ಸಿನಿಮಾ

ಚುನಾವಣಾ ಫಲಿತಾಂಶಕ್ಕೂ ಮೊದಲೇ ಶಾಸಕರ ನಾಮಫಲಕ ತಂದ ಜೆಡಿಎಸ್ ಅಭ್ಯರ್ಥಿ!

ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ ಒಂದು ದಿನದ ಹಿಂದಷ್ಟೇ ಮುಕ್ತಾಯವಾಗಿದ್ದು, ಇಡೀ ರಾಜ್ಯ ನಾಳಿನ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಇದರ ನಡುವೆ ಜೆಡಿಎಸ್​ ಅಭ್ಯರ್ಥಿಯೊಬ್ಬರು ಫಲಿತಾಂಶಕ್ಕೂ ಮುನ್ನವೇ ಶಾಸಕರ ನಾಮಫಲಕವನ್ನು ತಂದಿಟ್ಟುಕೊಂಡಿದ್ದಾರೆ.

ತುಮಕೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರು ಫಲಿತಾಂಶಕ್ಕೂ ಮುನ್ನವೇ ಶಾಸಕರ ನಾಮಫಲಕ ತಂದಿಟ್ಟುಕೊಂಡಿದ್ದಾರೆ. ಎರಡು ಬಾರಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದ ಗೋವಿಂದರಾಜು, ಈ ಬಾರಿ ಶತಯಗತಾಯ ನಾನೇ ಗೆಲ್ಲೋದು ಎಂಬ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಚುನಾವಣಾ ಫಲಿತಾಂಶಕ್ಕೂ ಮೊದಲೇ‌ ಶಾಸಕ ನಾಮಫಲಕ ತಂದಿದ್ದಾರೆ.

ಇದನ್ನೂ ಓದಿ: 1,000 ಬಾಯ್‌ಫ್ರೆಂಡ್ಸ್ ಇರುವ ಯುವತಿ ಜತೆ ಒಂದು ಗಂಟೆ ಡೇಟ್ ಮಾಡೋಕೆ 5,000 ರೂ. ಚಾರ್ಜ್!

ಗೋವಿಂದರಾಜು ಅವರು ತಮ್ಮ ಕಾರ್ಯಕರ್ತರ ಜತೆ ನಾಮಫಲಕ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಾಳೆ ಫಲಿತಾಂಶ

ಮೇ 10ರಂದು ರಾಜ್ಯಾದ್ಯಂತ ಮತದಾನ ನಡೆಯಿತು. ಶೇ. 73.91 ರಷ್ಟು ಮತದಾನವಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಕರ್ನಾಟಕದ ಅಧಿಕಾರದ ಗದ್ದುಗೆಯನ್ನು ಯಾರು ಹಿಡಿಯಲಿದ್ದಾರೆ ಎಂದು ಗೊತ್ತಾಗಲಿದೆ. ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. (ದಿಗ್ವಿಜಯ ನ್ಯೂಸ್​)

ದಿ ಕೇರಳ ಸ್ಟೋರಿ ಬ್ಯಾನ್: ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್​

ಇನ್​ಸ್ಟಾಗ್ರಾಂನಿಂದ ರಿಧಮ್​ ಚಾನನ ನಾಪತ್ತೆ! ದೆಹಲಿ ಮೆಟ್ರೋ ಗರ್ಲ್​ಗೆ ಏನಾಯಿತು?

ವಿಶ್ವಕಪ್​ 2023; ಭಾರತದಲ್ಲಿ ಆಡಲು ಪಾಕಿಸ್ತಾನಕ್ಕೆ ಈ ನಗರ ಸುರಕ್ಷಿತ ಅಲ್ಲವಂತೆ!

Latest Posts

ಲೈಫ್‌ಸ್ಟೈಲ್