More

    ಕಬ್ಬನ್ ಪಾರ್ಕ್​ಗೆ ಹೋಗುವವರೇ ಹುಷಾರ್! ಇಲ್ಲಿದೆ ಕಾರಣ…

    ಬೆಂಗಳೂರು: ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಸೂಚಿಸಿದೆ. ಹೀಗಾಗಿ ಸಂಜೆಯ ವೇಳೆ ವಿಶ್ರಾಂತಿಗೆಂದು ಕಬ್ಬನ್​ ಪಾರ್ಕ್​​ಗೆ ತೆರಳುವ ಮಂದಿ ಎಚ್ಚರಿಕೆ ವಹಿಸಬೇಕಾಗಿದೆ.

    ನಗರದಲ್ಲಿ ಸುರಿದಿರುವ ಮಳೆಗೆ ಈಗಾಗಲೇ ಕಬ್ಬನ್ ಪಾರ್ಕ್​ನಲ್ಲಿರುವ ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿವೆ. ಸೆಂಚುರಿ ಕ್ಲಬ್ ಮುಂಭಾಗದಲ್ಲಿ ಮರವೊಂದು ಈಗಾಗಲೇ ಗಾಳಿಯ ತೀವ್ರತೆಗೆ ಬುಡಸಮೇತ ವಾಲಿದೆ. ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ 150ಕ್ಕೂ ಅಧಿಕ ಮರಗಳು ನಿನ್ನೆಯ ಮಳೆಗೆ ಧರೆಗುರುಳಿವೆ. ಸದ್ಯ ಸಿಬ್ಬಂದಿಗಳು ಮಳೆಯಿಂದ ಮುರಿದು ಬಿದ್ದಿರುವ ಮರಗಳನ್ನು ಕತ್ತರಿಸಿ ತೆರವು ಕಾರ್ಯ ಮಾಡುತ್ತಿದ್ದಾರೆ.

    ಇದನ್ನೂ ಓದಿ: ತುಮಕೂರು | ನಾಪತ್ತೆಯಾಗಿದ್ದ 4 ಮಕ್ಕಳನ್ನು ಪತ್ತೆ ಮಾಡಿದ ಪೊಲೀಸರು; ಪ್ರಕರಣದಲ್ಲಿ ಟ್ವಿಸ್ಟ್!

    ಗಾಳಿಯ ತೀವ್ರತೆಗೆ ನೂರಾರು ವರ್ಷದ ಹಳೆಯ ಮರಗಳು ರೆಂಬೆ, ಕೊಂಬೆ ಸಹಿತ ಕಬ್ಬನ್ ಪಾರ್ಕ್​ನಲ್ಲಿ ಮುರಿದು ಬೀಳುತ್ತಿವೆ. ವಿಶ್ರಾಂತಿಗೆಂದು ಪಾರ್ಕ್​ಗೆ ತೆರಳುವ ಮಂದಿ ತಮ್ಮ ತಮ್ಮ ಪ್ರಾಣದ ದೃಷ್ಟಿಯಿಂದ ಎಚ್ಚರಿಕೆ ವಹಿಸಬೇಕಾಗಿದೆ. ಜತೆಗೆ ಕಬ್ಬನ್ ಪಾರ್ಕ್​ ವ್ಯಾಪ್ತಿಯಲ್ಲಿ ಸಂಚಾರ ಮಾಡುವ ನಾಗರಿಕರು ಹಾಗೂ ವಾಹನ ಸವಾರರು ಎಚ್ಚರ ವಹಿಸುವುದು ಸೂಕ್ತ.

    ಗುಡುಗು ಸಹಿತ 2 ದಿನಗಳ ಕಾಲ ಮಳೆಯಾಗುವ ಸಾಧ್ಯತೆ

    ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 2 ದಿನಗಳ ಕಾಲ ಗುಡುಗು ಸಹಿತ ಮಹಿಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ನಗರದಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ ಇದೆ. ರಾಜಧಾನಿಯಲ್ಲಿ ಎರಡು ದಿನ ಮಳೆ ಸಾಧ್ಯತೆ ಇದೆ.

    ದಕ್ಷಿಣ ಒಳನಾಡು ಸೇರಿದಂತೆ ಕರಾವಳಿ ಭಾಗದಲ್ಲಿ ಇಂದು ಮಳೆ ಮುನ್ಸೂಚನೆ ನೀಡಲಾಗಿದ್ದು, ಈಗಾಗ್ಲೇ ಸಿಟಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

    ಇದನ್ನೂ ಓದಿ: ಕಾಫಿ ತೋಟದಲ್ಲಿ ಮಹಿಳೆಯ ಕಾಲು ಪತ್ತೆ ಪ್ರಕರಣ; ದೇಹ ಹುಡುಕಲು ಪೊಲೀಸರಿಂದ ಕೂಂಬಿಂಗ್

    ದಕ್ಷಿಣ ಕನ್ನಡ, ಉತ್ತರ ಕನ್ನಡ, ರಾಯಚೂರು, ಯಾದಗಿರಿ, ಬೆಳಗಾವಿ, ಧಾರವಾಡ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts