More

    ಕೊನೇ ಕ್ಷಣದಲ್ಲಿ ತಾಳಿ ಕಟ್ಟಲು ಒಲ್ಲೆನೆಂದ ವಧು

    ಉಪ್ಪಿನಂಗಡಿ: ಮದುವೆ ಮಂಟಪದಲ್ಲಿ ವರನಿಂದ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆಯೇ ಮುರಿದುಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

    ಕೊಣಾಲು ಗ್ರಾಮದ ಕೋಲ್ಪೆ ದಿ.ಬಾಬು ಗೌಡರ ಪುತ್ರ ಉಮೇಶ ಎಂಬುವರ ವಿವಾಹ, ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ದಿ.ಕೊರಗಪ್ಪ ಗೌಡರ ಪುತ್ರಿ ಸರಸ್ವತಿ ಜತೆ ನಿಗದಿಯಾಗಿತ್ತು. ಶುಕ್ರವಾರ ಬೆಳಗ್ಗೆ 11.35ಕ್ಕೆ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಡೆದು ಮಧ್ಯಾಹ್ನ ವರನ ಮನೆಯಲ್ಲಿ ಸತ್ಕಾರ ಕೂಟ ನಿಗದಿಯಾಗಿತ್ತು. ವರ ಹಾಗೂ ವಧುವಿನ ಕಡೆಯವರು ಮದುವೆ ದಿಬ್ಬಣದಲ್ಲಿ ದೇವಸ್ಥಾನಕ್ಕೆ ಬಂದಿದ್ದರು. ಧಾರೆ ಸೀರೆ ಉಟ್ಟು, ಶೃಂಗಾರದೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದ ವಧು ಸರಸ್ವತಿ, ವರ ಉಮೇಶ ಜತೆ ಹೂಮಾಲೆ ಬದಲಿಸಿದ್ದರು. ಬಳಿಕ ವರ ತಾಳಿ ಕಟ್ಟಲು ಮುಂದಾದಾಗ ವಧು, ಈ ಮದುವೆ ನನಗೆ ಇಷ್ಟ ಇಲ್ಲ ಎಂದು ಹೇಳಿ ತಾಳಿ ಕಟ್ಟಲು ಅವಕಾಶ ನೀಡಲಿಲ್ಲ. ಇದರಿಂದ ಎರಡೂ ಕಡೆಯವರೂ ವಿಚಲಿತಗೊಂಡು ವಧುವಿನ ಮನವೊಲಿಕೆಗೆ ಮುಂದಾದರೂ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದರಿಂದ ಎರಡೂ ಕಡೆಯವರೂ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದರು.

    ಔತಣ ಕೂಟಕ್ಕೆಸಿದ್ಧತೆ

    ವರನ ಮನೆಯಲ್ಲಿ ಮದುವೆ ಔತಣಕೂಟಕ್ಕೆ ಮಾಂಸಾಹಾರಿ ಊಟದ ಸಿದ್ಧತೆ ಮಾಡಲಾಗಿತ್ತು. ಸುಮಾರು 500 ಮಂದಿಗೆ ಊಟ ಸಿದ್ಧವಾಗಿದ್ದು ಒಂದು ಸಾವಿರದಷ್ಟು ಐಸ್‌ಕ್ರೀಮ್ ಸಹ ತರಿಸಲಾಗಿತ್ತು. ಮದುವೆ ಮುರಿದು ಬಿದ್ದಿರುವುದರಿಂದ ಇವೆಲ್ಲವೂ ಹಾಗೆಯೇ ಉಳಿದಿದೆ. ಎರಡೂ ಕಡೆಯವರಿಗೂ ಲಕ್ಷಾಂತರ ರೂ. ನಷ್ಟವಾಗಿದೆ.

    ಠಾಣೆಯಲ್ಲಿ ವರನಿಂದ ನಿರಾಕರಣೆ

    ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ತನ್ನಿಂದಾಗಿರುವ ಅಚಾತುರ್ಯಕ್ಕೆ ಪಶ್ಚಾತಾಪ ಪಟ್ಟು ಮದುವೆ ಆಗಲು ಒಪ್ಪಿಗೆ ಸೂಚಿಸಿದರು. ಆದರೆ ಇದನ್ನು ವರ ನಿರಾಕರಿಸಿದರು. ಇದರಿಂದ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ತಮ್ಮ-ತಮ್ಮ ಮನೆಗಳಿಗೆ ತೆರಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts