CBSE 10ನೇ ತರಗತಿ ಫಲಿತಾಂಶ ಪ್ರಕಟ; ಶೇ. 93.12 ಮಂದಿ ಪಾಸ್​

    ನವದೆಹಲಿ: ಕೇಂದ್ರಿಯಾ ಫ್ರೌಡ ಶಿಕ್ಷಣ ಮಂಡಳಿ(CBSE) ನಡೆಸಿದ 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.

    ಈ ಕುರಿತು ಮಂಡಳಿಯು ತನ್ನ ಅಧಿಕೃತ ಖಾತೆಯಿಂದ ಟ್ವೀಟ್​ ಮಾಡಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ.

    ಶೇ. 93.12 ಮಂದಿ ಪಾಸ್​

    cbseresults.nic.in ಮತ್ತು cbse.gov.in. ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ. ಈ ವರ್ಷ 93.12% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

    ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸುವ ನಿಟ್ಟಿನಲ್ಲಿ ತನ್ನ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಅಥವಾ ಮೂರನೇ ಸ್ಥಾನವನ್ನು ಘೋಷಿಸುವುದಿಲ್ಲ ಎಂದು ಮಂಡಳಿ ಹೇಳಿದೆ.

    ಇದನ್ನೂ ಓದಿ: ಟಿಟಿ-ಕಾರ್​ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು

    ಸಿಬಿಎಸ್​ಇ 10ನೇ ತರಗತಿ ಫಲಿತಾಂಶವನ್ನು ಹೀಗೆ ಪರಿಶೀಲಿಸಬಹುದು

    ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಾಗ್ ಇನ್ ಆಗಿ, ಮುಖಪುಟದಲ್ಲಿ ಕಾಣುವ ಫಲಿತಾಂಶದ ಲಿಂಕ್​ ಮೇಲೆ ಕ್ಲಿಕ್​ ಮಾಡಿ. ನಂತರ ವಿದ್ಯಾರ್ಥಿಗಳು ರೋಲ್ ನಂಬರ್​, ಅಡ್ಮಿಟ್​ ಕಾರ್ಡ್ ಐಡಿ, ಶಾಲಾ ಸಂಖ್ಯೆಯನ್ನು ನಮೂದಿಸಿ ಫಲಿತಾಂಶವನ್ನ ಪರಿಶೀಲಿಸಬಹುದು. ಅಲ್ಲದೇ, ಫಲಿತಾಂಶಗಳು ಡಿಜಿಲಾಕರ್‌ನಲ್ಲಿಯೂ ಲಭ್ಯವಿರುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts