More

    ಸ್ಪೀಕರ್​ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಯು.ಟಿ. ಖಾದರ್​ ಆಯ್ಕೆ: ಇಂದಿನ ಸಭೆಯಲ್ಲಿ ತೀರ್ಮಾನ ಸಾಧ್ಯತೆ

    ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​​ನಿಂದ ಯು.ಟಿ. ಖಾದರ್​ ಅವರನ್ನು ಆಯ್ಕೆ ಮಾಡಲಾಗಿದ್ದು, ಇಂದಿನ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ ಎಂಬ ಮಾಹಿತಿ ಕಾಂಗ್ರೆಸ್​ ಮೂಲಗಳಿಂದ ತಿಳಿದುಬಂದಿದೆ.

    ಆರ್​.ವಿ. ದೇಶಪಾಂಡೆ ಹಾಗೂ ಎಚ್. ಕೆ. ಪಾಟೀಲ್ ಅವರು ಸ್ಪೀಕರ್ ಆಗಿ ಒಪ್ಪಲು ತಯಾರಿಲ್ಲ. ಇಬ್ಬರು ನಾಯಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಯು.ಟಿ. ಖಾದರ್ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್​ ಮುಂದಾಗಿದೆ. ಇಂದಿನ ಸಭೆಯ ಬಳಿಕ ನಿರ್ಧಾರ ಪ್ರಕಟವಾಗಲಿದೆ.

    ಖಾದರ್ ಮನವೊಲಿಸುವಲ್ಲಿ ಕೈ ವರಿಷ್ಠರು ಯಶಸ್ವಿ

    ಸ್ಪೀಕರ್ ಸ್ಥಾನ ಅಲಂಕರಿಸಲು ಹಿರಿಯ ನಾಯಕರು ನಿರಾಕರಿಸಿದ ಹಿನ್ನೆಲೆಯಲ್ಲಿ ರಾತ್ರಿಯೇ ಎಐಸಿಸಿ ನಾಯಕರು ಬೆಂಗಳೂರಿಗೆ ಬಂದಿಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲಾ ಆಗಮಿಸಿದ್ದಾರೆ. ತಡರಾತ್ರಿ ಯು.ಟಿ ಖಾದರ್​ ಅವರನ್ನು ಖಾಸಗಿ ಹೋಟೆಲ್​ಗೆ ಕರೆಸಿಕೊಂಡು ಸ್ಪೀಕರ್​ ಸ್ಥಾನದ ಬಗ್ಗೆ ಚರ್ಚೆ ನಡೆಸಿ, ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಸೈರನ್ ಹಾಕಿಕೊಂಡು ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಹೊಯ್ಸಳ ಸಿಬ್ಬಂದಿಗೆ ವ್ಯಾಪಕ ಮೆಚ್ಚುಗೆ!

    ಎಐಸಿಸಿ ನಾಯಕರ ಭರವಸೆ

    ಆರ್.ವಿ. ದೇಶಪಾಂಡೆ ಹಾಗೂ ಎಚ್​.ಕೆ ಪಾಟೀಲ್​ ಅವರು ಸ್ಪೀಕರ್ ಸ್ಥಾನ ನಿರಾಕರಣೆ ಮಾಡಿದ ಬಳಿಕ ಎಐಸಿಸಿ ನಾಯಕರು ಟಿ.ಬಿ. ಜಯಚಂದ್ರ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರು. ಆದರೆ, ಎಷ್ಟೇ ಪ್ರಯತ್ನಿಸಿದರೂ ಜಯಚಂದ್ರ ಅವರು ಮಾತ್ರ ಸಂಪರ್ಕಕ್ಕೆ ಸಿಗಲೇ ಇಲ್ಲ. ತಮ್ಮ ಮೊಬೈಲ್​ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಕೊನೆಗೆ ಯು.ಟಿ ಖಾದರ್ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ್ದು, ಎರಡು ವರ್ಷಗಳ ನಂತರ ಸಚಿವ ಸ್ಥಾನ ನೀಡುವುದಾಗಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಭರವಸೆ ನೀಡಿದ್ದಾರೆ. ಎಐಸಿಸಿ ನಾಯಕರ ಭರವಸೆಯಿಂದಾಗಿ ಒಲ್ಲದ ಮನಸ್ಸಿನಿಂದಲೇ ಸ್ಪೀಕರ್ ಸ್ಥಾನಕ್ಕೆ ಖಾದರ್​ ಒಪ್ಪಿಗೆ ಸೂಚಿಸಿದ್ದಾರೆ. ಯು.ಟಿ. ಖಾದರ್​ ಅವರು ಮಂಗಳೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಅಂಡರ್​​​ಪಾಸ್ ಅವಘಡದಿಂದ ಎಚ್ಚೆತ್ತ ಬಿಬಿಎಂಪಿ: ಪಾಲಿಕೆ ತೆಗೆದುಕೊಳ್ಳಲು ಮುಂದಾಗಿರುವ ಕ್ರಮಗಳು ಹೀಗಿವೆ…

    ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಶೇ.15ಕ್ಕೆ ಇಳಿಕೆ; ಜೂನ್​ನಿಂದ ಇವಿ ವಾಹನಗಳು ದುಬಾರಿ

    ದೇವರಿಗೆ ಚಿನ್ನದ ಸೀರೆ ಉಡುಗೊರೆ ಕೊಟ್ಟ ಭಕ್ತರು: ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts