More

    ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನ

    ನರಗುಂದ: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಇಬ್ಭಾಗವಾಗಿ ಸರ್ಕಾರ ಪತನವಾಗಲಿದೆ. ಮಧ್ಯಂತರ ಚುನಾವಣೆಯೂ ನಡೆಯಬಹುದು. ಇದು ನಿಶ್ಚಿತ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

    ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಇತ್ತೀಚೆನ ಕೆಲವೊಂದು ಸರ್ವೇ ಪ್ರಕಾರ ಕರ್ನಾಟಕದಲ್ಲಿಯೂ 24 ರಿಂದ 25 ಸ್ಥಾನ ಬಿಜೆಪಿ ಗೆಲ್ಲಲ್ಲಿದೆ. ಈ ಫಲಿತಾಂಶದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆದರೆ, ಅದು ಅಷ್ಟೊಂದು ಸುಲಭದ ಮಾತಲ್ಲ. ಹೀಗಾಗಿ ಕಾಂಗ್ರೆಸ್‌ನಲ್ಲಿ ಎರಡು ಬಣಗಳಾಗಿ ಸರ್ಕಾರ ತನ್ನಷ್ಟಕ್ಕೆ ತಾನೇ ಪತನವಾಗಬಹುದು ಅಥವಾ ಮಧ್ಯಂತರ ಚುನಾವಣೆಯೂ ನಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನರೇಂದ್ರ ಮೋದಿಯವರ ದಕ್ಷ ಹಾಗೂ ಅಭಿವೃದ್ಧಿ ಪರವಾದ ಪ್ರಾಮಾಣಿಕ ಆಡಳಿತವನ್ನು ಸಮಾಜದ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ. 1 ವರ್ಷ 11 ತಿಂಗಳ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಅಭಿವೃದ್ಧಿರಹಿತ ಆಡಳಿತ ನಡೆಸುತ್ತಿರುವುದಕ್ಕೆ ಸ್ವತಃ ಕಾಂಗ್ರೆಸ್ ಶಾಸಕರೇ ಕೈಗನ್ನಡಿ. ನಾನು ಮಾಡಿದ ಹಲವಾರು ಅಭಿವೃದ್ಧಿ ಕೆಲಸಗಳನ್ನು ನರಗುಂದ ಮತಕ್ಷೇತ್ರದ ಜನರು ಇನ್ನೂ ಮರೆತಿಲ್ಲ. ಇಲ್ಲಿನ ಕಾಂಗ್ರೆಸ್‌ನಲ್ಲಿರುವ 2-3 ಗುಂಪು ರಾಜಕಾರಣ, ಪಿ.ಸಿ.ಗದ್ದಿಗೌಡರ ಸರಳತೆಯಿಂದ ಬಾಗಲಕೋಟೆಯಲ್ಲಿ ಈ ಬಾರಿಯೂ ಬಿಜೆಪಿ ಗೆಲುವು ನಿಶ್ಚಿತ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೇಳಿಕೊಳ್ಳುವುದಕ್ಕೆ ಯಾವುದೇ ಯೋಜನೆಗಳಿಲ್ಲ. ಹೀಗಾಗಿ ಕೇವಲ ಜಾತಿ ಆಧರಿಸಿ ಮತ ಕೇಳುವ ಹಂತಕ್ಕೆ ಬಂದು ನಿಂತಿದೆ. ನರಗುಂದದ ಮಾಜಿ ಶಾಸಕ ಬಿ.ಆರ್.ಯಾವಗಲ್ 5 ಬಾರಿ ಶಾಸಕರಾಗಿದ್ದರೂ ಇಂಜಿನಿಯರಿಂಗ್ ಕಾಲೇಜ್ ಮಾಡಿರುವುದನ್ನು ಬಿಟ್ಟರೆ ಹೇಳಿಕೊಳ್ಳಲು ಮತ್ತೇನೂ ಇಲ್ಲ. ಆದರೆ, ನಾನು ಮಾಡಿರುವ ಹಲವಾರು ಅಭಿವೃದ್ಧಿಪರ ಕೆಲಸ ಪ್ರತಿಯೊಂದು ಮನೆಗಳಿಗೆ ತಲುಪಿವೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನೀವು ಯಾರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀರಿ ಎಂಬುವುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಯಾವಗಲ್ ಅವರಿಗೆ ಸವಾಲೆಸೆದರು. ಬಿ.ಬಿ. ಐನಾಪೂರ, ನಾಗರಾಜ ನೆಗಳೂರ, ಸಂತೋಷ ಹಂಚಿನಾಳ, ಶಿವು ಹೆರಕಲ್ ಸುದ್ದಿಗೋಷ್ಠಿಯಲ್ಲಿದ್ದರು.

    ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ರ ಪರವಾಗಿ ನರಗುಂದ ಮತಕ್ಷೇತ್ರದಾದ್ಯಂತ ಈಗಾಗಲೇ ಒಂದು ಸುತ್ತಿನ ಚುನಾವಣೆ ಪ್ರಚಾರ ಪೂರ್ಣಗೊಳಿಸಲಾಗಿದೆ. ನರಗುಂದ, ಹೊಳೆಆಲೂರ, ಲಕ್ಕುಂಡಿ ಮೂರು ಮಂಡಲಗಳಲ್ಲಿ ಉತ್ತಮ ಜನಾಭಿಪ್ರಾಯ ವ್ಯಕ್ತವಾಗಿದೆ. ನರಗುಂದ ಪಟ್ಟಣದಲ್ಲಿ ಶುಕ್ರವಾರದಿಂದ ಪ್ರಚಾರ ಕಾರ್ಯ ಪ್ರಾರಂಭಿಸಿದ್ದು, ಗ್ರಾಮೀಣ ಸೇರಿ ಪ್ರತಿಯೊಂದು ಕಡೆಗಳಲ್ಲಿ ಎರಡ್ಮೂರು ದಿನಗಳಲ್ಲಿ ಚುನಾವಣೆಯ ಬಹಿರಂಗ ಪ್ರಚಾರ ಸಭೆಗಳನ್ನು ಪೂರ್ಣಗೊಳಿಸಲಾಗುವುದು.
    ಸಿ.ಸಿ.ಪಾಟೀಲ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts