More

    ಕಾಫಿ ತೋಟದಲ್ಲಿ ಮಹಿಳೆಯ ಕಾಲು ಪತ್ತೆ ಪ್ರಕರಣ; ದೇಹ ಹುಡುಕಲು ಪೊಲೀಸರಿಂದ ಕೂಂಬಿಂಗ್

    ಕೊಡಗು: ಮಹಿಳೆಯೊಬ್ಬರ ಕಾಲು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಾಲು ಪತ್ತೆಯಾದ ಕಾಫಿ ತೋಟದಲ್ಲಿ ಇದೀಗ ಮೃತ ಮಹಿಳೆಯ ದೇಹಕ್ಕಾಗಿ 30ಕ್ಕೂ ಹೆಚ್ಚು ಪೊಲೀಸರು ಕೂಂಬಿಂಗ್ ಆರಂಭಿಸಿದ್ದಾರೆ. ಕೊಲೆ ನಡೆದಿರುವ ಹಾಗೂ ಮಹಿಳೆಯನ್ನು ಕಾಡು ಪ್ರಾಣಿ ತಿಂದಿರುಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಎರಡೂ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.

    ಇದನ್ನೂ ಓದಿ: VIDEO | ಜೀವಂತ ನವಿಲಿಗೆ ಚಿತ್ರಹಿಂಸೆ; ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು

    ಕೊಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು!

    ಮೇ 16ರಂದು ಚೋಂದು ಎಂಬ ಮಹಿಳೆ ನಾಪತ್ತೆಯಾಗಿದ್ದರು. ಇದಾಗಿ ನಾಲ್ಕು ದಿನಗಳ ಬಳಿಕ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಮಹಿಳೆಯ ಕಾಲು ಹಾಗೂ ಬಟ್ಟೆ ಪತ್ತೆಯಾಗಿದೆ. ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಲಿ ಅಥವಾ ಬೇರೆ ಯಾವುದಾದರು ಕಾಡು ಪ್ರಾಣಿ ಮಹಿಳೆಯನ್ನು ತಿಂದಿರುವ ಬಗ್ಗೆ ಪೊಲೀಸರು ಆರಂಭದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ತನಿಖೆಯ ಭಾಗವಾಗಿ ಪೊಲೀಸರು ಮೃತ ಮಹಿಳೆಯ ಪತಿ ಅಪ್ಪಿ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಇದನ್ನೂ ಓದಿ: ಇಂಡಿಕೇಟರ್ ಸರಿಯಾಗಿ ಹಾಕು ಎಂದಿದ್ದೇ ತಪ್ಪಾಯ್ತು! ಚಾಕು ಇರಿದು ಯುವಕನ ಹತ್ಯೆ

    ಮಹಿಳೆಯನ್ನು ಹತ್ಯೆಗೈದು ಬಳಿಕ ಕಾಲು ಕತ್ತರಿಸಿ ತೋಟದಲ್ಲಿ ಎಸೆದಿರುವ ಸಾಧ್ಯತೆಯೂ ಇದೆ. ಸದ್ಯ ಪತ್ತೆಯಾಗಿರುವ ಕಾಲನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ತನಿಖೆಯ ಮುಂದುವರಿದಿದೆ ಎಂದು ಕೊಡಗು ಜಿಲ್ಲಾ ಎಸ್​ಪಿ ಕೆ.ರಾಮರಾಜನ್ ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts