More

  ತಿಂಗಳಿಗೆ 30 ಸಾವಿರ ರೂ. ಸಂಬಳ; ಆಸ್ತಿ ಮೌಲ್ಯ 7 ಕೋಟಿ ರೂ. ಮಹಿಳಾ ಅಧಿಕಾರಿ ಕಮಾಲ್!

  ಭೋಪಾಲ್‌: ಅಕ್ರಮ ಆಸ್ತಿ ಪ್ರಕರಣದಲ್ಲಿ ಮಧ್ಯಪ್ರದೇಶ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ (ಗುತ್ತಿಗೆ ಮೇರೆಗೆ) ಕೆಲಸ ಮಾಡುತ್ತಿರುವ ಸಬ್ ಇಂಜಿನಿಯರ್ ಹೇಮಾ ಮೀನಾ ಅವರ ನಿವಾಸದ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

  ವಿದಿಶಾ, ರೈಸನ್ ಮತ್ತು ಭೋಪಾಲ್‌ನಲ್ಲಿರುವ ಅವರ ಮಾಲೀಕತ್ವದ ಸ್ಥಳಗಳ ಮೇಲೂ ದಾಳಿ ನಡೆಯಿತು. ಈವರೆಗೆ 7 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

  ಮಾಸಿಕ ವೇತನ 30 ಸಾವಿರ ರೂ.!

  ಸ್ವಾರಸ್ಯವೆಂದರೆ ಸಬ್ ಇಂಜಿನಿಯರ್ ಹೇಮಾ ಮೀನಾ ಅವರ ಮಾಸಿಕ ವೇತನ ಕೇವಲ 30 ಸಾವಿರ ರೂ.! ಆದರೂ ಅವರು ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಹೇಮಾ ಮೀನಾ ಬಿಲ್ಕಿರಿಯಾದಲ್ಲಿ 20,000 ಚದರ ಅಡಿ ಜಾಗವನ್ನು ತಂದೆಯ ಹೆಸರಿನಲ್ಲಿ ತೆಗೆದುಕೊಂಡಿದ್ದಾರೆ. 1 ಕೋಟಿ ರೂ. ಮೌಲ್ಯದ ಮನೆಯನ್ನು ಸಹ ಕಟ್ಟಿಸಿದ್ದಾರೆ.

  ಇದಲ್ಲದೆ ರೈಸನ್ ಮತ್ತು ವಿದಿಶಾದಲ್ಲಿ ಅವರು ಕೋಟ್ಯಂತರ ರೂ. ಬೆಲೆಯ ಜಮೀನನ್ನು ಖರೀದಿಸಿದ್ದಾರೆ. ಈವರೆಗೆ ಸುಮಾರು 5ರಿಂದ 7 ಕೋಟಿ ರೂ. ಮೌಲ್ಯದ ಆಸ್ತಿ ಬಯಲಿಗೆ ಬಂದಿದೆ. ಬೆಳಗ್ಗೆ 6 ಗಂಟೆಯಿಂದ ಲೋಕಾಯುಕ್ತರ ದಾಳಿ ಕಾರ್ಯಾಚರಣೆ ನಡೆಯುತ್ತಿದ್ದು, ಆದಾಯಕ್ಕಿಂತ 230 ಪಟ್ಟು ಆಸ್ತಿ ಹೊಂದಿರುವುದು ಬಹಿರಂಗವಾಗಿದೆ. ವಾಸ್ತವವಾಗಿ ಹೇಮಾ ಮೀನಾ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ದೂರು ಬಂದಿದ್ದು 2020ರಲ್ಲಿ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು.

  hema meena house

  ಇದನ್ನೂ ಓದಿ: ಇಮ್ರಾನ್​ ಖಾನ್ ಬಂಧನ ಕಾನೂನು ಬಾಹಿರ; ಪಾಕಿಸ್ತಾನ ಸುಪ್ರೀಂ ಕೋರ್ಟ್

  ಆದಾಯಕ್ಕಿಂತ 230 ಪಟ್ಟು ಹೆಚ್ಚು

  ಲೋಕಾಯುಕ್ತ ಕಮಾಂಡರ್, ಡಿಎಸ್‌ಪಿ ಸಂಜಯ್ ಶುಕ್ಲಾ ಸುದ್ದಿಗಾರರ ಜತೆ ಮಾತನಾಡಿ, ಹೇಮಾ ಮೀನಾ ವಿರುದ್ಧ ದೂರು ಸ್ವೀಕರಿಸಿದ ನಂತರ ಲೋಕಾಯುಕ್ತ ವಿಶೇಷ ಪೊಲೀಸ್ ವಿಭಾಗ ತನಿಖೆಯನ್ನು ಪ್ರಾರಂಭಿಸಿತು. ಹೇಮಾ ತನ್ನ ತಂದೆಯ ಹೆಸರಿಗೆ 20,000 ಚದರ ಅಡಿ ಭೂಮಿಯನ್ನು ವರ್ಗಾಯಿಸಿದ್ದಾರೆ. ಆದರೆ ಅದನ್ನು ಬಿಲ್ಖಿರಿಯಾದಲ್ಲಿ ಖರೀದಿಸಲಾಗಿದೆ. ಇದಾದ ಬಳಿಕ ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಸಿಕೊಂಡಿದ್ದಾರೆ.

  ಇದರೊಂದಿಗೆ ವಿದಿಶಾ, ರೈಸನ್ ಮತ್ತು ಭೋಪಾಲ್‌ನಲ್ಲಿ ವಿವಿಧ ಸ್ಥಳಗಳಲ್ಲಿ ಭೂಮಿಯನ್ನು ಖರೀದಿಸಲಾಗಿದೆ. ಟ್ರ್ಯಾಕ್ಟರ್, ಭತ್ತ ಬಿತ್ತುವ ಯಂತ್ರ, ಕಟಾವು ಯಂತ್ರ ಸೇರಿದಂತೆ ಹಲವು ಕೃಷಿ ಉಪಕರಣಗಳನ್ನು ಖರೀದಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಕೇವಲ 30 ಸಾವಿರ ರೂ. ಸಂಬಳ ಪಡೆಯುತ್ತಾರೆ. ಅವರು ಯಾವುದೇ ಆಸ್ತಿಯನ್ನು ತೆಗೆದುಕೊಂಡರೂ ಅದು ಅವರ ಆದಾಯಕ್ಕಿಂತ 230 ಪಟ್ಟು ಹೆಚ್ಚು ಇದೆ. ಹೇಮಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts