More

    ತುಮಕೂರು | ನಾಪತ್ತೆಯಾಗಿದ್ದ 4 ಮಕ್ಕಳನ್ನು ಪತ್ತೆ ಮಾಡಿದ ಪೊಲೀಸರು; ಪ್ರಕರಣದಲ್ಲಿ ಟ್ವಿಸ್ಟ್!

    ತುಮಕೂರು: ಒಂದೇ ಗ್ರಾಮದಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದ ಮಕ್ಕಳನ್ನು ಪಟ್ಟನಾಯಕನಹಳ್ಳಿ ಪೊಲೀಸರು ಹಾಸನ ಪೊಲೀಸರ ಸಹಾಯದೊಂದಿಗೆ ರಕ್ಷಿಸಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ಒಂದೇ ಮನೆಯ ನಾಲ್ವರು ಮಕ್ಕಳು ಕಳೆದ ಶನಿವಾರ (ಮೇ 20)ದಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.

    ಇದನ್ನೂ ಓದಿ: ಇಂಡಿಕೇಟರ್ ಸರಿಯಾಗಿ ಹಾಕು ಎಂದಿದ್ದೇ ತಪ್ಪಾಯ್ತು! ಚಾಕು ಇರಿದು ಯುವಕನ ಹತ್ಯೆ

    ಈ ಬಗ್ಗೆ ಪಟ್ಟನಾಯಕಹಳ್ಳಿ ಡಿವೈಎಸ್​ಪಿ ನವೀನ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನಾಗಿ ರಚನೆ ಮಾಡಿ ಪೊಲೀಸರು ಮಕ್ಕಳ ಪತ್ತೆಕಾರ್ಯ ಆರಂಭಿಸಿದ್ದರು. ತುಮಕೂರು, ಚಿಕ್ಕಮಗಳೂರು, ಬೆಂಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಮಕ್ಕಳು ಮಾತ್ರ ಎಲ್ಲೂ ಪತ್ತೆಯಾಗಿರಲಿಲ್ಲ. ಇದೀಗ ಹಾಸನದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಾಲ್ವರು ಮಕ್ಕಳು ಪತ್ತೆಯಾಗಿದ್ದಾರೆ.

    ಪ್ರೀತಿಗಾಗಿ ಮನೆ ಬಿಟ್ಟು ಬಂದರು!

    ಕಳೆದ ಎರಡು ವರ್ಷಗಳಿಂದ ಬಾಲಕಿ ರಮೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ತಮ್ಮಿಬ್ಬರ ಪ್ರೀತಿಗೆ ಸಹಾಯ ಮಾಡಿದಕ್ಕೆ ಮೂವರು ಮಕ್ಕಳನ್ನು ಬಾಲಕಿ ತಮ್ಮ ಜತೆಯಲ್ಲೇ ಬೆಂಗಳೂರಿಗೆ ಕರೆದೊಯ್ದಿದ್ದಾಳೆ. ಬಳಿಕ ಬೆಂಗಳೂರಿನಿಂದ ಹಾಸನಕ್ಕೆ ತೆರಳಿದ್ದರು. ಇದೀಗ ಪೊಲೀಸರ ಸತತ ಪ್ರಯತ್ನದಿಂದ ನಾಲ್ವರು ಮಕ್ಕಳನ್ನು ಪೊಲೀಸರು ಪತ್ತೆ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts