ಕಾಡಾನೆ ದಾಳಿಗೆ ರೈತ ಮತ್ತು ಕೂಲಿ ಕಾರ್ಮಿಕ ದುರ್ಮರಣ, ಭೀಕರ ದೃಶ್ಯಕ್ಕೆ ಬೆಚ್ಚಿಬಿದ್ದ ಸ್ಥಳೀಯರು

Elephant attack
Published on

ಚಾಮರಾಜನಗರ/ ಹಾಸನ: ಕಾಡಾನೆ ದಾಳಿಗೆ ರೈತ ಮತ್ತು ಕೂಲಿ ಕಾರ್ಮಿಕ ಸೇರಿ ಇಬ್ಬರು ಬಲಿಯಾಗಿದ್ದಾರೆ.

ಚಾಮರಾಜನಗರ ತಾಲೂಕಿನ ಯಣಗುಂಬ ಗ್ರಾಮದ ರೈತ ಸ್ವಾಮಿ(61), ಹಾನಸ ಜಿಲ್ಲೆ ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ಕೂಲಿ ಕಾರ್ಮಿಕ ರಾಜನ್ (45) ಮೃತ ದುರ್ದೈವಿಗಳು. ಇದನ್ನೂ ಓದಿರಿ ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

ಚಾಮರಾಜನಗರದಲ್ಲಿ ರೈತ ಸ್ವಾಮಿ ಮುಸುಕಿನ ಜೋಳ ಬೆಳೆದಿದ್ದರು. ಕಾಡುಪ್ರಾಣಿ ದಾಳಿಯಿಂದ ಬೆಳೆ ರಕ್ಷಿಸಲು ಶನಿವಾರ ರಾತ್ರಿ ಜಮೀನಿನ ಬಳಿ ಠಿಕಾಣಿ ಹೂಡಿದ್ದರು/ ರಾತ್ರಿ 11.30ರ ಸುಮಾರಿನಲ್ಲಿ ಅವರನ್ನ ಕಾಡಾನೆ ತುಳಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಇನ್ನು ಹಾಸನ ಜಿಲ್ಲೆಯ ಲಕ್ಕುಂದ ಗ್ರಾಮದ ಸುಲ್ತಾನ್ ಎಸ್ಟೇಟ್​ನಲ್ಲೂ ಶನಿವಾರ ರಾತ್ರಿ ಇಂತಹದ್ದೇ ಅವಘಡ ಸಂಭವಿಸಿದ್ದು, ಕಾಫಿ ತೋಟದಲ್ಲಿ ಮೆಣಸು ಕಾಯುತಿದ್ದ ಕೇರಳ ಮೂಲದ ಕಾರ್ಮಿಕ ರಾಜನ್​ ಆನೆ ದಾಳಿಗೆ ಬಲಿಯಾಗಿದ್ದಾರೆ. ಕಾಡಾನೆ ತುಳಿತಕ್ಕೆ ಕೂಲಿಕಾರ್ಮಿಕನ ದೇಹ ಅಪ್ಪಚ್ಚಿ ಆಗಿದೆ.

ಇವರಿಬ್ಬರ ದುರಂತ ಸಾವನ್ನು ಕಂಡ ಸ್ಥಳೀಯರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net