More

    ಮಹಿಳೆಯ ಮಾತಿಗೆ ಮರುಳಾಗಿ 1.89 ಕೋಟಿ ರೂ. ಕಳೆದುಕೊಂಡ ನಿವೃತ್ತ ಐಎಎಸ್​ ಅಧಿಕಾರಿ!

    ಹೈದರಾಬಾದ್​: ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಒಂದಲ್ಲ ಒಂದು ರೂಪದಲ್ಲಿ ಅಮಾಯಕರನ್ನು ವಂಚಿಸಿ ಅಪಾರ ಪ್ರಮಾಣದ ನಗದನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಸೈಬರ್ ಕ್ರಿಮಿನಲ್‌ಗಳ ಬಲೆಗೆ ಸಾಮಾನ್ಯ ಜನರು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಸಹ ಸಿಕ್ಕಿಬೀಳುತ್ತಿದ್ದಾರೆ. ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಿ ಎಂದು ಪೊಲೀಸ್ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದರೂ ವಂಚಕರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಲೇ ಇದೆ.

    ಆಘಾತಕಾರಿ ಸಂಗತಿ ಏನೆಂದರೆ, ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಹೊಸ ಹೊಸ ರೀತಿಯ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದಾರೆ. ಹೊಸ ಐಡಿಯಾಗಳಿಂದ ಜನರನ್ನು ವಂಚಿಸಿ ಲಕ್ಷಗಟ್ಟಲೆ ಲೂಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ನಿವೃತ್ತ ಅಧಿಕಾರಿಗಳೂ ಸಹ ಈ ಸೈಬರ್ ಕ್ರಿಮಿನಲ್​ಗಳ ಜಾಲಕ್ಕೆ ಸಿಕ್ಕಿ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಸೈಬರ್ ಕ್ರಿಮಿನಲ್​ಗಳ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ.

    ಹೈದರಾಬಾದ್‌ನಲ್ಲಿ ನೆಲೆಸಿರುವ ನಿವೃತ್ತ ಐಎಎಸ್ ಅಧಿಕಾರಿ ಈ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಮಹಿಳೆಯೊಬ್ಬಳು ನಿವೃತ್ತ ಅಧಿಕಾರಿಯನ್ನು ಟ್ರೇಡಿಂಗ್ ಹೆಸರಿನಲ್ಲಿ ವಂಚಿಸಿದ್ದಾರೆ. ಸಂತ್ರಸ್ತ ಅಧಿಕಾರಿ ಈ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಹೈದರಾಬಾದ್​ನಲ್ಲಿ ವಾಸವಾಗಿದ್ದಾರೆ. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ಬಂದಿತ್ತು. ಮೆಸೇಜ್ ನೋಡಿದ ಅಧಿಕಾರಿ, ಮಹಿಳೆಯನ್ನು ಯಾರು ಎಂದು ಪ್ರಶ್ನಿಸಿದಾಗ, ತನ್ನ ಹೆಸರು ಪ್ರತಿಭಾ ರಾವ್ ಎಂದು ಪರಿಚಯಿಸಿಕೊಂಡಿದ್ದಳು. ಬೆಂಗಳೂರಿನಲ್ಲಿ ಫಾರೆಕ್ಸ್ ಟ್ರೇಡಿಂಗ್ ಮಾಡುವುದಾಗಿ ತಿಳಿಸಿದ್ದಳು. ಫ್ಯೂಚರ್ ಗ್ಲೋಬಲ್ ಮೂಲಕ ವ್ಯಾಪಾರ ಮಾಡುತ್ತಿರುವುದಾಗಿ ನಿವೃತ್ತ ಐಎಎಸ್ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟಿದ್ದಳು.

    ನಿವೃತ್ತ ಅಧಿಕಾರಿ, ಕಡಿಮೆ ಸಮಯದಲ್ಲಿ ಹೆಚ್ಚು ಹಣವನ್ನು ಗಳಿಸುವ ಆಸೆಯಿಂದ ಮಹಿಳೆಯ ಮಾತನ್ನು ನಂಬಿದ್ದರು. ಬಳಿಕ ಮಹಿಳೆಯು ಟೆಲಿಗ್ರಾಂ ಮೂಲಕ ಲಿಂಕ್ ಕಳುಹಿಸಿದ್ದಳು. ನಂತರ ಕಸ್ಟಮರ್​ ಸೇವೆಯನ್ನು ಸಂಪರ್ಕಿಸಿ, ಬ್ಯಾಂಕ್​ ಖಾತೆಯ ಮಾಹಿತಿಯನ್ನು ಪಡೆದು, ಏಪ್ರಿಲ್ ಮೂರನೇ ವಾರದಲ್ಲಿ 50 ಸಾವಿರ ರೂ., ಬಳಿಕ 5 ಲಕ್ಷ ಮತ್ತು 50 ಲಕ್ಷ ರೂ. ಹೀಗೆ ಕೆಲವು ದಿನಗಳವರೆಗೆ ಹೂಡಿಕೆ ಮಾಡಿದ್ದಾರೆ. ಇದರ ನಡುವೆ 67 ಲಕ್ಷ ರೂ.ವರೆಗೆ ಲಾಭ ಬಂದಿದೆ ಎಂದು ಆನ್‌ಲೈನ್‌ನಲ್ಲಿ ತೋರಿಸಿದೆ.

    ಆದರೆ, ಫ್ಯೂಚರ್ ಗ್ಲೋಬಲ್ ಮೂಲಕ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಬಳಿಕ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಹಲವು ಕಂತುಗಳಲ್ಲಿ 1.89 ಕೋಟಿ ರೂ. ಹಣವನ್ನು ಅಧಿಕಾರಿ ಪಾವತಿಸಿದ್ದರು. ಹಣ ವಾಪಸ್ ಬರದ ಕಾರಣ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಕಾಂತಾರ ‘ವರಾಹರೂಪಂ’ ಮೂಲಕ ಸೆನ್ಸೆಷನ್ ಕ್ರಿಯೇಟ್ ಮಾಡಿದ ಲೇಡಿ ಸಿಂಗರ್​ಗೆ ಕೂಡಿ ಬಂತು ಕಂಕಣ ಭಾಗ್ಯ

    ಮೇನಲ್ಲಿ ಬ್ಯಾಂಕ್​ಗಳಿಗೆ ಇಷ್ಟೊಂದು ರಜಾದಿನಗಳಾ?! ಎಚ್ಚರ ಗ್ರಾಹಕರೇ ಈ ದಿನಾಂಕಗಳಲ್ಲಿ ಮುಚ್ಚಲ್ಪಡುತ್ತವೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts