ಮೀನು ತಿಂದು 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

fish sambar
Published on

ಅಸ್ಸಾಂ: ತಿಥಿ ಕಾರ್ಯವೊಂದರ ಊಟ ಸೇವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಿನ್ನೆ 40 ಮಂದಿ ಅಸ್ವಸ್ಥರಾಗಿದ್ದರು. ಇದೀಗ 100 ಮಂದಿಗೆ ಏರಿಕೆಯಾಗಿದೆ.

ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯಲ್ಲಿ ಬುಧವಾರ ನಡೆದ ತಿಥಿ ಕಾರ್ಯವೊಂದರ ನಂತರ ಧಾರ್ಮಿಕ ಔತಣಕೂಟದಲ್ಲಿ ಪಾಲ್ಗೊಂಡ 100 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಧಾರ್ಮಿಕ ಔತಣಕೂಟದಲ್ಲಿ ಪಾಲ್ಗೊಂಡ 100 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀನಿನಿಂದ ಆಹಾರ ವಿಷ ಉಂಟಾಗಿದೆ ಎಂದು ಹೇಳಲಾಗುತ್ತಿದ್ದು, ಮೀನು ತಿಂದವರು ಮಾತ್ರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೆ, ಸಸ್ಯಾಹಾರ ಸೇವಿಸಿದವರು ಕ್ಷೇಮವಾಗಿದ್ದಾರೆ ಎಂದು ಜಂಟಿ ನಿರ್ದೇಶಕ (ಆರೋಗ್ಯ) ಪರೇಶ್ ಕಲಿತಾ ತಿಳಿಸಿದ್ದಾರೆ. ಹೆಚ್ಚಿನ ರೋಗಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

“ತಿಥಿ ಕಾರ್ಯಕ್ರಮಕ್ಕೆ ಬಂದಿದ್ದವರು ಇತರ ಆಹಾರದ ಜೊತೆಗೆ ಮೀನುಗಳನ್ನು ಸೇವಿಸಿದ್ದಾರೆ” ಎಂದು ಕುಟುಂಬ ಸದಸ್ಯರು ತಿಳಿಸಿದರು. ಈಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಂಗಜುಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net