More

    ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಶೇ.15ಕ್ಕೆ ಇಳಿಕೆ; ಜೂನ್​ನಿಂದ ಇವಿ ವಾಹನಗಳು ದುಬಾರಿ

    ನವದೆಹಲಿ: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ (ಎಲೆಕ್ಟ್ರಿಕಲ್ ವೆಹಿಕಲ್- ಇವಿ) ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಶೇ.40ರಿಂದ ಶೇ.15ಕ್ಕೆ ಇಳಿಸಿದೆ. ಹೀಗಾಗಿ ದ್ವಿಚಕ್ರ ಇವಿಗಳ ಬೆಲೆ ಜೂನ್​ನಿಂದ ದುಬಾರಿ ಆಗಲಿದೆ. ಸಬ್ಸಿಡಿಯನ್ನು ತಗ್ಗಿಸುವಂತೆ ಬೃಹತ್ ಕೈಗಾರಿಕಾ ಸಚಿವಾಲಯ ಉನ್ನತ ಮಟ್ಟದ ಅಂತರ ಸಚಿವಾಲಯದ ಸಮಿತಿಗೆ ಶಿಫಾರಸು ಮಾಡಿತ್ತು.

    ಹಸಿರು ಇಂಧನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದ್ವಿಚಕ್ರ ಇವಿಗಳ ಬಳಕೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ‘ಫೇಮ್ ಇಂಡಿಯಾ’ ಯೋಜನೆಯಡಿ 10 ಸಾವಿರ ಕೋಟಿ ರೂ. ಅನುದಾನ ನೀಡಿದೆ. 2ನೇ ಹಂತದಲ್ಲಿ ದ್ವಿಚಕ್ರ ಇವಿಗಳಿಗೆ 3,500 ಕೋಟಿ ರೂ. ಅನುದಾನ ಒದಗಿಸಿದ್ದು, ಇದರ ಮೂಲಕ ಸಬ್ಸಿಡಿ ನೀಡುತ್ತಿದೆ. ಪರಿಣಾಮ ಇವಿಗಳ ಬಳಕೆ ಅಧಿಕವಾಗಿ ಸಬ್ಸಿಡಿಗೆ ಹೆಚ್ಚು ಮೊತ್ತ ಖರ್ಚಾಗುತ್ತಿದೆ.

    ಆದರೆ, ಇದಕ್ಕಾಗಿ ಮೀಸಲಿಟ್ಟ ನಿಧಿ ಕಡಿಮೆ ಆಗುತ್ತಿದೆ. ಆದ್ದರಿಂದ ಸಬ್ಸಿಡಿ ಪ್ರಮಾಣ ತಗ್ಗಿಸಲು ಹಾಗೂ ತ್ರಿಚಕ್ರ ಇವಿ ವಾಹನಗಳ ಸಬ್ಸಿಡಿಗೆ ಇರಿಸಿರುವ 1000 ಕೋಟಿ ರೂ.ಗಳಲ್ಲಿ ಬಳಕೆಯಾಗದ ಬಾಬ್ತನ್ನು ದ್ವಿಚಕ್ರ ಇವಿಗಳಿಗೆ ವರ್ಗಾಯಿಸಲು ಸಮಿತಿ ಶಿಫಾರಸು ಮಾಡಿತ್ತು. ಸಬ್ಸಿಡಿ ಕಡಿಮೆ ಮಾಡುವುದರಿಂದ ಹೆಚ್ಚಿನ ಗ್ರಾಹಕರಿಗೆ ಇದರ ಲಾಭ ದೊರೆಯುವಂತೆ ಮಾಡಬಹುದು. ಇಲ್ಲದಿದ್ದರೆ ಇನ್ನೆರಡು ತಿಂಗಳಲ್ಲಿ ಸಬ್ಸಿಡಿ ವೊತ್ತ ಬರಿದಾಗಲಿದೆ. ಹೀಗಾಗಿ ಸಬ್ಸಿಡಿ ಕಡಿತಕ್ಕೆ ‘ಫೇಮ್ ಇಂಡಿಯಾ’ದ ಕಾರ್ಯಕ್ರಮ ಅನುಷ್ಠಾನ ಮತ್ತು ಮಂಜೂರಾತಿ ಸಮಿತಿಗೆ (ಪಿಐಎಸ್​ಸಿ) ಶಿಫಾರಸು ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts