More

    1,000 ಬಾಯ್‌ಫ್ರೆಂಡ್ಸ್ ಇರುವ ಯುವತಿ ಜತೆ ಒಂದು ಗಂಟೆ ಡೇಟ್ ಮಾಡೋಕೆ 5,000 ರೂ. ಚಾರ್ಜ್!

    ಅಮೆರಿಕ: ಪ್ರೀತಿ ಎನ್ನುವುದು ಜೀವನದಲ್ಲಿ ತುಂಬಾ ಮುಖ್ಯವಾಗಿದೆ. ಎಷ್ಟೋ ಜನರು ಪ್ರೀತಿಗಾಗಿ ಪರಿತಪ್ಪಿಸುತ್ತಾರೆ. ಕಾಲಕಳೆದಂತೆ ಪ್ರಪಂಚ ಬದಲಾಗುತ್ತಿರುವುದರ ಜತೆ ಎಷ್ಟೋ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿದೆ. ಹೀಗಿರುವಾಗ ಇಲ್ಲೊಬ್ಬಳು ಯುವತಿ ಬಾಯ್​ಫ್ರೆಂಡ್ಸ್​​ ಜತೆಗೆ ಡೇಟ್ ಮಾಡಲು ಚಾರ್ಜ್​​ ಮಾಡುತ್ತಿದ್ದಾಳೆ.

    ಜಾರ್ಜಿಯಾದ ಕಮ್ಮಿಂಗ್‌ನ 23 ವರ್ಷದ ಯುವತಿ ಕ್ಯಾರಿನ್ ಮಾರ್ಜೋರಿ ಈ ರೀತಿ ಸಾವಿರಕ್ಕೂ ಹೆಚ್ಚು ಬಾಯ್‌ಫ್ರೆಂಡ್‌ಗಳನ್ನು ಹೊಂದಿರುವಾಕೆ. ಈಕೆ 1,000 ಬಾಯ್‌ಫ್ರೆಂಡ್ಸ್‌ನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಈಕೆ ಡೇಟ್ ಮಾಡೋಕೆ ಒಂದು ಗಂಟೆಗೆ ಐದು ಸಾವಿರ ರೂ. ಜಾರ್ಜ್​​ ಕೂಡಾ ಮಾಡುತ್ತಿದ್ದಾಳೆ.

    ಕ್ಯಾರಿನ್ ಮಾರ್ಜೋರಿ, ಸೋಷಿಯಲ್ ಮೀಡಿಯಾದಲ್ಲಿ 1.8 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾಳೆ. ಈಕೆ ಡೇಟಿಂಗ್ ಮಾಡಲು AI ಕ್ಲೋನ್ ಎಂಬ ಆ್ಯಪ್​​ ಮಾಡಿಕೊಂಡಿದ್ದಾಳೆ.

    ಕ್ಯಾರಿನ್ ಅವರು, AI ಆ್ಯಪ್​​ ಮೂಲಕವಾಗಿ ಬಳಕೆದಾರರಿಗೆ ಆಕೆ ಇರುವ ಪ್ರದೇಶವನ್ನು ಗುರುತಿಸಲು ಮತ್ತು ಲೈಂಗಿಕ ಸಂಭೋಗವನ್ನು ನಡೆಸಲು ಇನ್ನೂ ಅನೇಕ ರೀತಿ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಇದನ್ನೂ ಓದಿ: VIDEO| ಮೆಟ್ರೋದಲ್ಲಿ ಪ್ರಣಯ ಪ್ರಸಂಗ; ಕೆರಳಿದ ನೆಟ್ಟಿಗರು

    ನಿಮಗೆ ಅಗತ್ಯವಿರುವಾಗ ನಿಮ್ಮನ್ನು ಜತೆಗಿರಲು ಮತ್ತು ಪ್ರೀತಿಸಲು AI ಬೋಟ್ ಸಹಾಯ ಮಾಡುತ್ತದೆ. 1,000 ಗೆಳೆಯರು ಕ್ಯಾರಿನ್‌ನ AI ಕ್ಲೋನ್‌ನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಆಪ್​​ ಇನ್ನೊಂದು ವಿಶೇಷವೇಂದರೆ ಯಾರಿಗಾದರೂ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬೇಕಾದರೆ ಅಥವಾ ಕಾಲೇಜಿನಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಜಗಳವಾಡಲು ಬಯಸಿದರೆ ನಿಮಗೆ ಸಹಾಯ ಮಾಡುತ್ತದೆ. ಈ ಮೂಲಕವಾಗಿ ಯುವತಿ ಹಣ ಗಳಿಕೆ ಮಾಡುತ್ತಿದ್ದಾಳೆ.

    ವಿಮಾನದಲ್ಲಿ ಕುಣಿದು ಕುಪ್ಪಳಿಸಿದ ಯುವತಿ; ನೆಟ್ಟಿಗರು ಕೆಂಡಾಮಂಡಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts