ಸಿನಿಮಾ

ಕೆರಾಡಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಮಾರ್ಕೆಟಿಂಗ್ ಕ್ಷೇತ್ರಕ್ಕೂ ಕಾಲಿಟ್ಟ ರಿಷಬ್ ಶೆಟ್ಟಿ!

ಬೆಂಗಳೂರು: ಯಶಸ್ವಿ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ, ಚಲನಚಿತ್ರ ನಿರ್ಮಾಣದ ಮತ್ತೊಂದು ಆಯಾಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಬಾರಿ ರಿಷಭ್ ಶೆಟ್ರು ಕೆರಾಡಿ ಸ್ಟುಡಿಯೋಸ್ ಎಂಬ ವೇದಿಕೆಯ ಮೂಲಕ ಚಲನಚಿತ್ರಗಳ ಮಾರ್ಕೆಟಿಂಗ್ ಮತ್ತು ಪ್ರಚಾರ ಸೇವೆಗಳಲ್ಲಿ ತಮ್ಮ ಉಪಸ್ಥಿತಿಯನ್ನು ತೋರಿಸಿಕೊಳ್ಳಲಿದ್ದಾರೆ.

ರಿಷಭ್ ಶೆಟ್ಟಿ ಬುಧವಾರ ಏನೋ ದೊಡ್ಡದನ್ನು ಮಾಡಲಿದ್ದು ಗುರುವಾರ ಅಧಿಕೃತವಾಗಿ ಘೋಷಿಸುವುದಾಗಿ ಹೇಳಿದ್ದರು. ಅದರಂತೆ, ಇದೀಗ ಕೆರಾಡಿ ಸ್ಟುಡಿಯೋಸ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

‘ಯಶಸ್ಸನ್ನು ಸಾಧಿಸಲು ಚಲನಚಿತ್ರ ನಿರ್ಮಾಣದಷ್ಟೇ ಮಾರ್ಕೆಟಿಂಗ್ ಕೂಡ ಮುಖ್ಯವಾಗಿದೆ. ಚಲನಚಿತ್ರಗಳನ್ನು ನಿರ್ಮಿಸುವಲ್ಲಿ ಮತ್ತು ಅವುಗಳನ್ನು ಉತ್ತೇಜಿಸುವಲ್ಲಿ ನಮ್ಮ ಅನುಭವದೊಂದಿಗೆ ನಮ್ಮ ತಂಡವು ಇದೀಗ ಕೆರಾಡಿ ಸ್ಟುಡಿಯೋಸ್ ಎಂಬ ವೇದಿಕೆಯ ಮೂಲಕ ಚಲನಚಿತ್ರಗಳಿಗೆ ಮಾರ್ಕೆಟಿಂಗ್ ಮತ್ತು ಪ್ರಚಾರ ಸೇವೆಗಳನ್ನು ನೀಡಲು ಪ್ರಾರಂಭಿಸಿದೆ. ಈ ಪ್ಲಾಟ್ ಫಾರ್ಮ್ ಅದ್ಭುತ ಚಲನಚಿತ್ರಗಳನ್ನು ಪ್ರೇಕ್ಷಕರೊಂದಿಗೆ ಸಂಪರ್ಕಿಸುತ್ತದೆ. ಜನರ ಮತ್ತು ನಿರ್ಮಾಪಕರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ನಂಬುತ್ತೇವೆ” ಎಂದು ರಿಷಬ್ ಶೆಟ್ಟಿ ಹೇಳಿದರು.

ಇದನ್ನೂ ಓದಿ: ಜಿನೀವಾದಲ್ಲಿ ಕಾಂತಾರ ವಿಶೇಷ ಪ್ರದರ್ಶನ; ಜಾಗತಿಕ ದಿಗ್ಗಜರೊಂದಿಗೆ ರಿಷಭ್ ಶೆಟ್ಟಿ!

ರಿಷಭ್ ಬೆಳೆದ ಸ್ಥಳ ಕೆರಾಡಿ ಮತ್ತು ಇದು ಯಾವಾಗಲೂ ಅವರ ಹೃದಯಕ್ಕೆ ಹತ್ತಿರವಾಗಿದೆ ಎಂದು ನಟ ಹೇಳುತ್ತಾರೆ. ‘ಸಿನಿಮಾದ ಬಗ್ಗೆ ನನ್ನ ಉತ್ಸಾಹ ಪ್ರಾರಂಭವಾದದ್ದು ಇಲ್ಲಿಂದಲೇ. ಈ ಹೊಸ ಯೋಜನೆಯನ್ನು ಅದಕ್ಕೆ ಸಮರ್ಪಿಸುವ ಮೂಲಕ, ಚಲನಚಿತ್ರೋದ್ಯಮಕ್ಕೆ ನಮ್ಮ ಉಪಯುಕ್ತ ಸೇವೆಯನ್ನು ನೀಡುತ್ತೇವೆ ” ಎಂದು ನಟ-ನಿರ್ದೇಶಕರು ಹೇಳುತ್ತಾರೆ.

ರಿಷಭ್ ಶೆಟ್ಟಿ ಕಳೆದ ವರ್ಷ ಬಿಡುಗಡೆಯಾದ ಬ್ಲಾಕ್ಬಸ್ಟರ್ ಚಿತ್ರದ ಮುಂದುವರಿದ ಭಾಗವಾದ ‘ಕಾಂತಾರಾ 2’ ಚಿತ್ರದ ಸ್ಕ್ರಿಪ್ಟ್ನಲ್ಲಿ ನಿರತರಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಿ 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಿನಿಮಾ ಬಿಡುಗಡೆಯಾಗಿ 3 ತಿಂಗಳಾದ್ಮೇಲೆ ಕಾಂತಾರ ಕ್ಲೈಮ್ಯಾಕ್ಸ್​ನ ಅಸಲಿ ಸತ್ಯ ಬಿಚ್ಚಿಟ್ಟ ರಿಷಭ್​ ಶೆಟ್ಟಿ!

 

Latest Posts

ಲೈಫ್‌ಸ್ಟೈಲ್