More

    ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಬಸ್​ ಪ್ರಯಾಣ: ಪುರುಷರಿಗೆ ಶುರುವಾಯ್ತು ಹೊಸ ಟೆನ್ಶನ್​

    ಬೆಂಗಳೂರು: ಚುನಾವಣೆಗೂ ಮುನ್ನ ಘೋಷಿಸಿದ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಕಾಂಗ್ರೆಸ್​ ಸರ್ಕಾರ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ, 200 ಯೂನಿಟ್​ ವಿದ್ಯುತ್​ ಮತ್ತು 10 ಕೆಜಿ ಅಕ್ಕಿ ಉಚಿತವಾಗಿ ನೀಡುವ ಗ್ಯಾರಂಟಿ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದ್ದು, ಉಳಿದ ಎರಡು ಗ್ಯಾರಂಟಿಗಳಾದ ಮನೆಯೊಡತಿಗೆ 2000 ರೂಪಾಯಿ ಮತ್ತು ನಿರುದ್ಯೋಗಿ ಪದವೀಧರರಿಗೆ 3000 ಸಾವಿರ ರೂ. ಹಣ ನೀಡುವ ಯೋಜನೆಯನ್ನು ಕೆಲ ತಿಂಗಳಗಳು ನಂತರ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಇದನ್ನೂ ಓದಿ: ಎರಡು ಹೃದಯಗಳನ್ನು ಒಂದು ಮಾಡಿದ ಹಾವು! ಯುವಕ-ಯುವತಿಯ ಪ್ರೀತಿಗೆ ಉರಗನ ನಂಟು

    ಗ್ಯಾರಂಟಿಗಳ ಜಾರಿ ಸರ್ಕಾರಕ್ಕೂ ತಲೆನೋವಾಗಿದೆ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವ ಆತಂಕ ಒಂದೆಡೆಯಾದರೆ, ಜನರಲ್ಲಿ ಮನಸ್ತಾಪಗಳು ಉಂಟಾಗುವ ಭಯವು ಶುರುವಾಗಿದೆ. ಈಗಾಗಲೇ ಮನೆಯೊಡತಿಗೆ 2000 ರೂ. ಗ್ಯಾರಂಟಿ ಯೋಜನೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಮನೆಯೊಡತಿ ಅತ್ತೆನಾ? ಸೊಸೆನಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಅತ್ತೆ-ಸೊಸೆ ನಡುವೆ ಮತ್ತಷ್ಟು ಮನಸ್ತಾಪಕ್ಕೆ ಈ ಗ್ಯಾರಂಟಿ ಕಾರಣವಾಗಲಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಇದಿಷ್ಟೇ ಅಲ್ಲದೆ, ತೆರಿಗೆದಾರರ ಹಣವನ್ನು ಉಚಿತಗಳಿಗೆ ವ್ಯಯಿಸಿದರೆ, ಅಭಿವೃದ್ಧಿ ಕೆಲಸಗಳು ಹೇಗೆ ಆಗುತ್ತವೆ ಎಂಬ ಪ್ರಶ್ನೆಯು ಕೇಳಿಬರುತ್ತಿದೆ.

    ಪುರುಷರಿಗೆ ಹೊಸ ಟೆನ್ಶನ್​

    ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗ್ಯಾರಂಟಿಯಿಂದ​ ಪುರುಷ ಪ್ರಯಾಣಿಕರಿಗೆ ಹೊಸ ಟೆನ್ಶನ್​ ಶುರುವಾಗಿದೆ. ಉಚಿತಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದರೆ ಹೆಚ್ಚಿನ ಮಹಿಳೆಯರು ಪ್ರಯಾಣ ಮಾಡಲಿದ್ದಾರೆ. ಇದರಿಂದ ಎಲ್ಲ ಬಸ್​ಗಳಲ್ಲಿ ಬರೀ ಮಹಿಳೆಯರೇ ಇರುತ್ತಾರೆ. ಮಹಿಳೆಯರಿಗೆ ಮೀಸಲಾದ ಸೀಟುಗಳ ಜತೆಗೆ ಇಡೀ ಬಸ್​ ಸೀಟುಗನ್ನು ಮಹಿಳೆಯರೇ ಆವರಿಸಿಕೊಂಡರೆ ನಾವು ಏನು ಮಾಡೋದು ಎಂದು ಪುರುಷ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.

    ದಂಡ ಹಾಕಿ

    ಮಹಿಳೆಯರು ಸೀಟಿನಲ್ಲಿ ಪುರುಷರು ಕುಳಿತುಕೊಂಡರೆ ಹೇಗೆ ದಂಡ ವಿಧಿಸುತ್ತೀರೋ ಅದೇ ರೀತಿ ಪುರುಷರ ಸೀಟಿನಲ್ಲಿ ಮಹಿಳೆಯರು ಕುಳಿತರೆ ಅವರಿಗೂ ದಂಡ ವಿಧಿಸಿ ಎಂಬ ಒತ್ತಾಯಗಳು ಪುರುಷ ಪ್ರಯಾಣಿಕರಿಂದ ಕೇಳಿಬರುತ್ತಿವೆ. ಎಲ್ಲ ಸೀಟುಗಳಲ್ಲಿ ಮಹಿಳೆಯರೇ ತುಂಬಿಕೊಂಡರೆ, ಪುರುಷರು ಪ್ರಯಾಣಿಸುವ ಕಷ್ಟಕರವಾಗುತ್ತದೆ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಸರ್ಕಾರ ಈ ಬಗ್ಗೆ ಗಮನವಹಿಸಿ ನಿಯಮಗಳನ್ನೂ ಸಹ ಜಾರಿಗೆ ತರಬೇಕೆಂಬುದು ಪುರಷ ಪ್ರಯಾಣಿಕರ ಬೇಡಿಕೆಯೂ ಆಗಿದೆ.

    ಇದನ್ನೂ ಓದಿ: ಸೈಕ್ಲೋನ್​ನಿಂದ ಕೃಷಿಗೆ ಕಂಟಕ; ಆಹಾರ ಉತ್ಪಾದನೆ ಕುಂಠಿತ

    ಇಂದು ಘೋಷಣೆ ಸಾಧ್ಯತೆ

    ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯ ಬಗ್ಗೆ ಚರ್ಚೆಯಾಗಲಿದೆ. ಬಳಿಕ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಗ್ಯಾರಂಟಿ ಯೋಜನೆಗಳನ್ನು ಅಧಿಕೃತವಾಗಿ ಜಾರಿಗೊಳಿಸುವ ಸಾಧ್ಯತೆ ಇದೆ. ಕಳೆದ ಸಚಿವ ಸಂಪುಟದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಸಿಎಂ ಸಿದ್ದರಾಮಯ್ಯ ಅವರು ತಾತ್ವಿಕ ಅನುಮೋದನೆಯನ್ನು ಪಡೆದುಕೊಂಡು ಆದೇಶಗಳನ್ನು ಹೊರಡಿಸಿದರು.

    ಆಂಬುಲೆನ್ಸ್ ಟೆಂಡರ್ ಬ್ಲಂಡರ್; ನಿಯಮಗಳನ್ನೇ ಬದಲಾಯಿಸಿದ ಆರೋಗ್ಯ ಇಲಾಖೆ ಅಧಿಕಾರಿ

    1.57 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ; ಕಳೆದ ವರ್ಷಕ್ಕಿಂತ ಶೇ. 12 ಅಧಿಕ | ಕರ್ನಾಟಕದ ತೆರಿಗೆ ಸಂಗ್ರಹವೂ ಹೆಚ್ಚಳ

    ರಾಮಲಲ್ಲಾ ಪ್ರಾಣಪ್ರತಿಷ್ಠೆ ಉತ್ಸವ; ಡಿಸೆಂಬರ್ ಅಥವಾ ಜನವರಿಯಲ್ಲಿ ಕಾರ್ಯಕ್ರಮ | ಪ್ರಧಾನಿ ಮೋದಿ ಭಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts