More

    ವಾತಾವರಣದ ವಿಚಿತ್ರ ಆಟ; ಈ ಬಾರಿ ಬೆಂಗಳೂರಲ್ಲಿ ಗಾಳಿ ಮಳೆಗೆ ಮರಗಳು ಉರುಳಿದ್ದು ಯಾಕೆ ಗೊತ್ತಾ?

    ಬೆಂಗಳೂರು: ಬೆಂಗಳೂರಿನಲ್ಲಿ ಈ ಬಾರಿಯ ಗಾಳಿ ಮಳೆಗೆ ಅತಿ ಹೆಚ್ಚು ಗಿಡಮರಗಳು ನೆಲಕ್ಕುರುಳಿವೆ.  ಅದಲ್ಲದೇ ಮೇ ತಿಂಗಳ ಕೊನೆಗೂ ಮುನ್ನವೇ ದಿಢೀರ್ ಆಗಿ ಮಳೆ ಹೆಚ್ಚಾಗಿದೆ. ಇನ್ನು ಕಳೆದ ಎರಡು ಮೂರು ದಿನಗಳಿಂದ ಆಗಿದ್ದು ಬಿರುಗಾಳಿ ಸಹಿತ ಮಳೆ ಅಲ್ಲ ನೆಲಗಾಳಿ ಸಹಿತ ಮಳೆ.

    ಹಿಂದಿನ ಮಳೆ ವೇಳೆ ಸಾಮಾನ್ಯವಾಗಿ ಮೇಲ್ಮಟ್ಟದಲ್ಲಿ ಬಿರುಗಾಳಿ ಇರುತ್ತಿತ್ತು. ಇದರ ಪರಿಣಾಮ ಮಳೆ ಹೆಚ್ಚು, ಗಾಳಿ ಕಡಿಮೆ ಆಗಿ ಗಿಡಮರಗಳಿಗೆ ಹೆಚ್ಚಿನ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ಈ ಬಾರಿ ಮಳೆ ಕಡಿಮೆಯಾಗಿದ್ದು ನೆಲಗಾಳಿ ಹೆಚ್ಚಾದ ಪರಿಣಾಮವಾಗಿ. ಹೀಗಾಗಿಯೇ ಈ ಪ್ರಮಾಣದ ಅವಾಂತರಗಳು ಸೃಷ್ಟಿಯಾಗಿವೆ.

    ಭೂಮಿಯ ಕೆಳಮಟ್ಟದಲ್ಲಿ ಗಾಳಿ ಬೀಸಿದ್ದರಿಂದ ಸಿಲಿಕಾನ್ ಸಿಟಿಯಲ್ಲೇ 500ಕ್ಕೂ ಹೆಚ್ಚು ಗಿಡ-ಮರ ಹಾನಿಯಾಗಿದ್ದು ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೂ ಹಾನಿಯುಂಟಾಗಿದೆ. ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ನೆಲಗಾಳಿ ಬೀಸಿದ್ದು ನಗರದ ಪ್ರಮುಖ ಹಾಗೂ‌ ಒಳ ರಸ್ತೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಗಿಡಮರಗಳು ಧರಗೆ ಉರುಳಿವೆ.

    ಸದ್ಯ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ನೆಲಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೆಲಗಾಳಿ ಗಂಟೆಗೆ 40 – 50 ಕಿ.ಮೀ ವೇಗದಲ್ಲಿ ಬೀಸಲಿದ್ದು ಈ ಹಿನ್ನೆಲೆಯಲ್ಲಿ ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

    ಯಾಕೆ ಈ ಮಳೆ? ನೆಲಗಾಳಿ ಬರಲು ಕಾರಣವೇನು?

    ಅರಬ್ಬಿ ಸಮುದ್ರ ಮೇಲ್ಮೈ ಮೇಲೆ ಸುಳಿಗಾಳಿ ಉಂಟಾಗಿ ಮಳೆ ಬರುತ್ತಿದ್ದು ಸಮುದ್ರ ಮಟ್ಟದಿಂದ ಕೇವಲ 900 ಮೀಟರ್ ನಲ್ಲಿ ಸುಳಿಗಾಳಿ ಕಾಣಿಸಿಕೊಂಡಿದೆ. ಈ ಸುಳಿಗಾಳಿ ತಮಿಳುನಾಡು, ಆಂಧ್ರ, ಕರ್ನಾಟಕದ ಮೂಲಕದ ಹಾದುಹೋಗುತ್ತಿದ್ದು ಇದು ರಾಜ್ಯದ ಹಲವು ಭೂ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts