ಮತದಾನ ಮುಗಿದ ಬೆನ್ನಲ್ಲೇ ಮೆಟ್ಟಿಲುಗಳ ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಲ್ಹಾದ ಜೋಶಿ

pralhad joshi
Published on

ತಿರುಪತಿ: ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್​ ಮೂಡಿಗೆ ಜಾರಿರುವ ರಾಜಕೀಯ ಪಕ್ಷಗಳ ನಾಯಕರು ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾತ್ರ ವಿಶ್ರಾಂತಿಯತ್ತ ಮುಖ ಮಾಡದೇ ಮತ್ತಷ್ಟು ಶ್ರಮವಹಿಸಿ ತಿರುಪತಿಯ ಮೆಟ್ಟಿಲುಗಳನ್ನು ಹತ್ತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಪಾದಸೇವೆ ಮೂಲಕ ದರ್ಶನ

ಮತದಾನ ಮುಗಿದ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ನೇರವಾಗಿ ತಿರುಪತಿಗೆ ತೆರಳಿ ಅಲ್ಲಿಂದ ತಿರುಮಲದವರೆಗೆ ಪಾದಯಾತ್ರೆಯಲ್ಲಿ ಮೆಟ್ಟಿಲುಗಳನ್ನು ಹತ್ತಿ ಶ್ರೀನಿವಾಸ ಸ್ವಾಮಿಯ ದರ್ಶನವನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಪಡೆದಿದ್ದಾರೆ.

pralhad

ಉಳಿದ ನಾಯಕರೆಲ್ಲ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾ ರಿಲ್ಯಾಕ್ಸ್ ಆಗುತ್ತಿದ್ದರೆ, ಇತ್ತ ಪ್ರಲ್ಹಾದ ಜೋಶಿಯವರು ಪಾದಯಾತ್ರೆ ಮಾಡಿ ವೆಂಕಟೇಶ್ವರನ ದರ್ಶನ ಪಡೆದು ನಿರಾಳರಾಗಿದ್ದಾರೆ.

ಕೌಂಟ್ ಡೌನ್ ಸ್ಟಾರ್ಟ್​

ಮತ ಎಣಿಕೆಗೆ ಈಗಾಗಲೇ ಕೌಂಟ್ ಡೌನ್ ಆರಂಭವಾಗಿದೆ. ಈಗಾಗಲೇ ಇ.ವಿ.ಎಂ. ಸೇರಿರುವ ಅಭ್ಯರ್ಥಿಗಳ ಭವಿಷ್ಯ ಇದೇ 13ನೇ ತಾರೀಖು ಬಹಿರಂಗವಾಗಲಿದೆ.

ಇದಕ್ಕೂ ಮುನ್ನ ಕೇಂದ್ರ ಸಚಿವರು ತಿರುಪತಿಗೆ ಪಾದಯಾತ್ರೆ ನಡೆಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಬಿಡುವಿನ ದಿನದಲ್ಲಿ ದೇವರ ದರ್ಶನ ಪಡೆದ ಕೃತಾರ್ಥ ಭಾವ ಅನುಭವಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net