ಮೇನಲ್ಲಿ ಬ್ಯಾಂಕ್​ಗಳಿಗೆ ಇಷ್ಟೊಂದು ರಜಾದಿನಗಳಾ?! ಎಚ್ಚರ ಗ್ರಾಹಕರೇ ಈ ದಿನಾಂಕಗಳಲ್ಲಿ ಮುಚ್ಚಲ್ಪಡುತ್ತವೆ..

bank
Published on

ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಏಪ್ರಿಲ್ ಕಳೆದು ಮೇ ತಿಂಗಳು ಆರಂಭವಾಗಲಿದೆ. ಆದರೆ ಈ ಬಾರಿ ಮೇ ತಿಂಗಳಲ್ಲಿ 8ರಿಂದ 12 ರಜಾದಿನಗಳು ಬಂದಿವೆ. ಈ ದಿನ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಹೀಗಾಗಿ ಹಣದ ತುರ್ತು ಅವಶ್ಯಕತೆಯಿರುವವರು ಎಚ್ಚರವಹಿಸುವುದು ಅಗತ್ಯ.

ಈ ಬಾರಿ ಸುಮಾರು 12 ದಿನ ಬ್ಯಾಂಕ್ ರಜೆಗಳು ಬಂದಿವೆ. ಅಂತಹ ಸಂದರ್ಭಗಳಲ್ಲಿ ನೀವು ಬ್ಯಾಂಕ್ ರಜಾದಿನಗಳ ನಂತರ ನಿಮ್ಮ ಸಂಬಂಧಿತ ಚಟುವಟಿಕೆಗಳನ್ನು ಯೋಜಿಸಬೇಕಾಗುತ್ತದೆ. ಇಲ್ಲದಿದ್ದರೆ ನೀವು ನಂತರ ಸಮಸ್ಯೆಗಳನ್ನು ಎದುರಿಸಬಹುದು.

ಮೇ 2024 ರಲ್ಲಿ ಬ್ಯಾಂಕ್ ರಜಾದಿನಗಳು: 

ಮೇ 1: ಕಾರ್ಮಿಕರ ದಿನ, ಮಹಾರಾಷ್ಟ್ರ ದಿನ (ಮೇ ದಿನವು ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್ ರಜೆ)

ಮೇ 5: ಭಾನುವಾರ

ಮೇ 8: ರವೀಂದ್ರನಾಥ ಟ್ಯಾಗೋರ್ ಜಯಂತಿ(ಕೋಲ್ಕತ್ತಾದಲ್ಲಿ ಬ್ಯಾಂಕ್ ರಜೆ)

ಮೇ 10: ಬಸವ ಜಯಂತಿ, ಅಕ್ಷಯ ತೃತೀಯ (ಕರ್ನಾಟಕದಲ್ಲಿ ರಜೆ)

ಮೇ 11: ಎರಡನೇ ಶನಿವಾರ

ಮೇ 12: ಭಾನುವಾರ

ಮೇ 16: ರಾಜ್ಯೋತ್ಸವ ದಿನ(ಸಿಕ್ಕಿಂನಲ್ಲಿ ಮಾತ್ರ ರಜೆ)

ಮೇ 19: ಭಾನುವಾರ

ಮೇ 20: ಲೋಕಸಭೆ ಚುನಾವಣೆ (ಮಹಾರಾಷ್ಟ್ರದಲ್ಲಿ ಬ್ಯಾಂಕ್ ರಜೆ)

ಮೇ 23: ಬುದ್ಧ ಪೂರ್ಣಿಮೆಯ ನಿಮಿತ್ತ ಅಗರ್ತಲಾ, ಐಜ್ವಾಲ್, ಭೋಪಾಲ್, ಬೇಲಾಪುರ್, ಡೆಹ್ರಾಡೂನ್, ಇಟಾನಗರ, ಚಂಡೀಗಢ, ಜಮ್ಮು, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‌ಪುರ, ರಾಂಚಿ, ಶಿಮ್ಲಾ, ಶ್ರೀನಗರದಲ್ಲಿ ರಜೆ

ಮೇ 25: ನಾಲ್ಕನೇ ಶನಿವಾರ ದೇಶದಾದ್ಯಂತ ಬ್ಯಾಂಕ್ ರಜೆ

ಮೇ 26: ಭಾನುವಾರ

ಆದರೆ ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಈ ಕಾರಣದಿಂದಾಗಿ, ಸ್ಥಳೀಯ ಜನರು ರಜಾದಿನಗಳಲ್ಲಿ ಬ್ಯಾಂಕ್‌ಗಳಿಗೆ ಹೋಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net