More

    ವಿಶೇಷ ಮತಗಟ್ಟೆಗಳಿಗೆ ಸಿಇಓ ಕುರೇರ ಭೇಟಿ, ವೀಕ್ಷಣೆ

    ಬಾಗಲಕೋಟೆ: ಪ್ರಸಕ್ತ ಲೋಕಸಭಾ ಚುನಾವಣೆಗೆ ಮತದಾರರನ್ನು ಮತಗಟ್ಟೆಗೆ ಸೆಳೆಯುವಂತೆ ಮಾಡಲು ವಿಶೇಷ ಮತಗಟ್ಟೆಗಳು ಜಿಲ್ಲೆಯಾದ್ಯಂತ ಸಜ್ಜಾಗುತ್ತಿದ್ದು, ವಿವಿಧ ಮತಗಟ್ಟೆಗಳಿಗೆ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿ.ಪಂ ಸಿಇಓ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ.

    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತಗಟ್ಟೆಯತ್ತ ಮತದಾರರನ್ನು ಆಕರ್ಷಿಸಲು ಒಟ್ಟು 5 ಬಗೆಯ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಪ್ರತಿ ಮತಕ್ಷೇತ್ರಕ್ಕೆ ಐದು ಸಖಿ ಮತಗಟ್ಟೆಗಳು, ತಲಾ ಒಂದು ವಿಶೇಷ ಚೇತನರ, ಯುವ, ಥೀಮ್ ಹಾಗೂ ಸಾಂಪ್ರದಾಯಿಕ ಆಧಾರಿತ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಜ್ಜಾಗುತ್ತಿರುವ ವಿಶೇಷ ಮತಗಟ್ಟೆಗಳಿಗೆ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಭೇಟಿ ನೀಡಿ ವೀಕ್ಷಣೆ ಮಾಡುವದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

    ವಿಶೇಷ ಮತಗಟ್ಟೆ ಕುರಿತು ಮಾತನಾಡಿದ ಜಿ.ಪಂ ಸಿಇಓ ಶಶಿಧರ ಕುರೇರ ಪ್ರತಿ ಮತಕ್ಷೇತ್ರಕ್ಕೆ 9 ರಂತೆ ಒಟ್ಟು 7 ಮತಕ್ಷೇತ್ರಗಳಲ್ಲಿ 63 ಆಯ್ದ ಮತಗಟ್ಟೆಗಳಲ್ಲಿ ಸಂಸ್ಕøತಿ, ಪರಿಸರ, ಗ್ರಾಮೀಣ ಸೊಗಡು, ಐತಿಹಾಸಿಕ ಸ್ಥಳ. ವರ್ಲಿ ಚಿತ್ರಕಲೆ ಸೇರಿದಂತೆ ವಿವಿಧ ವಿಷಯಾಧಾರಿತ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಮಹಿಳಾ ಮತದಾರರನ್ನು ಸೆಳೆಯಲು ಸಖಿ ಮತಗಟ್ಟೆ (ಪಿಂಕ್), ಯುವ ಅಧಿಕಾರಿಗಳುಳ್ಳ ಯುವ ಮತಗಟ್ಟೆ, ವಿಶೇಷ ಚೇತನರು ನಿರ್ವಹಿಸುವ ವಿಶೇಷ ಚೇತನ ಮತಗಟ್ಟೆ ಸೇರಿದಂತೆ ಜಿಲ್ಲೆಯ ವಿವಿಧ ಕಲೆ, ಸಂಸ್ಕøತಿ, ಐತಿಹಾಸಿಕ ಸ್ಥಳ ಹಾಗೂ ಸಾಂಪ್ರದಾಯಿಕ ವಿಷಯಗಳ ಆಧಾರದ ಮೇಲೆ ಮಾದರಿ ಮತಗಟ್ಟೆಗಳನ್ನು ರೂಪಿಸಲಾಗುತ್ತಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಬೇಸಿಗೆಯ ಉಷ್ಣತೆ ಹೆಚ್ಚಾಗಿರುವದರಿಂದ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಮತದಾನದ ಪ್ರಮಾಣ ನೂರಕ್ಕೆ ನೂರರಷ್ಟು ಮಾಡುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಮತಗಟ್ಟೆ ಗೋಡೆಗಳ ಮೇಲೆ ಬಗೆ ಬಗೆಯ ಚಿತ್ರಗಳ ಜೊತೆಗೆ ಮತದಾನದ ಜಾಗೃತಿ ಕುರಿತು ಘೋಷ ವಾಕ್ಯಗಳನ್ನು ಬರೆಯಲಾಗುತ್ತಿದೆ. ವಿಶೇಷ ಚೇತನ ಮತದಾರರನ್ನು ಆಕರ್ಷಿಸುವ ರಂಗು ರಂಗಿನ ಚಿತ್ತಾರದ ಚಿತ್ರಗಳು, ಪಿಂಕ್ ಬಣ್ಣದಿಂದ ಅಲಂಕೃತಗೊಂಡ ಸಖಿ ಮತಗಟ್ಟೆಗಳು ಎಲ್ಲರನ್ನು ಕೈ ಬೀಸಿ ಕರೆಯುವಂತಿವೆ ಎಂದರು.


    ಭಾರತ ದೇಶದಂತಹ ಬೃಹತ್ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಅಚ್ಚುಕಟ್ಟಾಗಿ ಸಂಘಟಿಸುವುದು ಒಂದು ಸವಾಲಿನ ಕೆಲಸ. ಮತದಾರರಲ್ಲಿ ಜಾಗೃತಿ ಮೂಡಿಸಲು ಭಾರತ ಚುನಾವಣಾ ಆಯೋಗ ಹಲವು ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತ ಬಂದಿದೆ. ಆ ಮಾರ್ಗದಲ್ಲಿಯೇ ಜಿಲ್ಲಾ ಸ್ವೀಪ್ ಸಮಿತಿಯ ಮತ್ತೊಂದು ಅದ್ಬುತ ಕಲ್ಪನೆ ಇದಾಗಿದೆ. ಎಲ್ಲರನ್ನು ಒಳಗೊಳ್ಳುವಿಕೆಯ ಮಂತ್ರ ಈ ವಿಶೇಷ ಮತಗಟ್ಟೆಗಳ ನಿರ್ಮಾಣದ ಹಿಂದೆ ಇದೆ. ಮತದಾರರನ್ನು ಮತಗಟ್ಟೆಯ ಕಡೆ ಸೆಳೆದು ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಶಶಿಧರ ಕುರೇರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts