ಸಿನಿಮಾ

VIDEO|ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ!

ನವದೆಹಲಿ: ಸೋಶಿಯಲ್​ ಮೀಡಿಯಾದಲ್ಲಿ ಭಾವನಾತ್ಮಕ ಹಾಗೂ ಕೆಲವು ಹಾಸ್ಯಾಸ್ಪದ ವಿಡಿಯೋಗಳು ವೈರಲ್​​​ ಆಗುತ್ತವೆ. ಆದರೆ ಇತ್ತೀಚೆಗೆ ವೈರಲ್​ ಆಗಿರುವ ಅಮ್ಮ- ಮಗನ ಬಾಂಧವ್ಯದ ವಿಡಿಯೋವೊಂದು ಹೃದಯಸ್ಪರ್ಶಿಯಾಗಿದೆ. ಇಂದು ನಾವು ನಿಮಗೆ ಅಂತಹ ಒಂದು ವಿಡಿಯೋವನ್ನು ತೋರಿಸಲಿದ್ದೇವೆ ಅದು ನಿಮ್ಮ ಹೃದಯವನ್ನು ಸ್ಪರ್ಶಿಸಲಿದೆ.

ಗುಡ್ ನ್ಯೂಸ್ ಮೂವ್‌ಮೆಂಟ್‌ನಿಂದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕ್ಲಿಪ್, ಕ್ಷೌರಿಕನೊಬ್ಬ ಮಹಿಳೆಯ ತಲೆ ಬೋಳಿಸಿಕೊಂಡಿರುವುದನ್ನು ತೋರಿಸುತ್ತದೆ. ತಾಯಿ-ಮಗನ ಬಾಂಧವ್ಯವನ್ನು ನೆಟ್ಟಿಗರು ಮೆಚ್ಚಿದ್ದಾರೆ.

ಇದನ್ನೂ ಓದಿ: VIDEO| ಮೆಟ್ರೋದಲ್ಲಿ ಪ್ರಣಯ ಪ್ರಸಂಗ; ಕೆರಳಿದ ನೆಟ್ಟಿಗರು

ವಿಡಿಯೋದಲ್ಲಿ ಏನಿದೆ?: ಸಲೂನಿನಲ್ಲಿ ಕೆಲಸ ಮಾಡುವ ಯುವಕನ ತಾಯಿಗೆ ಕ್ಯಾನ್ಸರ್ ಆಗಿದೆ. ಕಿಮೋಥೆರಪಿಗೆ ಮೊದಲು ಮಗನೇ ಅಮ್ಮನ ತಲೆಯನ್ನು ಬೋಳಿಸಿದ್ದಾನೆ. ಸಲೂನಿನ ಸಿಬ್ಬಂದಿಯೂ ಈ ತಾಯಿಗೆ ಸಾಥ್​ ಕೊಡುತ್ತಾರೆ. ಒಬ್ಬೊಬ್ಬರಾಗಿ ಇನ್ನು ಕೆಲವರು ತಲೆ ಬೋಳಿಸಿಕೊಳ್ಳುತ್ತಾರೆ. ಇದೆಲ್ಲವನ್ನು ನೋಡಿದ ಆಕೆಯ ಕಣ್ಣೀರು ಹಾಕಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.

ಯಾರೂ ಏಕಾಂಗಿಯಾಗಿ ಹೋರಾಡುವುದಿಲ್ಲ. ಈ ಕ್ಷೌರಿಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ತಾಯಿಯೊಂದಿಗೆ ಮಗ ತಲೆ ಬೋಳಿಸಿಕೊಳ್ಳುತ್ತಾನೆ. ಅದು ಸಾಕಷ್ಟು ಭಾವನಾತ್ಮಕವಾಗಿದೆ. ಅವನ ಸ್ನೇಹಿತರು ಮತ್ತು ಕೆಲಸದ ಸಹೋದ್ಯೋಗಿಗಳು ಸೇರಿಕೊಂಡು ಅವಳನ್ನು ಆಶ್ಚರ್ಯಗೊಳಿಸುತ್ತಾರೆ ಎನ್ನುವ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಶೇರ್​​ ಮಾಡಲಾಗಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ವಾನ; 31ನೇ ವರ್ಷಕ್ಕೆ ಕಾಲಿಟ್ಟ ಬೋಬಿ

Latest Posts

ಲೈಫ್‌ಸ್ಟೈಲ್