More

    ಬೇಸಿಗೆಯಲ್ಲಿ ಹೆಚ್ಚೆಚ್ಚು ಬಿಯರ್​ ಕುಡಿಯುತ್ತೀರಾ? ಈ ಒಂದು ಮಿಸ್ಟೇಕ್​ ಮಾಡಿದ್ರೆ ಆರೋಗ್ಯಕ್ಕೆ ಡೇಂಜರ್​

    ನವದೆಹಲಿ: ಬಿಯರ್ ಒಂದು ಉತ್ತಮ ರಿಫ್ರೆಶಿಂಗ್​ ಡ್ರಿಂಕ್​ ಆಗಿದೆ ಎಂಬುದು ಅದನ್ನು ಕುಡಿಯುವವರು ನಂಬಿದ್ದಾರೆ. ಆದರೆ, ಬಿಯರ್​ನಲ್ಲಿ ಶೇ. 4.5 ರಿಂದ 8 ರಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತದೆ. ಇದು ದೇಹದಲ್ಲಿ ನೀರಿಗಿಂತ ವೇಗವಾಗಿ ಹೀರಲ್ಪಡುತ್ತದೆ. ಆದ್ದರಿಂದ, ಬೇಸಿಗೆಯಲ್ಲಿ ಬಿಯರ್‌ನ ಅತಿಯಾದ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹೀಗಾಗಿಯೇ ಬಿಯರ್ ಸೇವನೆಯ ನಂತರ ಸಾಕಷ್ಟು ನೀರು ಕುಡಿಯಲು ಯಾವಾಗಲೂ ಸೂಚಿಸಲಾಗುತ್ತದೆ.

    ಜನರು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಮತ್ತು ತಣ್ಣಗಾಗಲು ಬಿಯರ್ ಅನ್ನು ಕುಡಿಯುತ್ತಾರೆ. ಆದಾಗ್ಯೂ, ಬಿಯರ್ ವಾಸ್ತವವಾಗಿ ಜನರಿಗೆ ಬಾಯಾರಿಕೆಯನ್ನು ಉಂಟುಮಾಡಲಿದೆ ಮತ್ತು ಹೆಚ್ಚು ಬೆವರಿಗೆ ಕಾರಣವಾಗುತ್ತದೆ. ಬಿಯರ್​ ಕುಡಿದ ಮೇಲೆ ದೇಹವನ್ನು ಹೈಡ್ರೇಟ್​ ಆಗಿ ಇಟ್ಟುಕೊಳ್ಳಲು ಹೆಚ್ಚು ನೀರು ಮತ್ತು ಸ್ವಲ್ಪ ಟೀ ಕುಡಿಯಲು ಸೂಚಿಸಲಾಗುತ್ತದೆ. ಇದನ್ನು ತಪ್ಪಿಸಿದರೆ ಆರೋಗ್ಯಕ್ಕೆ ತೀವ್ರ ಹಾನಿಯಾಗಲಿದೆ ಎನ್ನುತ್ತಾರೆ ತಜ್ಞರು.

    ದೇಹಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಜನರು ಬಿಯರ್ ಕುಡಿಯುವಾಗ ಹಲವಾರು ವಿಷಯಗಳತ್ತ ಗಮನ ಹರಿಸಬೇಕು. ಅದರಲ್ಲೂ ಸಾಕಷ್ಟು ನೀರು ಕುಡಿಯಿರಿ. ಇಲ್ಲವಾದಲ್ಲಿ ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ ಎರಡು ಬಾರಿ ಸ್ನಾನ ಮಾಡಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ನೀವು ತಿನ್ನುವ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವುದು ಒಳ್ಳೆಯದು ಎಂದು ವೈದ್ಯರು ವಿವರಿಸುತ್ತಾರೆ.

    ಬಿಯರ್​ ಕುಡಿದ ಬಳಿಕ ಜ್ವರ ಮತ್ತು ಇತರ ರೋಗಲಕ್ಷಣಗಳನ್ನು ಗಮನಿಸಿದರೆ, ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಿರಿ. (ಏಜೆನ್ಸೀಸ್​)

    ಅತ್ತೆ ಜತೆ ಅಳಿಯನ ಲಿಪ್​ಲಾಕ್​! ಕೊನೆಗೂ ಮೌನ ಮುರಿದ ಬಿಗಿಲ್​ ಪಾಂಡಿಯಮ್ಮಳ ಪತಿ

    ಆರ್​ಸಿಬಿಯ ಈ ಆಟಗಾರನನ್ನು ಟಿ20 ವಿಶ್ವಕಪ್​ನಲ್ಲಿ ಆಡಿಸಬೇಡಿ! ಇರ್ಫಾನ್​ ಪಠಾಣ್​ ಶಾಕಿಂಗ್​ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts