ಹಂಸಲೇಖಗೆ ಅನಾರೋಗ್ಯ: ಸ್ವಲ್ಪ ಕಾಲಾವಕಾಶ ಕೊಡಿ ಎಂದು ವಕೀಲರ ಕೋರಿಕೆ

1192467
Published on

ಬೆಂಗಳೂರು: ಪೇಜಾವರ ಶ್ರೀವಿಶ್ವೇಶತೀರ್ಥರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಚಿತ್ರಸಾಹಿತಿ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು ಒಂದು ವರ್ಗದ ಜನರಿಂದ ತೀವ್ರ ವಿರೋಧವನ್ನು ಎದುರಿಸುವಂತಾಗಿದೆ. ಮಾತ್ರವಲ್ಲ ಅವರ ವಿರುದ್ಧ ದೂರುಗಳೂ ದಾಖಲಾಗಿವೆ.

ಅಂಥದ್ದೇ ಒಂದು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹಂಸಲೇಖಗೆ ನೋಟಿಸ್ ಕಳಿಸಿದ್ದಾರೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಿಂದ ಎರಡೆರಡು ಬಾರಿ ಹಂಸಲೇಖ ಅವರಿಗೆ ನೋಟಿಸ್ ಕಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಬಸವನಗುಡಿ ಪೊಲೀಸ್ ಠಾಣೆಯಿಂದ ಹಂಸಲೇಖ ಅವರಿಗೆ ಎರಡು ದಿನಗಳ ಹಿಂದೆ ಎರಡನೇ ನೋಟಿಸ್ ಜಾರಿಯಾಗಿತ್ತು.

ಆದರೆ ಈ ಸಂಬಂಧ ವಿಚಾರಣೆಗೆ ತೆರಳದಿರುವ ಹಂಸಲೇಖ, ಠಾಣೆಗೆ ಹಾಜರಾಗಲು ಸ್ವಲ್ಪ ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಹಂಸಲೇಖ ಅವರು ಅನಾರೋಗ್ಯಕ್ಕೀಡಾಗಿದ್ದು, ಸ್ವಲ್ಪ ಕಾಲಾವಕಾಶ ಕೊಡಿ. ನ. 25ರಂದು ಅವರು ಠಾಣೆಗೆ ಹಾಜರಾಗಿ ವಿಚಾರಣೆಗೆ ಸಹಕರಿಸುತ್ತಾರೆ ಎಂದು ಕೋರಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net