More

    RRR​ ಚಿತ್ರದ ಖಳನಟ ರೇ ಸ್ಟೀವನ್ಸನ್ ಇನ್ನಿಲ್ಲ: ಮೇ 25ರಂದು 59ನೇ ಹುಟ್ಟುಹಬ್ಬಕ್ಕೂ ಮುನ್ನವೇ ಕಣ್ಮರೆ

    ನವದೆಹಲಿ: ಎಸ್​.ಎಸ್​. ರಾಜಮೌಳಿ ನಿರ್ದೇಶನದ, ಜೂ. ಎನ್​ಟಿಆರ್​-ರಾಮ್​ಚರಣ್​ ಅಭಿನಯದ ಆಸ್ಕರ್​ ವಿಜೇತ “ಆರ್​ಆರ್​ಆರ್​” ಸಿನಿಮಾದಲ್ಲಿ ಖಳನಾಯಕ ಪಾತ್ರದಲ್ಲಿ ಮಿಂಚಿದ್ದ ಜಾರ್ಜ್​ ರೇಮಂಡ್ ಸ್ಟೀವನ್ಸನ್ ಅವರು ಕೊನೆಯುಸಿರೆಳೆದಿದ್ದಾರೆ.

    ಮೂರು ದಿನದಲ್ಲಿ ಹುಟ್ಟುಹಬ್ಬ

    ರೇಮಂಡ್ ಸ್ಟೀವನ್ಸನ್ ಉತ್ತರ ಐರಿಶ್ ಮೂಲದ ನಟ. 1964ರ ಮೇ 25ರಂದು ಲಿಸ್ಬರ್ನ್​ ನಗರದಲ್ಲಿ ಜನಿಸಿದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಇನ್ನು 3 ದಿನಗಳಲ್ಲಿ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಿ ವಿಧಿಯ ಕರೆಗೆ ಓಗೊಟ್ಟಿದ್ದಾರೆ.

    ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಶೇ.15ಕ್ಕೆ ಇಳಿಕೆ; ಜೂನ್​ನಿಂದ ಇವಿ ವಾಹನಗಳು ದುಬಾರಿ

    ಇಟಲಿಯಲ್ಲಿ ವಿಧಿವಶ

    ಸ್ಟೀವನ್ಸನ್​ ಅವರು ನಿನ್ನೆ (ಮೇ 22) ಇಟಲಿಯಲ್ಲಿ ವಿಧಿವಶರಾಗಿದ್ದಾರೆ. ಅವರ ಸಾವಿಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು, ಕಾರಣ ತಿಳಿದುಬರಬೇಕಿದೆ. ಸ್ಟೀವನ್ಸನ್​ ಮೂರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

    ಬ್ರಿಟಿಷ್ ಗವರ್ನರ್ ಸ್ಕಾಟ್

    ರೇಮಂಡ್ ಸ್ಟೀವನ್ಸನ್ ತಮ್ಮ ಸಿನಿಮಾ ವೃತ್ತಿಜೀವನವನ್ನು 1998ರಲ್ಲಿ ದಿ ಥಿಯರಿ ಆಫ್ ಫ್ಲೈಟ್‌ ಸಿನಿಮಾದೊಂದಿಗೆ ಪ್ರಾರಂಭಿಸಿದರು. 2008 ರಲ್ಲಿ ಬಿಡುಗೊಡೆಗೊಂಡ ಔಟ್‌ಪೋಸ್ಟ್ ಚಲನಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆರ್​ಆರ್​ಆರ್​ ಸಿನಿಮಾದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಪಾತ್ರದಲ್ಲಿ ಅದ್ಭುತ ನಟನೆಯ ಮೂಲಕ ಭಾರತೀಯರಿಗೂ ಪರಿಚಿತರಾದರು.

    ಸಾವಿಗೆ ಕಂಬನಿ

    ಅಂದಹಾಗೆ ಸ್ಟೀವನ್ಸನ್ ಅವರು ಥಾರ್ ಸಿನಿಮಾ ಸೇರಿದಂತೆ ಅನೇಕ ಜನಪ್ರಿಯ ಚಲನಚಿತ್ರಗಳು ಮತ್ತು ಟಿವಿ ಸರಣಿಗಳಲ್ಲಿ ನಟಿಸಿದ್ದಾರೆ. ಪ್ರತಿಭಾವಂತ ನಟನಾಗಿದ್ದ ಸ್ವೀವನ್ಸನ್​ ಅವರ ಅಕಾಲಿಕ ಮರಣ ಭಾರತೀಯ ಅಭಿಮಾನಿಗಳು ಸೇರಿದಂತೆ ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳಿಗೆ ಆಘಾತವಾಗಿದ್ದು, ನೆಚ್ಚಿನ ನಟ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

    ಇದನ್ನೂ ಓದಿ: ನೋಟು ಬದಲಾವಣೆ ಚಿಂತೆ ಬೇಡ; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ

    ಹೃದಯದಲ್ಲಿ ಸದಾ ಇರುತ್ತೀರಿ

    ಆರ್​ಆರ್​ಆರ್​ ಸಿನಿಮಾ ತಂಡವು ಕೂಡ ಸ್ಟೀವನ್ಸನ್​ ಸಾವಿಗೆ ಸಂತಾಪ ಸೂಚಿಸಿದೆ. ನಮ್ಮ ತಂಡಕ್ಕೆ ನಿಜಕ್ಕೂ ಆಘಾತಕಾರಿ ಸುದ್ದಿ. ರೇಮಂಡ್​ ಸ್ಟೀವನ್ಸನ್​ ಆತ್ಮಕ್ಕೆ ಶಾಂತಿ ದೊರಕಲಿ. ನೀವು ನಮ್ಮ ಹೃದಯದಲ್ಲಿ ಸದಾ ಇರುತ್ತೀರಿ ಸ್ಕಾಟ್​ ಸರ್​​ ಎಂದು ಟ್ವೀಟ್​ ಮೂಲಕ ಆರ್​ಆರ್​ಆರ್​ ತಂಡ ಕಂಬನಿ ಮಿಡಿದಿದೆ. (ಏಜೆನ್ಸೀಸ್​)

    ನೋಟು ಬದಲಾವಣೆ ಚಿಂತೆ ಬೇಡ; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ

    ಯೋಗ ಕ್ಷೇಮ | ಊತ ಕಡಿಮೆ ಮಾಡುವ ಜಲೋದರ ನಾಶಕ ಮುದ್ರೆ

    ಅಮೃತ ಸಿಂಚನ ಅಂಕಣ | ಒಂದು ಜಗತ್ತು ಒಂದು ಕುಟುಂಬ ಆದರ್ಶ ಸಾಕಾರವಾಗಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts