

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಸೇರಿದಂತೆ ಅನೇಕರು ಟಿಕ್-ಟಾಕ್ ಹಾಗು ರೀಲ್ಸ್ ಗೀಳಿಗೆ ಬಲಿಯಾಗುತ್ತಿದ್ದು ಅನೇಕರು ಇದರಿಂದ ಅನೇಕ ರೀತಿಯ ಪೇಚಿಗೆ ಸಿಲುಕಿದ್ದಾರೆ.
ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು ಯುವತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಕೆಂಡಕಾರಿದ್ದು ಬೇಷರತ್ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ಶಿಬಾ ಖಾನ್ ಎಂಬ ಯುವತಿಯೂ ವಿಮಾನದಲ್ಲಿ ರೀಲ್ಸ್ ಮಾಡುತ್ತಿದ್ದು ಇದರಿಂದ ಹಿಂದೆ ಮಹಿಳೆಯ ಹಿಂದೆ ನಿಂತಿರುವವರು ಮುಂದಕ್ಕೆ ಹೋಗಲು ಆಗದೆ ಪರದಾಡುತ್ತಿರುವುದನ್ನು ಕಾಣಬಹುದು.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಯುವತಿಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಕೆಂಡಕಾರಿದ್ದಾರೆ.