More

    ಯೋಗ ಕ್ಷೇಮ | ಊತ ಕಡಿಮೆ ಮಾಡುವ ಜಲೋದರ ನಾಶಕ ಮುದ್ರೆ

    ಯೋಗ ಕ್ಷೇಮ | ಊತ ಕಡಿಮೆ ಮಾಡುವ ಜಲೋದರ ನಾಶಕ ಮುದ್ರೆಜಲೋದರ ನಾಶಕ ಮುದ್ರೆಯು ದೇಹದಲ್ಲಿನ ನೀರಿನ ಸಮತೋಲನವನ್ನು ಉತ್ತೇಜಿಸುವ ಮೂಲಕ ಗುಣಪಡಿಸಲು ವಿನ್ಯಾಸಗೊಳಿಸಲಾದ ಯೋಗದ ಸೂಚಕವಾಗಿದೆ. ಈ ಮುದ್ರೆಯ ಹೆಸರು ಸಂಸ್ಕೃ ಪದದಿಂದ ಬಂದಿದೆ. ಜಲ ಅಂದರೆ ನೀರು, ಉದರ ಅಂದರೆ ಹೊಟ್ಟೆ, ನಾಶಕ ಅಂದರೆ ಮುಕ್ತಾಯ ಮತ್ತು ಮುದ್ರಾ ಅಂದರೆ ಸನ್ನೆ ಎಂದರ್ಥ.

    ಜಲೋದರ ಎಂಬುದು ಡ್ರಾಪ್ಸಿ ಅಥವಾ ಎಡಿಮಾ ಎಂಬ ಸಂಸ್ಕೃ ಪದವಾಗಿದೆ. ಇದು ದ್ರವದ ಅಸಹಜ ಶೇಖರಣೆಯಿಂದ ಉಂಟಾಗುವ ಮೃದು ಅಂಗಾಂಶಗಳ ಊತವಾಗಿದೆ. ಇದು ನಮ್ಮ ದೇಹದಲ್ಲಿನ ನೀರಿನ ಅಂಶಗಳ ಸಮತೋಲವನ್ನು ಉತ್ತೇಜಿಸುತ್ತದೆ. ಇದು ನಮ್ಮ ದೇಹದಿಂದ ವಿಶೇಷವಾಗಿ ಹೊಟ್ಟೆಯಿಂದ ಹೆಚ್ಚುವರಿ ನೀರನ್ನು ತೆಗೆದುಹಾಕುತ್ತದೆ. ಕಿರುಬೆರಳು ನಮ್ಮ ದೇಹದಲ್ಲಿರುವ ನೀರಿನ ಅಂಶವನ್ನು ಸೂಚಿಸುತ್ತದೆ. ನಮ್ಮ ದೇಹದಲ್ಲಿ ಹೆಚ್ಚುವರಿ ನೀರು ಉಳಿದುಕೊಂಡಾಗ ಸ್ವಲ್ಪ ಭಾರವಾಗಿ ಕಾಣುತ್ತದೆ. ಈ ಮುದ್ರೆಯನ್ನು ಅಭ್ಯಾಸಮಾಡುವುದರಿಂದ ಅದು ಸಂಭವಿಸದಂತೆ ತಡೆಯುತ್ತದೆ. ಇದು ದೇಹ ಮತ್ತು ಚರ್ಮವನ್ನು ತೇವವಾಗಿರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಚಳಿಗಾಲದ ತಿಂಗಳುಗಳಲ್ಲಿ ನಮಗೆ ಎದುರಾಗುವ ಯಾವುದೇ ರೀತಿಯ ಶುಷ್ಕತೆಯನ್ನು ತಡೆಯುತ್ತದೆ. ಒಣ ತ್ವಚೆ ಇರುವವರು ಈ ಮುದ್ರಾ ಅಭ್ಯಾಸದಿಂದ ಸುಲಭವಾಗಿ ಪ್ರಯೋಜನ ಪಡೆಯಬಹುದು, ಇದು ಅತಿಯಾದ ಮೂತ್ರ ವಿಸರ್ಜನೆಯನ್ನು ನಿಲ್ಲಿಸಲು ಸಹಾಯಮಾಡುತ್ತದೆ.

    ಜಲೋದರನಾಶಕ ಮುದ್ರೆಯ ವಿಧಾನ

    ಕಿರು ಬೆರಳಿನ ತುದಿಭಾಗವನ್ನು ಹೆಬ್ಬೆರಳಿನ ಬುಡಕ್ಕೆ ತಾಗಿಸಿ ಹೆಬ್ಬೆರಳನ್ನು ಕಿರುಬೆರಳಿನ ಮೇಲಿಡಬೇಕು. ಉಳಿದ ಬೆರಳುಗಳು ನೇರವಾಗಿರಲಿ. ಸುಮಾರು 20 ರಿಂದ 45 ನಿಮಿಷ ಈ ಮುದ್ರೆಯನ್ನು ಮಾಡಿದ ನಂತರ 10 ನಿಮಿಷ ಪ್ರಾಣಮುದ್ರೆಯನ್ನು ಮಾಡುವುದರಿಂದ ಉತ್ತಮ ಫಲ ನಿರೀಕ್ಷಿಸಬಹುದು. ಅಭ್ಯಾಸಮಾಡುವಾಗ ನೀರು ಕುಡಿಯಿರಿ. ನಿಮ್ಮ ಬೆರಳುಗಳ ಮೇಲೆ ನೀವು ಹೆಚ್ಚಿನ ಒತ್ತಡವನ್ನು ಹಾಕದಂತೆ ಗಮನವಹಿಸಿ. ಮುದ್ರೆಯನ್ನು ಎರಡೂ ಕೈಯಲ್ಲಿ ಅಭ್ಯಾಸ ಮಾಡಿ.

    ಪ್ರಯೋಜನವೇನು?

    ಮುಟ್ಟಿನ ಮತ್ತು ಭಾರೀ ಸೆಳೆತದಿಂದ ಉಂಟಾಗುವ ನೋವನ್ನು ನಿಯಂತ್ರಿಸಲು ಸಹ ಇದು ಸಹಾಯ ಮಾಡುತ್ತದೆ. ಅತಿಯಾಗಿ ಮೂಗು ಮತ್ತು ಕಣ್ಣಿನಿಂದ ಸ್ರವಿಸುವ ನೀರನ್ನು ತಡೆಗಟ್ಟಲು ಈ ಮುದ್ರೆಯು ಸಹಕಾರಿಯಾಗಿದೆ. ಅಗ್ನಿ ತತ್ವ ಮತ್ತು ಜಲತತ್ವಗಳ ಸೇರುವಿಕೆಯಿಂದಾಗಿ ಅತಿಯಾದ ಮೂತ್ರದ ತೊಂದರೆಯನ್ನು ಶಮನಗೊಳಿಸುತ್ತದೆ. ಅಲ್ಲದೆ ಶರೀರದಲ್ಲಿ ಬರುವ ಬಾವು ಸಮಸ್ಯೆಗೂ ಇದರಿಂದ ಪರಿಹಾರ ಕಾಣಬಹುದು. ತುಂಬಾ ಶೀತವನ್ನು ನಿಯಂತ್ರಿಸುತ್ತದೆ ಮತ್ತು ಗಂಟಲು ಬೇನೆ ನಿಯಂತ್ರಣವಾಗುತ್ತದೆ. ಅತೀ ಭೇದಿಯನ್ನು ನಿಯಂತ್ರಿಸುತ್ತದೆ. ಪಿತ್ತ, ಕಫ ದೋಷವನ್ನು ಸರಿಪಡಿಸಬಹುದು. ವಿಪರೀತ ಜೊಲ್ಲು ಸುರಿಸುವುದನ್ನು ಈ ಮುದ್ರೆಯಿಂದ ನಿಯಂತ್ರಿಸಬಹುದು. ಗ್ರಂಥಿಗಳ ಅತಿಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆನೆಕಾಲಿನಲ್ಲಿ ಬರುವ ಊತವನ್ನು ನಿಯಂತ್ರಿಸಬಹುದು. ಅತಿಯಾದ ಕಣ್ಣಿನ ತೇವಾಂಶವನ್ನು ನಿಯಂತ್ರಿಸಬಹುದು. ಈ ಮುದ್ರೆಯಿಂದ ದೇಹದ ಯಾವುದೇ ಭಾಗದಲ್ಲಿ ಉಂಟಾಗುವ ಊತ, ವಿಶೇಷವಾಗಿ ಮುಖ ಕೈ ಕಾಲುಗಳ ಊತ ಕಡಿಮೆಯಾಗುತ್ತದೆ.

    ವಿಶೇಷ ಸೂಚನೆ

    ಈ ಮುದ್ರೆಯನ್ನು ಪ್ರತಿದಿನ ಅಭ್ಯಾಸ ಮಾಡದಂತೆ ತಜ್ಞರು ಶಿಫಾರಸು ಮಾಡುತ್ತಾರೆ. ಕೆಲವು ಷರತ್ತುಗಳ ಅನ್ವಯ ಈ ಮುದ್ರೆಯನ್ನು ಅಭ್ಯಾಸಮಾಡಿ. ಜಲೋದರ ನಾಶಕ ಮುದ್ರೆಯನ್ನು ಯಾವಾಗ ಮತ್ತು ಎಷ್ಟು ಸಮಯದವರೆಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡು ಅಭ್ಯಾಸಮಾಡಿ. ದೇಹವು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ನೀವು ಭಾವಿಸಿದಾಗ ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ನಿಮ್ಮ ಕಣ್ಣುಗಳು, ಮೂಗು ಮತ್ತು ಬಾಯಿಯು ಹೆಚ್ಚು ದ್ರವವನ್ನು ಉತ್ಪಾದಿಸುತ್ತದೆ ಎಂದು ಭಾವಿಸಿದರೆ ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಮುದ್ರೆಗಳನ್ನು ಗುರುವಿನ ಮಾರ್ಗದರ್ಶನ, ಸಲಹೆ ಪಡೆದು ಅಭ್ಯಾಸ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts