More

    VIDEO | ಚಲಿಸುವ ಕಾರಿನ ಮೇಲೆ ಕುಳಿತು ಯುವತಿಯ ಫೋಟೋಶೂಟ್; ದಂಡ ವಿಧಿಸಿದ ಪೊಲೀಸರು

    ಉತ್ತರಪ್ರದೇಶ: ವೆಡ್ಡಿಂಗ್ ಫೋಟೋಶೂಟ್ ಸದ್ಯದ ಟ್ರೆಂಡ್. ತಮ್ಮ ಮದುವೆಯ ಫೋಟೋಗಳು ವಿಶೇಷವಾಗಿ ಗಮನಸೆಳೆಯಬೇಕು ಎಂಬ ನಿಟ್ಟಿನಲ್ಲಿ ವಧು-ವರರು ಚಿತ್ರ-ವಿಚಿತ್ರ ಎಂದೆನಿಸುವ ಸಾಹಸಕ್ಕೆ ಮುಂದಾಗುತ್ತಾರೆ. ಈ ವೇಳೆ ಪ್ರಾಣಕ್ಕೇ ಅಪಾಯ ತಂದೊಡ್ಡಿದ ಘಟನೆಗಳು ಈ ಹಿಂದೆ ಸಾಕಷ್ಟು ವರದಿಯಾಗಿವೆ. ಪರಿಸ್ಥಿತಿ ಹೀಗಿದ್ದರೂ, ವೆಡ್ಡಿಂಗ್ ಫೋಟೋಶೂಟ್ ಕ್ರೇಝ್ ಮಾತ್ರ ಕಡಿಮೆ ಆಗಿಲ್ಲ.

    ಇದನ್ನೂ ಓದಿ: ವಾಹನ ಸವಾರರ ತೊಂದರೆ ಕಂಡು ಝೀರೋ ಟ್ರಾಫಿಕ್ ಸೌಲಭ್ಯ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

    ಸದ್ಯ ಪ್ರಯಾಗ್​ರಾಜ್​ನಲ್ಲಿ ವಧುವೊಬ್ಬಳು ಕಾರಿನ ಬಾನೆಟ್ ಮೇಲೆ ಕುಳಿತುಕೊಂಡು ಸಂಚರಿಸುತ್ತಾ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದಾಳೆ. ಮದುಮಗಳ ಧಿರಿಸಿನಲ್ಲಿ ಫೋಟೋಶೂಟ್ ಮಾಡುತ್ತಿರುವ ವಿಡಿಯೋವನ್ನು ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಅತ್ಯಂತ ಕಡಿಮೆ ಸಮಯದಲ್ಲಿ ವೈರಲ್ ಆಗಿದ್ದು, ಪೊಲೀಸರು ಗಮನಕ್ಕೂ ಬಂದಿದೆ.

    ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಅಪಾಯಕಾರಿಯಾಗಿ ಫೋಟೋಶೂಟ್ ಮಾಡುತ್ತಾ, ಸಂಚಾರಿ ನಿಯಮ ಉಲ್ಲಂಘಿಸಿರುವುದು ಸಬ್​ಇನ್ಸ್​ಪೆಕ್ಟರ್ ಅಮಿತ್ ಸಿಂಗ್ ಅವರ ಗಮನಕ್ಕೆ ಬಂದಿದೆ. ಕೂಡಲೇ ತಪ್ಪಿತಸ್ಥ ಯುವತಿಯನ್ನು ಪತ್ತೆ ಮಾಡಿದ್ದಾರೆ. ಅಲ್ಲಾಪುರದ ವರ್ಣಿಕಾ ಎಂಬ ಯುವತಿ ಕಾರಿನ ಮೇಲೆ ಕುಳಿತುಕೊಂಡು ಫೋಟೋಶೂಟ್ ಮಾಡಿಸಿರುವುದು ತಿಳಿದು ಬಂದಿದೆ. ತನಿಖೆ ನಡೆಸಿದಾಗ ಈ ಹಿಂದೆ ವಧುವಿನ ಧಿರಿಸಿನಲ್ಲಿ ಹೆಲ್ಮೆಟ್ ಧರಿಸದೆ ಸ್ಕೂಟರ್ ಚಲಾಯಿಸಿರುವುದು ಗೊತ್ತಾಗಿದೆ.

    ಇದನ್ನೂ ಓದಿ: ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭ; ಡಿಕೆಶಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕ!

    ಯುವತಿಯ ಮೇಲೆ ಕ್ರಮ ಜರುಗಿಸಿರುವ ಪೊಲೀಸರು ಕಾರಿನ ಬಾನೆಟ್ ಮೇಲೆ ಕುಳಿತು ನಿಯಮ ಉಲ್ಲಂಘಿಸಿರುವುದಕ್ಕೆ 15,000 ರೂ. ಹಾಗೂ ಹೆಲ್ಮೆಟ್ ಧರಿಸದೆ ಸ್ಕೂಟರ್ ಚಲಾಯಿಸಿದ್ದಕ್ಕೆ 1,500 ರೂ. ದಂಡ ವಿಧಿಸಿದ್ದಾರೆ. ಒಟ್ಟು 16500 ರೂ. ದಂಡ ಕಟ್ಟುವಂತೆ ಪೊಲೀಸರು ನೊಟೀಸ್ ನೀಡಿದ್ದಾರೆ.

    ಮೇ 16 ರಂದು ಆಲ್ ಸೇಂಟ್ಸ್ ಕ್ಯಾಥೆಡ್ರಲ್ ಬಳಿ ಕಾರಿನ ಮೇಲಿ ಕುಳಿತುಕೊಂಡು ಫೋಟೋಶೂಟ್ ಮಾಡಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ಯುವತಿ ಚಂದ್ರಶೇಖರ್ ಆಜಾದ್ ಪಾರ್ಕ್ ಬಳಿ ಹೆಲ್ಮೆಟ್ ಧರಿಸದೆ ಸ್ಕೂಟರ್‌ ಓಡಿಸಿದ್ದಾಳೆ ಎಂಬುದು ತಿಳಿದು ಬಂದಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಅಮಿತ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts