More

    ಐಪಿಎಸ್​ ಅಧಿಕಾರಿ ಜತೆ ಡಿಂಪಲ್​ ಹಯಾತಿ ಅನುಚಿತ ವರ್ತನೆ: ಕ್ರಿಮಿನಲ್​ ಪ್ರಕರಣ ದಾಖಲು

    ಹೈದರಾಬಾದ್​: ಟಾಲಿವುಡ್​ ಮತ್ತು ಕಾಲಿವುಡ್​ನಲ್ಲಿ ನಾಯಕಿಯಾಗಿ ಒಳ್ಳೆಯ ಹೆಸರು ಮಾಡಿರುವ ಡಿಂಪಲ್​ ಹಯಾತಿ ಸಂಯಮ ಕಳೆದುಕೊಂಡು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಹೈದರಾಬಾದ್​ನ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಹಯಾತಿ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್​ ನೀಡಿದ್ದು, ಹಯಾತಿ ಇದೀಗ ಬಂಧನ ಭೀತಿ ಎದುರಿಸುತ್ತಿದ್ದಾರೆ.

    ಇದನ್ನೂ ಓದಿ: ವಾತಾವರಣದ ವಿಚಿತ್ರ ಆಟ; ಈ ಬಾರಿ ಬೆಂಗಳೂರಲ್ಲಿ ಗಾಳಿ ಮಳೆಗೆ ಮರಗಳು ಉರುಳಿದ್ದು ಯಾಕೆ ಗೊತ್ತಾ?

    Dimple Hayati 1

    ವಿವರಣೆಗೆ ಬರುವುದಾದರೆ, ಹಯಾತಿ ಅವರು ಜುಬಿಲಿ ಹಿಲ್ಸ್​ನ ಹುಡಾ ಎನ್​ಕ್ಲೇವ್​, ಜರ್ನಲಿಸ್ಟ್​ ಕಾಲನಿಯಲ್ಲಿರುವ ಎಸ್​ಕೆಆರ್​ ಅಪಾರ್ಟ್​ಮೆಂಟ್​ನಲ್ಲಿ ತನ್ನ ಫ್ರೆಂಡ್ ವಿಕ್ಟರ್​ ಡೇವಿಡ್​ ಜತೆ ವಾಸವಿದ್ದಾರೆ. ಅದೇ ಅಪಾರ್ಟ್​ಮೆಂಟ್​ನಲ್ಲಿ ಐಪಿಎಸ್​ ಅಧಿಕಾರಿ ರಾಹುಲ್​ ಹೆಗ್ಡೆ ಕೂಡ ನೆಲೆಸಿದ್ದಾರೆ. ಅಂದಹಾಗೆ ರಾಹುಲ್​ ಹೆಗ್ಡೆ ಅವರು ಸಂಚಾರಿ ವಿಭಾಗದ ಉಪ ಪೊಲೀಸ್​ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಅನೇಕ ಬಾರಿ ಕ್ಯಾತೆ ತೆಗೆದಿದ್ದಾರೆ

    ಕಾರು ಪಾರ್ಕಿಂಗ್​ ವಿಚಾರದಲ್ಲಿ ಹಯಾತಿ ಮತ್ತು ಸ್ನೇಹಿತ ಐಪಿಎಸ್​ ಅಧಿಕಾರಿಯ ಜತೆ ಜಗಳಕ್ಕೆ ಇಳಿದಿದ್ದರು ಎನ್ನಲಾಗಿದೆ. ಐಪಿಎಸ್​ ಅಧಿಕಾರಿಗೆ ಗೊತ್ತುಪಡಿಸಲಾದ ಪಾರ್ಕಿಂಗ್​ ಜಾಗದಲ್ಲಿ ಹಯಾತಿ ತನ್ನ ಕಾರು ಪಾರ್ಕ್​ ಮಾಡುತ್ತಿದ್ದರು ಎಂಬ ಆರೋಪ ಇದೆ. ಅಲ್ಲದೆ, ಈ ವಿಚಾರವಾಗಿ ಅನೇಕ ಬಾರಿ ಕ್ಯಾತೆ ತೆಗೆದಿದ್ದಾರೆ ಅಂತಲೂ ಐಪಿಎಸ್​ ಅಧಿಕಾರಿಯ ಕಾರು ಚಾಲಕ ದೂರಿದ್ದಾರೆ.

    ಇದನ್ನೂ ಓದಿ: RRR​ ಚಿತ್ರದ ಖಳನಟ ರೇ ಸ್ಟೀವನ್ಸನ್ ಇನ್ನಿಲ್ಲ: ಮೇ 25ರಂದು 59ನೇ ಹುಟ್ಟುಹಬ್ಬಕ್ಕೂ ಮುನ್ನವೇ ಕಣ್ಮರೆ

    ಆಕ್ರಮಣಕಾರಿ ವರ್ತನೆ ತೋರಿದರು

    ಪ್ರತಿ ಬಾರಿ ಪಾರ್ಕಿಂಗ್​ ಏರಿಯಾದಿಂದ ಹೊರ ಹೋಗುವಾಗ ಹಯಾತಿ ಅಧಿಕಾರಿಯ ಕಾರನ್ನು ಕಾಲಿನಿಂದ ಒದೆಯುತ್ತಿದ್ದರು ಎಂದು ಕಾರು ಚಾಲಕ ಆರೋಪಿಸಿದ್ದಾರೆ. ಮೇ 14ರಂದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಅಂದು ಹಯಾತಿ ಅವರು ಉದ್ದೇಶಪೂರ್ವಕವಾಗಿಯೇ ಅಧಿಕಾರಿಯ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಲ್ಲದೆ, ತುಂಬಾ ಆಕ್ರಮಣಕಾರಿ ವರ್ತನೆ ತೋರಿದರು ಎಂಬ ಆರೋಪ ಇದೆ.

    ಐಪಿಎಸ್​ ಅಧಿಕಾರಿ ಜತೆ ಡಿಂಪಲ್​ ಹಯಾತಿ ಅನುಚಿತ ವರ್ತನೆ: ಕ್ರಿಮಿನಲ್​ ಪ್ರಕರಣ ದಾಖಲು

    ಐಪಿಎಸ್ ಅಧಿಕಾರಿ ರಾಹುಲ್​ ಹೆಗ್ಡೆ ಅವರು ಜುಬಿಲಿ ಹಿಲ್ಸ್​ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಂಪಲ್ ಹಯಾತಿ ಮತ್ತು ಆಕೆಯ ಸ್ನೇಹಿತನ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ವಿವಾದಕ್ಕೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚೆಗಷ್ಟೇ ಆಕೆ ನಟಿಸಿದ್ದ ರಾಮ ಬಾಣಂ ಚಿತ್ರ ತೆರೆಕಂಡಿತ್ತು. ಆದರೆ ಆ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. (ಏಜೆನ್ಸೀಸ್​)

    ಸ್ಪೀಕರ್​ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಯು.ಟಿ. ಖಾದರ್​ ಆಯ್ಕೆ: ಇಂದಿನ ಸಭೆಯಲ್ಲಿ ತೀರ್ಮಾನ ಸಾಧ್ಯತೆ

    ಅಂಡರ್​​​ಪಾಸ್ ಅವಘಡದಿಂದ ಎಚ್ಚೆತ್ತ ಬಿಬಿಎಂಪಿ: ಪಾಲಿಕೆ ತೆಗೆದುಕೊಳ್ಳಲು ಮುಂದಾಗಿರುವ ಕ್ರಮಗಳು ಹೀಗಿವೆ…

    ಸೈರನ್ ಹಾಕಿಕೊಂಡು ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಹೊಯ್ಸಳ ಸಿಬ್ಬಂದಿಗೆ ವ್ಯಾಪಕ ಮೆಚ್ಚುಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts