More

    ಗ್ರಾಹಕರ ಗಮನಕ್ಕೆ: ಜೂನ್ ತಿಂಗಳಲ್ಲಿ 12 ದಿನ ಬ್ಯಾಂಕ್​ ರಜೆ, ಇಲ್ಲಿದೆ ಸಂಪೂರ್ಣ ಪಟ್ಟಿ..

    ದೆಹಲಿ: ಪ್ರತಿ ಹೊಸ ತಿಂಗಳು ಆರಂಭವಾಗುವ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕ್​ಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಮೇ ತಿಂಗಳು ಮುಕ್ತಾಯವಾಗಲು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು, ಆರ್​ಬಿಐ ಜೂನ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಕೆರಾಡಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಮಾರ್ಕೆಟಿಂಗ್ ಕ್ಷೇತ್ರಕ್ಕೂ ಕಾಲಿಟ್ಟ ರಿಷಬ್ ಶೆಟ್ಟಿ!

    ಜೂನ್​ ತಿಂಗಳ ರಜಾ ಪಟ್ಟಿಯ ಪ್ರಕಾರ ಭಾರತದಲ್ಲಿ ಒಟ್ಟು 12 ದಿನಗಳು ಬ್ಯಾಂಕ್​ಗಳು ರಜೆ ಇರಲಿವೆ. ವಾರದ ರಜೆ, ರಾಜ್ಯಗಳ ಪ್ರಾದೇಶಿಕ ರಜೆ ಹಾಗೂ ಹಬ್ಬಗಳಿಗನುಗುಣವಾಗಿ ಆರ್​ಬಿಐ ಬಿಡುಗಡೆ ಮಾಡಿರುವ ಮುಂದಿನ ತಿಂಗಳ ರಜಾ ದಿನಗಳ ಪಟ್ಟಿ ಇಂತಿದೆ:

    ಜೂನ್ 4: ಮೊದಲನೇ ಭಾನುವಾರ
    ಜೂನ್ 10: ಎರಡನೇ ಶನಿವಾರ
    ಜೂನ್ 11: ಎರಡನೇ ಭಾನುವಾರ.
    ಜೂನ್ 15: YMA ದಿನ/ರಾಜ ಸಂಕ್ರಾಂತಿಯಂದು ಐಜ್ವಾಲ್ ಮತ್ತು ಭುವನೇಶ್ವರ್‌ನಲ್ಲಿರುವ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.
    ಜೂನ್ 18: ಮೂರನೇ ಭಾನುವಾರ
    ಜೂನ್ 20: ರಥ ಯಾತ್ರಾ ಕಾರಣದಿಂದ ಭುವನೇಶ್ವರ ಮತ್ತು ಇಂಫಾಲ್‌ನಲ್ಲಿನ ಬ್ಯಾಂಕ್‌ ಮುಚ್ಚಲ್ಪಡುತ್ತವೆ.
    ಜೂನ್ 24: ನಾಲ್ಕನೇ ಶನಿವಾರ.
    ಜೂನ್ 25: ತಿಂಗಳ ನಾಲ್ಕನೇ ಭಾನುವಾರ.
    ಜೂನ್ 26: ಖಾರ್ಚಿ ಪೂಜೆಯ ನಿಮಿತ್ತ ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
    ಜೂನ್ 28: ಬಕ್ರೀದ್ ನಿಮಿತ್ತ ಜಮ್ಮು, ಕೇರಳ, ಮಹಾರಾಷ್ಟ್ರ ಹಾಗೂ ಕಾಶ್ಮೀರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
    ಜೂನ್ 29: ಬಕ್ರೀದ್​ ನಿಮಿತ್ತ ದೇಶದ ಹಲವು ರಾಜ್ಯಗಳಲ್ಲಿ ಬ್ಯಾಂಕ್​ಗಳು ಬಂದ್​ ಇರಲಿವೆ.
    ಜೂನ್ 30: ರೆಮ್ನಾನಿ/ಈದ್-ಉಲ್-ಜುಹಾದ ಹಿನ್ನೆಲೆಯಲ್ಲಿ ಮಿಜೋರಾಂ, ಒಡಿಶಾದಲ್ಲಿ ಬ್ಯಾಂಕ್ ಮುಚ್ಚಲ್ಪಡುತ್ತವೆ.

    ಈ ರಜೆಗಳು ಪ್ರಾದೇಶಿಕಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತವೆ ಎಂಬುದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts