More

    ಎರಡು ಹೃದಯಗಳನ್ನು ಒಂದು ಮಾಡಿದ ಹಾವು! ಯುವಕ-ಯುವತಿಯ ಪ್ರೀತಿಗೆ ಉರಗನ ನಂಟು

    ನವದೆಹಲಿ: ಮದುವೆಗೂ ಮುನ್ನ ಅಥವಾ ನಂತರ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋ ಮತ್ತು ವಿಡಿಯೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ.

    ಇತ್ತೀಚೆಗೆ ನವಜೋಡಿಯೊಂದು ವಿಷಕಾರಿ ನಾಗರಹಾವಿನ ಜತೆ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹಾವಿನಿಂದ ಎರಡು ಹೃದಯ ಹೇಗೆ ಒಂದಾಗುತ್ತವೆ ಎಂಬ ಕಲ್ಪನೆಯಲ್ಲಿ ಈ ಫೋಟೋಶೂಟ್​ ಮೂಡಿಬಂದಿದ್ದು, ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

    ಇದನ್ನೂ ಓದಿ: ಆಂಬುಲೆನ್ಸ್ ಟೆಂಡರ್ ಬ್ಲಂಡರ್; ನಿಯಮಗಳನ್ನೇ ಬದಲಾಯಿಸಿದ ಆರೋಗ್ಯ ಇಲಾಖೆ ಅಧಿಕಾರಿ

    ವಿಡಿಯೋದಲ್ಲಿ ಏನಿದೆ?

    ಯುವತಿ ತಮ್ಮ ಮನೆಯ ಬಳಿ ನಾಗರಹಾವೊಂದನ್ನು ನೋಡಿ, ಹೆದರಿ ತಕ್ಷಣ ಹಾವು ರಕ್ಷಿಸುವವರಿಗೆ ಕರೆ ಮಾಡುತ್ತಾಳೆ. ಇದೇ ವೇಳೆ ಇಬ್ಬರು ಸ್ಕೂಟರ್​ನಲ್ಲಿ ಬರುತ್ತಾರೆ. ಅದರಲ್ಲಿ ಓರ್ವ ಯುವಕ, ಯುವತಿಯನ್ನು ನೋಡಿ ನಗುಬೀರುತ್ತಾನೆ. ಬಳಿಕ ಅವರು ಹಾವನ್ನು ಹಿಡಿದು ಬಾಕ್ಸ್​ ಒಳಗೆ ಹಾಕಿಕೊಳ್ಳುತ್ತಾರೆ. ಹಾವನ್ನು ಅಲ್ಲಿಂದ ತೆಗೆದುಕೊಂಡು ಹೋಗುವಾಗ ಕರೆ ಮಾಡುವಂತೆ ಯುವತಿಗೆ ಯುವಕ ಸಿಗ್ನಲ್​ ನೀಡುತ್ತಾನೆ. ಬಳಿಕ ಇಬ್ಬರು ಫೋನ್​ ಮೂಲಕ ಮಾತನಾಡಲು ಆರಂಭಿಸಿ, ಪ್ರೀತಿಯಲ್ಲಿ ಬೀಳುತ್ತಾರೆ. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.

    ಇದು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ವಿಡಿಯೋವನ್ನು ಆಸ್ಕರ್​ಗೆ ಆಯ್ಕೆ ಮಾಡಬೇಕೆಂದು ನೆಟ್ಟಿಗರೊಬ್ಬರು ಹಾಸ್ಯಚಟಾಕಿ ಹಾರಿಸಿದ್ದಾರೆ. ಟ್ವಿಟರ್​ನಲ್ಲಿ ನಾನು ನೋಡಿದ ಉತ್ತಮ ಫೋಟೋಗಳಿವು ಎಂದು ಮತ್ತೊಬ್ಬ ನೆಟ್ಟಿಗ ಪ್ರಶಂಸಿಸಿದ್ದಾರೆ. (ಏಜೆನ್ಸೀಸ್​)

    ಈ ಕೆಳಗಿನ ಸರಣಿ ಟ್ವೀಟ್​ನಲ್ಲಿ ಫೋಟೋಶೂಟ್​ ಕಲ್ಪನೆ ಅನಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts