ಸಿನಿಮಾ

30 ಸಾವಿರ ರೂ. ಸಂಬಳ ಪಡೆಯುವ ಇಂಜಿನಿಯರ್ ನಿವಾಸದ ಮೇಲೆ ದಾಳಿ ಪ್ರಕರಣ; 20 ಕಾರು, 100 ನಾಯಿ, 30 ಲಕ್ಷದ ದುಬಾರಿ ಟಿವಿ ಪತ್ತೆ

ಉತ್ತರಪ್ರದೇಶ: 30,000 ರೂ. ಸಂಬಳ ಗಳಿಸುತ್ತಿದ್ದ ಸರ್ಕಾರಿ ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 20 ಕಾರುಗಳು, 100 ನಾಯಿಗಳು, 30 ಲಕ್ಷ ಟಿವಿ ಹೀಗೆ 7 ಕೋಟಿ ರೂ.ಅಕ್ರಮ ಆಸ್ತಿ ಪತ್ತೆಯಾಗಿದೆ.

ಗುತ್ತಿಗೆ ಇಂಜಿನಿಯರ್ ಆಗಿರುವ ಹೇಮಾ ಮೀನಾ ಅವರ ಮನೆ ಮೇಲೆ ವಿಶೇಷ ಪೊಲೀಸ್ ಸಂಸ್ಥೆ (ಎಸ್‌ಪಿಇ) ಲೋಕಾಯುಕ್ತ ಭೋಪಾಲ್ ಗುರುವಾರ ಬೆಳಗ್ಗೆ ದಾಳಿ ನಡೆಸಿದೆ. 7 ಕೋಟಿ ರೂ.ಗೂ ಹೆಚ್ಚು ಆಸ್ತಿಯನ್ನು ಗಳಿಸಿದ್ದಾರೆ. ಗೊತ್ತಿರುವ ಆದಾಯಕ್ಕಿಂತಲೂ ಹೆಚ್ಚು ಹಣ ಹಾಗೂ ದುಬಾರಿ ಬೆಲೆ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: VIDEO| ಮೆಟ್ರೋದಲ್ಲಿ ಪ್ರಣಯ ಪ್ರಸಂಗ; ಕೆರಳಿದ ನೆಟ್ಟಿಗರು

ಗುತ್ತಿಗೆ ಇಂಜಿನಿಯರ್ ತಿಂಗಳಿಗೆ 30,000 ರೂಪಾಯಿ ಸಂಬಳ ಪಡೆಯುತ್ತಿದ್ದರು ಮತ್ತು ಅವರು ಅನ್ಯಾಯದ ಮಾರ್ಗಗಳ ಮೂಲಕ ಹಣವನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. 2020ರಲ್ಲಿ ಇಂಜಿನಿಯರ್ ಹೇಮಾ ಮೀನಾ ವಿರುದ್ಧ ಅಕ್ರಮ ಆಸ್ತಿಗಳ ಬಗ್ಗೆ ಲೋಕಾಯುಕ್ತ ಪೊಲೀಸರು ದೂರು ಸ್ವೀಕರಿಸಿದ್ದಾರೆ.

ವಶಕ್ಕೆ ಪಡೆದ ವಸ್ತುಗಳು:

ತಿಂಗಳಿಗೆ 30,000 ರೂ. ಸಂಬಳ ಪಡೆಯುವ ಮಧ್ಯಪ್ರದೇಶ ಸರ್ಕಾರಿ ಅಧಿಕಾರಿ ಹೇಮಾ ಮೀನಾ ಅವರ ಮೇಲೆ ನಡೆದ ದಾಳಿಯಲ್ಲಿ, ಲೋಕಾಯುಕ್ತ ವಿಶೇಷ ಪೊಲೀಸ್ ಸ್ಥಾಪನಾ ತಂಡವು ಸುಮಾರು 7 ಕೋಟಿ ರೂ.ಮೌಲ್ಯದ ಆಸ್ತಿಯಲ್ಲಿ 20 ಕಾರುಗಳು ಮತ್ತು 30 ಲಕ್ಷದ ರೂ. 98 ಇಂಚಿನ ಟಿವಿಯನ್ನು ಪತ್ತೆ ಮಾಡಿದೆ. ದನಗಳು, 100 ನಾಯಿಗಳು, ಆಕೆಯ ತಂದೆಯ ಹೆಸರಿನಲ್ಲಿ 20,000 ಚದರ ಅಡಿ ಜಮೀನು ಮತ್ತು ಲಕ್ಷಾಂತರ ಮೌಲ್ಯದ ಯಂತ್ರಗಳು ಸಹ ಪತ್ತೆಯಾಗಿವೆ. ಕಟಾವು ಯಂತ್ರ, ಭತ್ತ ಬಿತ್ತನೆ ಯಂತ್ರ, ಟ್ರ್ಯಾಕ್ಟರ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಉಪಕರಣಗಳನ್ನು ಖರೀದಿಸಿರುವುದು ಪತ್ತೆಯಾಗಿದೆ.

VIDEO|ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ!

Latest Posts

ಲೈಫ್‌ಸ್ಟೈಲ್