More

    ವಿವಿಧ ಕ್ಷೇತ್ರದ ಗಣ್ಯರಿಗೆ ಭೀಮರತ್ನ ಪ್ರಶಸ್ತಿ

    ಮೈಸೂರು: ಜನಪರ ಸಾಹಿತ್ಯ ಪರಿಷತ್ತು, ಶ್ರೀನಟರಾಜ ಪ್ರತಿಷ್ಠಾನ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದಿಂದ ವಿವಿಧ ಕ್ಷೇತ್ರದ ಗಣ್ಯರನ್ನು ಭೀಮರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
    ಡಾ.ರಾಜಪ್ಪ ದಳವಾಯಿ (ಸಾಹಿತ್ಯ ಮತ್ತು ರಂಗಭೂಮಿ), ಅಂಶಿ ಪ್ರಸನ್ನಕುಮಾರ್ (ಪತ್ರಿಕೋದ್ಯಮ), ಪ್ರೊ.ಎಸ್. ಶಿವರಾಜಪ್ಪ (ಸಾಹಿತ್ಯ), ಡಾ.ಅಬ್ದುಲ್ ಖಾದರ್(ವೈದ್ಯಕೀಯ), ಡಾ.ಜಿ. ಪ್ರಶಾಂತ ನಾಯಕ (ಸಾಹಿತ್ಯ,) ಸಿ.ಎಂ. ನರಸಿಂಹಮೂರ್ತಿ (ಜನಪದ ಮತ್ತು ರಂಗಭೂಮಿ) ಅವರಿಗೆ ಪ್ರಶಸ್ತಿ ಲಭಿಸಿದೆ.
    ಹೊಸಮಠದ ಶ್ರೀನಟರಾಜ ಸಭಾಂಗಣದಲ್ಲಿ ಏ.24ರಂದು ಬೆ.10.30ಕ್ಕೆ ಆಯೋಜಿಸಲಿರುವ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಲ್ಲದೇ ವಿವಿಧ ಕ್ಷೇತ್ರದ ಸೇವೆಗಾಗಿ ಕೆ.ಆರ್. ಪ್ರಭಾವತಿ (ಬುಡಕಟ್ಟು ಸೇವೆ), ಯಶಸ್ವಿನಿ ಗಿರೀಶ್ (ಯುವ ಪ್ರತಿಭೆ), ಚಂದ್ರಕಲಾ (ಸಂಘಟನೆ) ಅವರನ್ನು ಅಭಿನಂದಿಸಲಾಗುವುದು.
    ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಭುವನೇಶ್ವರ ಎಎಸ್‌ಬಿಎಂ ವಿವಿಯ ವಿಶ್ರಾಂತ ಕುಲಪತಿ ಡಾ.ಮಹದೇವ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಪ್ರಶಸ್ತಿ ಪ್ರದಾನ ಮಾಡುವರು. ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಬಸಪ್ಪ ಅಭಿನಂದನಾ ಭಾಷಣ ಮಾಡುವರು. ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸುವರು. ಪರಿಷತ್ತಿನ ಗೌರವಾಧ್ಯಕ್ಷ ಡಾ.ಡಿ. ರವಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಅಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು, ಗೌರವ ಸಲಹೆಗಾರ ಡಾ.ಆರ್.ನಾಗಭೂಷಣ್, ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಮಹೇಶ್ ದಳಪತಿ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts