More

    ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ವಾನ; 31ನೇ ವರ್ಷಕ್ಕೆ ಕಾಲಿಟ್ಟ ಬೋಬಿ

    ನವದೆಹಲಿ: ಇಂದಿನ ದಿನದ ಜೀವನ ಕ್ಷಣಿಕ. ಇಂದು ಇದ್ದವರು ನಾಳೆ ಬದುಕಿರುತ್ತೇವೆ ಎನ್ನುವ ಭರವಸೆ ಇಲ್ಲದ ಜೀವನವಾಗಿದೆ. ಹಿಂದಿನ ಕಾಲದವರು ಹೆಚ್ಚಿನ ದಿನಗಳ ಕಾಲ ಬಾಳಿ ಬದುಕುತ್ತಿದ್ದರು ಎನ್ನುವುದನ್ನು ನಾವು ಕೇಳಿದ್ದೇವೆ. ಕೆಲವೊಮ್ಮೆ ಇಂತಹ ಉದಾಹರಣೆಗಳನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಡಿದ್ದೇವೆ. ಆದರೆ ಇಲ್ಲೊಂದು ಪ್ರಾಣಿ ಅತೀ ಹೆಚ್ಚು ವರ್ಷಗಳ ಕಾಲ ಬದುಕಿದ್ದು ಸುದ್ದಿಯಾಗಿದೆ.

    ವಿಶ್ವದ ಅತ್ಯಂತ ಹಳೆಯ ನಾಯಿ 31 ವರ್ಷಗಳನ್ನು ಪೂರೈಸುತ್ತಿದೆ. ಶುದ್ಧತಳಿ ರಾಫೀರೊ ಡೊ ಅಲೆಂಟೆಜೊ ಆಗಿರುವ ಬೋಬಿ ಶ್ವಾನಕ್ಕೆ ಫೆಬ್ರವರಿಯಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ನೀಡಲಾಗಿದೆ.

    ಬೋಬಿ ಹೆಸರಿನ ಶ್ವಾನ 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. 1992 ಮೇ 11ರಂದು ಜನಿಸಿದ ಬೋಬಿಯ 31ನೇ ಹುಟ್ಟುಹಬ್ಬವನ್ನು ಶನಿವಾರದಂದು ಪೋರ್ಚುಗೀಸ್‌ನ ಕಾಂಕ್ವಿರೋಸ್‌ನಲ್ಲಿರುವ ಶ್ವಾನದ ಮಾಲೀಕರು ತಮ್ಮ ಮನೆಯಲ್ಲಿ ಪಾರ್ಟಿಯೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ.

    ಇದನ್ನೂ ಓದಿ: ಪೋಷಕರ ಬೇಜಾವಾಬ್ದಾರಿ; ಮನೆಯಲ್ಲಿ ಮಲಗಿದ್ದ ಮಗಳಿಗಾಗಿ ಪೊಲೀಸರ ಜತೆ ಊರೆಲ್ಲಾ ಹುಡುಕಿದ್ರು!

    ಬೋಬಿಯ ಮಾಲೀಕ ಲಿಯೋನೆಲ್ ಕೋಸ್ಟಾ, ಅತಿಥಿಗಳಿಗೆ ಮಾಂಸ ಮತ್ತು ಮೀನಿನ ಊಟವನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ 100 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

    ಬಾಬಿಯ ದೀರ್ಘಾಯುಷ್ಯದ ರಹಸ್ಯವೇನು?:
    ”ಬಾಬಿಯ ದೀರ್ಘಾಯುಷ್ಯಕ್ಕೆ ದೊಡ್ಡ ಕೊಡುಗೆಯಾಗಿದೆ. ಬಾಬಿ ವಾಸಿಸುವ ಸ್ಥಳ ಶಾಂತಿಯುತ ವಾತಾವರಣ ಇದೆ” ಎಂದು ಶ್ವಾನದ ಮಾಲೀಕ ಲಿಯೋನೆಲ್ ಹೇಳುತ್ತಾರೆ.

    ಇದನ್ನೂ ಓದಿ: VIDEO| ಮೆಟ್ರೋದಲ್ಲಿ ಪ್ರಣಯ ಪ್ರಸಂಗ; ಕೆರಳಿದ ನೆಟ್ಟಿಗರು

    ಬೋಬಿ ಯಾವಾಗಲೂ ಪೋರ್ಚುಗಲ್ ಹಳ್ಳಿಯಲ್ಲಿರುವ ತನ್ನ ಮನೆಯ ಸುತ್ತಲಿನ ಕಾಡುಗಳಲ್ಲಿ ಸುತ್ತಾಡುತ್ತಿದ್ದನು. ಆತನನ್ನು ಯಾವತ್ತೂ ಸರಪಳಿಯಿಂದ ಕಟ್ಟಿಲ್ಲ. ಈಗ ಬೋಬಿಗೆ ನಡೆಯಲು ಕಷ್ಟವಾಗುತ್ತದೆ. ಬೋಬಿಯ ದೃಷ್ಟಿ ದುರ್ಬಲವಾಗಿದೆ. ವಯಸ್ಸಾದ ಮನುಷ್ಯರಂತೆ ಬೋಬಿ ಸಾಕಷ್ಟು ನಿದ್ರಿಸುತ್ತಾನೆ. ಅವನು ತಿಂದ ತಕ್ಷಣ ಚಿಕ್ಕನಿದ್ರೆ ತೆಗೆದುಕೊಳ್ಳಲು ಇಷ್ಟಪಡುತ್ತಾನೆ.

    “ಬೋಬಿ ವಿಶೇಷ ಏಕೆಂದರೆ ಅವನನ್ನು ನೋಡುವುದು ನಮ್ಮ ಕುಟುಂಬದ ಭಾಗವಾಗಿದೆ. ದುರದೃಷ್ಟವಶಾತ್ ನನ್ನ ತಂದೆ, ನನ್ನ ಸಹೋದರ ಅಥವಾ ಈಗಾಗಲೇ ಇಹಲೋಕ ತ್ಯಜಿಸಿರುವ ನನ್ನ ಅಜ್ಜಿಯರಂತೆ ಇಲ್ಲಿ ಇಲ್ಲ. ಬೋಬಿ ಆ ಪೀಳಿಗೆಯನ್ನು ಪ್ರತಿನಿಧಿಸುತ್ತಾನೆ” ಎಂದು ಶ್ವಾನದ ಮಾಲೀಕ ಹೇಳಿದರು.

    1,000 ಬಾಯ್‌ಫ್ರೆಂಡ್ಸ್ ಇರುವ ಯುವತಿ ಜತೆ ಒಂದು ಗಂಟೆ ಡೇಟ್ ಮಾಡೋಕೆ 5,000 ರೂ. ಚಾರ್ಜ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts