More

  ಕತಾರ್​ನಲ್ಲಿ ವಿಕ್ರಂ ಸೂರಿ-ನಮಿತಾ ರಾವ್ ದಂಪತಿಯಿಂದ ನೃತ್ಯ ಪ್ರದರ್ಶನ

  ಕತಾರ್: ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುವ ಕಾರ್ಯ ಮಾಡುತ್ತಾ ಬರುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್​​ ಇತ್ತೀಚೆಗೆ ‘ಬುಧವಾರ ಉತ್ಸವ’ ಎಂಬ ಕಲಾ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿತ್ತು.

  ಈ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟ, ನೃತ್ಯ ಕಲಾವಿದ ವಿಕ್ರಮ ಸೂರಿ ಮತ್ತು ನಮಿತಾ ರಾವ್ ದಂಪತಿ ನೃತ್ಯ ಕಾರ್ಯಕ್ರಮ ಪ್ರಸ್ತುತ ಪ್ರಸ್ತುತ ಪಡಿಸಿದರು.

  ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ನಡೆದ ನೃತ್ಯ ಪ್ರದರ್ಶನ ನಡೆಯಿತು. ವಿಕ್ರಮ್ ಸೂರಿ-ನಮಿತಾ ರಾಮ್ ದಂಪತಿ ನೀಡಿದ ಅಮೋಘ ಪ್ರದರ್ಶನ ನೆರಿದಿದ್ದ ಎಲ್ಲ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

  ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠ ಮತ್ತು ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ ವಿಕ್ರಮ್ ಸೂರಿ ಮತ್ತು ನಮಿತಾ ರಾವ್ ಅವರನ್ನು ಕತಾರ್​ನಲ್ಲಿರುವ ಭಾರತೀಯರ ಪರವಾಗಿ ಸನ್ಮಾನಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts