ಹುಲಿ ಗಣತಿಗೆ ಹೋಗಿದ್ದ ಅರಣ್ಯ ರಕ್ಷಕಿ, ಹೆಣ್ಣು ಹುಲಿಗೆ ಬಲಿ; ಕರ್ತವ್ಯದಲ್ಲಿದ್ದಾಗಲೇ ಸಾವಿಗೀಡಾದ ಫಾರೆಸ್ಟ್ ಗಾರ್ಡ್​

Swathi Dumane
Published on

ಮಹಾರಾಷ್ಟ್ರ: ಇದು ವನ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುವವರೇ ವನ್ಯಪ್ರಾಣಿಗೆ ಬಲಿಯಾದಂಥ ದುರಂತ ಪ್ರಕರಣ. ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ದುಮಾನೆ ಎಂಬಾಕೆ ಮೃತಪಟ್ಟವರು.

ಫಾರೆಸ್ಟ್ ಗಾರ್ಡ್​ ಆಗಿ ಕರ್ತವ್ಯದಲ್ಲಿದ್ದ ಇವರು ಅಖಿಲ ಭಾರತ ಹುಲಿ ಗಣತಿ ಕಾರ್ಯದಲ್ಲಿ ತೊಡಗಿದ್ದರು. ಆ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದ ಟಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಇವರು ಕರ್ತವ್ಯನಿರತರಾಗಿದ್ದರು.

ಹುಲಿ ಗಣತಿಯ ಕಾರ್ಯದಲ್ಲಿ ತೊಡಗಿದ್ದ ಫಾರೆಸ್ಟ್ ಗಾರ್ಡ್ ಮೇಲೆ ಹೆಣ್ಣು ಹುಲಿಯೊಂದು ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಸ್ವಾತಿ ದುಮಾನೆ ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net