More

    AC ಇಲ್ಲದ ಕೋಣೆಯನ್ನು ಹೆರಿಗೆಗೆ ಬುಕ್ ಮಾಡಿದ್ದಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ!

    ಉತ್ತರಪ್ರದೇಶ: AC ಇಲ್ಲದೆ ಆಸ್ಪತ್ರೆಯ ಕೊಠಡಿಯಲ್ಲಿ ತಮ್ಮ ಮಗಳಿಗೆ ಹೆರಿಗೆ ಮಾಡಿಸಿದ್ದಕ್ಕೆ ಕೋಪಗೊಂಡ ಯುವತಿಯ ಕುಟುಂಬಸ್ಥರು ಉತ್ತರಪ್ರದೇಶದ ಬಾರಾಬಂಕಿ ಎಂಬ ಪ್ರದೇಶದಲ್ಲಿ ಅಳಿಯನ ಕುಟುಂಬಸ್ಥರಿಗೆ ಥಳಿಸಿದ್ದಾರೆ.

    ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ, ಯಾರಾದರೂ ಹೆದರಿಸಲು ಸಾಧ್ಯವೇ?: ಯೋಗಿ ಆದಿತ್ಯನಾಥ್​

    AC ವಿಚಾರಕ್ಕೆ ಆಕ್ರೋಶಗೊಂಡ ಯುವತಿಯ ತವರು ಮನೆಯವರು ಆಕೆಯ ಗಂಡನ ತಂದೆ-ತಾಯಿ ಮತ್ತು ಸಹೋದರಿಯರನ್ನು ಥಳಿಸಿದ್ದಾರೆ. ಇದು ಎರಡು ಗುಂಪಿನ ನಡುವೆ ಪೂರ್ಣ ಪ್ರಮಾಣದ ಜಗಳಕ್ಕೆ ಕಾರಣವಾಯಿತು. ಈ ಹೊಡೆದಾಟವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಜನರು ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡುತ್ತಿರುವುದು ಕಂಡು ಬಂದಿದೆ.

    ಹೆರಿಗೆಗೆಂದು ತಮ್ಮ ಸೊಸೆಯನ್ನು ಬಾರಾಬಂಕಿಯ ಸಿವಿಲ್ ಲೈನ್ಸ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಈ ಕುಟುಂಬ ದಾಖಲಿಸಿತ್ತು. ಹೆರಿಗೆಗೆ ಸಂಬಂಧಿಸಿದ ಎಲ್ಲ ವೆಚ್ಚವನ್ನು ತಾವೇ ಭರಿಸಿರುವುದಾಗಿ ಮಹಿಳೆಯ ಮಾವ ರಾಮ್‌ಕುಮಾರ್ ತಿಳಿಸಿದ್ದಾರೆ.

    ಇದನ್ನೂ ಓದಿ: ಸದ್ಗುರು ಮಣ್ಣು ರಕ್ಷಿಸಿ ಅಭಿಯಾನಕ್ಕೆ ಕೈಜೋಡಿಸಿದ ಉತ್ತರಪ್ರದೇಶ; ಈಶ ಔಟ್​ರೀಚ್​ ಒಪ್ಪಂದಕ್ಕೆ ಸಹಿ..

    ಆದರೆ, ಹುಡುಗಿಯ ಪೋಷಕರು ಮತ್ತು ಸಂಬಂಧಿಕರು ತಮ್ಮ ಮಗಳನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಾಗ, ಅವರು ಹವಾನಿಯಂತ್ರಿತ ಕೊಠಡಿ ವ್ಯವಸ್ಥೆ ಮಾಡಲಿಲ್ಲ ಎಂದು ಕಾರಣ ನೀಡಿ ರಾಮ್​ಕುಮಾರ್​ರನ್ನು ನಿಂದಿಸಲು ಪ್ರಾರಂಭಿಸಿದರು. ಅವರು ಮರುಪ್ರಶ್ನೆ ಮಾಡಿದಾಗ, ಜಗಳ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts