More

    1.57 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ; ಕಳೆದ ವರ್ಷಕ್ಕಿಂತ ಶೇ. 12 ಅಧಿಕ | ಕರ್ನಾಟಕದ ತೆರಿಗೆ ಸಂಗ್ರಹವೂ ಹೆಚ್ಚಳ

    ನವದೆಹಲಿ: ಮೇ ತಿಂಗಳಲ್ಲಿ ಒಟ್ಟು 1,57,090 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹಿಸಲಾಗಿದ್ದು ಕಳೆದ ವರ್ಷದ ಇದೇ ಮಾಸಿಕಕ್ಕಿಂತ ಶೇ.12ರಷ್ಟು ಹೆಚ್ಚಳ ವಾಗಿದೆ. ಕಳೆದ ಸತತ 14 ತಿಂಗಳಿಂದ 1.4 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಜಿಎಸ್​ಟಿ ಸಂಗ್ರಹವಾಗುತ್ತಿರುವುದು ವಿಶೇಷವಾಗಿದೆ. ಜಿಎಸ್​ಟಿ ಪದ್ಧತಿ ಆರಂಭವಾದಾಗಿ ನಿಂದ ಜಿಎಸ್​ಟಿ ಆಕರಣೆ ಐದನೇ ಸಲ 1.5 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ದಾಟಿದೆ.

    ಸಂಗ್ರಹವಾದ ಒಟ್ಟು 1,57,090 ಕೋಟಿ ರೂಪಾಯಿಯಲ್ಲಿ ಕೇಂದ್ರ ಜಿಎಸ್​ಟಿ (ಸಿಜಿಎಸ್​ಟಿ) 28,411 ಕೋಟಿ ರೂ., ರಾಜ್ಯಗಳ ಜಿಎಸ್​ಟಿ (ಎಸ್​ಜಿಎಸ್​ಟಿ) 35,828 ಕೋಟಿ ರೂ. ಹಾಗೂ ಸಮಗ್ರ ಜಿಎಸ್​ಟಿ (ಐಜಿಎಸ್​ಟಿ) 81,363 ಕೋಟಿ ರೂ. ಆಗಿದೆ. ಐಜಿಎಸ್​ಟಿಯ ಮೊತ್ತದಲ್ಲಿ ಸರಕುಗಳ ಆಮದಿನ ಮೇಲಿನ 41,772 ಕೋಟಿ ರೂ. ತೆರಿಗೆ ಒಳಗೊಂಡಿದೆ. ಸರಕುಗಳ ಆಮದಿನ ಮೇಲಿನ 1,057 ಕೋಟಿ ರೂಪಾಯಿ ಸಹಿತ 11,489 ಕೋಟಿ ರೂಪಾಯಿ ಸೆಸ್ ಮೇ ಮಾಸದಲ್ಲಿ ಸಂಗ್ರಹವಾಗಿದೆ. ಕೇಂದ್ರ ಸರ್ಕಾರ ಸಿಜಿಎಸ್​ಟಿಗೆ 35,369 ಕೋಟಿ ರೂಪಾಯಿ ಇತ್ಯರ್ಥಪಡಿಸಿದೆ ಹಾಗೂ ಐಜಿಎಸ್​ಟಿಯಿಂದ ಎಸ್​ಜಿಎಸ್​ಟಿಗೆ 29,769 ಕೋಟಿ ರೂ. ನೀಡಿದೆ. ನಿಯಮಿತ ಪಾವತಿಗಳ ನಂತರ 2023 ಮೇ ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯ ಸಿಜಿಎಸ್​ಟಿ ಬಾಬ್ತು 63,780 ಕೋಟಿ ರೂ. ಹಾಗೂ ಎಸ್​ಜಿಎಸ್​ಟಿ ಬಾಬ್ತು 65,597 ಕೋಟಿ ರೂ. ಆಗಿದೆ.

    ಕರ್ನಾಟಕದ ಸಂಗ್ರಹ ಏರಿಕೆ

    2022 ಮೇ ತಿಂಗಳಲ್ಲಿ ಕರ್ನಾಟಕದ ಜಿಎಸ್​ಟಿ ಆದಾಯ 9,232 ಕೋಟಿ ರೂಪಾಯಿ ಇದ್ದದ್ದು ಈ ವರ್ಷ ಮೇ ಮಾಹೆಯಲ್ಲಿ 10,317 ಕೋಟಿ ರೂಪಾಯಿ ಆಗಿದೆ. ಇದು ಶೇಕಡ 12 ಬೆಳವಣಿಗೆಯನ್ನು ತೋರಿಸುತ್ತದೆ.

    ವಿಮಾ ವಾಹಕರ ಮಾರ್ಗಸೂಚಿ ಪ್ರಕಟ

    ನವದೆಹಲಿ: ಬಿಮಾ ವಾಹಕರ (ಬಿವಿ) ಗ್ರಾಮ ಪಂಚಾಯತಿ ಮಟ್ಟದ ವಿತರಣಾ ಜಾಲವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್​ಡಿಎಐ) ಗುರುವಾರ ಬಿಮಾ ವಾಹಕರ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ವಿತರಣಾ ಜಾಲವನ್ನು ಕಾರ್ಪೆರೇಟ್ ವಿಮಾ ವಾಹಕರು ಮತ್ತು ವೈಯಕ್ತಿಕ ವಿಮಾ ವಾಹಕರೆಂದು ವಿಂಗಡಿಸಲು ಕರಡು ಮಾರ್ಗಸೂಚಿಯಲ್ಲಿ ಪ್ರಸ್ತಾಪನೆ ಮಂಡಿಸಲಾಗಿದೆ. ಕಾರ್ಪೆರೇಟ್ ಮತ್ತು ವೈಯಕ್ತಿಕ ಬಿಮಾ ವಾಹಕರಿಬ್ಬರಿಗೂ ಪ್ರಸ್ತಾಪನೆ ಮಾಹಿತಿ ಸಂಗ್ರಹ, ಕೆವೈಸಿ ದಾಖಲೆಗಳ ಸಂಗ್ರಹ ಮತ್ತು ಕ್ಲೇಮುಗಳ ಸಂಬಂಧ ಸೇವೆಗಳ ಸಮನ್ವಯ ಮುಂತಾದ ಚಟುವಟಿಕೆಗಳನ್ನು ನಡೆಸಲು ಅಧಿಕಾರ ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts